ಬೆಂಗಳೂರು : ಹಲಗೆವಡೇರಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಪದೇ ಪದೇ ಗೈರು ಹಾಜರಾಗುತ್ತಿದ್ದಾರೆ.
ಕೊರೋನಾ ನಿಯಮಗಳನ್ನು ಉಲ್ಲಂಘಿಸಿ ಊರೆಲ್ಲಾ ಸುತ್ತಾಡುತ್ತಿರುವ ಕುಮಾರಸ್ವಾಮಿ ನ್ಯಾಯಾಲಯಕ್ಕೆ ಮಾತ್ರ ಹಾಜರಾಗುತ್ತಿರಲಿಲ್ಲ. ಖುದ್ದು ಹಾಜರಾತಿಗೆ ಸಮನ್ಸ್ ಕೊಟ್ಟರೂ ಮಾಜಿ ಸಿಎಂ ಅದಕ್ಕೆ ಕ್ಯಾರೇ ಅನ್ನುತ್ತಿರಲಿಲ್ಲ.
ಇದೀಗ ಕುಮಾರಸ್ವಾಮಿ ವರ್ತನೆಯಿಂದ ಬೇಸತ್ತ ನ್ಯಾಯಾಧೀಶ ಶ್ರೀಧರ್ ಗೋಪಾಲಕೃಷ್ಣ ಭಟ್ ಚಾಟಿ ಬೀಸಿದ್ದಾರೆ.
ಗುರುವಾರ ನಡೆದ ವಿಚಾರಣೆ ವೇಳೆ ಕುಮಾರಸ್ವಾಮಿ ಗೈರು ಹಾಜರಿಯನ್ನು ನ್ಯಾಯಮೂರ್ತಿಗಳು ಪ್ರಶ್ನಿಸುತ್ತಿದ್ದಂತೆ, ಕೊರೋನಾ ಕಾರಣದಿಂದ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಅನ್ನುವ ಉತ್ತರ ಕುಮಾರಸ್ವಾಮಿ ಪರ ವಕೀಲರಿಂದ ಬಂದಿದೆ.
ಈ ಉತ್ತರದಿಂದ ಕೆಂಡಾಮಂಡಲರಾದ ನ್ಯಾಯಮೂರ್ತಿಗಳು ನಾನು ಟಿವಿ ನೋಡುತ್ತೇನೆ ಪತ್ರಿಕೆ ಓದುತ್ತೇನೆ, ಎಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುತ್ತೇನೆ, ಹೀಗಾಗಿ ಎಚ್ಡಿಕೆ ಎಲ್ಲಾದ್ರೂ ಕಾಣಿಸಿಕೊಂಡ್ರೆ ಆರೆಸ್ಟ್ ವಾರೆಂಟ್ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನ್ಯಾಯಾಧೀಶರ ಈ ಆದೇಶದಿಂದ ಕುಮಾರಸ್ವಾಮಿ ಉಪಚುನಾವಣೆ ಪ್ರಚಾರದಿಂದ ದೂರವಿರಬೇಕಾದ ಅನಿವಾರ್ಯತೆ ಎದುರಾಗಿದೆ.
Discussion about this post