Xerox ನೋಟು ವಂಚಿಸುತ್ತಿರುವ ಎರಡನೇ ಪ್ರಕರಣ ಇದಾಗಿದೆ
ಕಣ್ಣಿಗೆ ಕಾಣುವಂತೆ ಅಸಲಿ ನೋಟುಗಳನ್ನು ಇಟ್ಟು ಕೆಳಗೆ Xerox ಜೆರಾಕ್ಸ್ ನೋಟುಗಳನ್ನು ಇಟ್ಟು ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಚಿಕ್ಕಪೇಟೆಯ ಸಗಟು ಉಡುಪುಗಳ ವ್ಯಾಪಾರಿ ಪ್ರೇಮ್ ಕುಮಾರ್ ಜೈನ್ ವಂಚನೆಗೆ ಒಳಗಾಗಿದ್ದು, ಈ ಸಂಬಂಧ ಕೇಂದ್ರ ಅಪರಾಧ ವಿಭಾಗ ಸಿಸಿಬಿಯಲ್ಲಿ ಜಯೇಶ್ ಮತ್ತು ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ನೀಡಲಾಗಿದ್ದು, ಪೊಲೀಸರು FIR ದಾಖಲಿಸಿದ್ದಾರೆ.
ಚಿಕ್ಕಪೇಟೆಯ ಸಗಟು ಸಿದ್ದ ಉಡುಪುಗಳ ವ್ಯಾಪಾರಿ ಪ್ರೇಮ್ ಕುಮಾರ್ ಜೈನ್ ಹೊಸ ಬಟ್ಟೆ ಸ್ಟಾಕ್ ಖರೀದಿಸಲು 25 ಲಕ್ಷ ರೂಪಾಯಿ ಅಗತ್ಯವಿದೆ ಎಂದು ಸ್ನೇಹಿತ ಬಿಪಿನ್ ಅವರಲ್ಲಿ ಸಾಲ ಕೇಳಿದ್ದರು. ಈ ವೇಳೆ ದೆಹಲಿಯಲ್ಲಿ ಮಹಿ ಅನ್ನುವ ಸ್ನೇಹಿತನ ಬಳಿ ಹಣವಿದೆ. ದೆಹಲಿಯಲ್ಲಿ ಯಾರಾದ್ರೂ ಪರಿಚಯವಿದ್ರೆ ಅವರಿಂದ ಹಣ ತರಿಸಿಕೋ ಅಂದಿದ್ದಾರೆ.
ಇದನ್ನೂ ಓದಿ : ವಿಯೆಟ್ನಾಂ ಪ್ರಧಾನಿ ಮಿನ್ ಚಿನ್ ಭಾರತ ಭೇಟಿ – ಪ್ರಧಾನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ
ಈ ವೇಳೆ ಪ್ರೇಮ್ ಕುಮಾರ್ ಗೆ ನೆನಪಾಗಿದ್ದು, ಕೆಲ ತಿಂಗಳ ಹಿಂದೆ ಪರಿಚಯವಾಗಿದ್ದ ಜಯೇಶ್ ಹೆಸರಿನ ವ್ಯಕ್ತಿ. ಹಿಂದೊಮ್ಮೆ ಕರೆ ಮಾಡಿದ್ದ ಈತ, ದೇಶದ ಯಾವುದೇ ಮೂಲೆಯಿಂದ ನಗದು ರೂಪದಲ್ಲಿ ಹಣ ತರಿಸುವುದಾದ್ರೆ ನನಗೆ ತಿಳಿಸಿ ಅಂದಿದ್ದ. ಅದರಂತೆ ಜಯೇಶ್ ಗೆ ಕರೆ ಮಾಡಿದ ಪ್ರೇಮ್ ಕುಮಾರ್ ಜೈನ್, ದೆಹಲಿಯಲ್ಲಿ ಮಹಿ ಅನ್ನುವವರಿಂದ 25 ಲಕ್ಷ ರೂಪಾಯಿ ಕಲೆಕ್ಟ್ ಮಾಡಿ ಬೆಂಗಳೂರಿಗೆ ತಲುಪಿಸಬೇಕು ಅಂದಿದ್ದಾರೆ,. ಜೊತೆಗೆ ಮಹಿ ಎಂಬವರ ಹೆಸರು ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಜಯೇಶ್ ಗೆ ನೀಡಿದ್ದಾರೆ.
ಜೂನ್ 14 ರಂದು ಸಂಜೆ ಪ್ರೇಮ್ ಕುಮಾರ್ ಗೆ ಕರೆ ಮಾಡಿದ ಜಯೇಶ್, ನಗರ್ತಪೇಟೆಯ ಜೈನ್ ಟೆಂಪಲ್ ಬಳಿ ಬರುವಂತೆ ಹೇಳಿದ್ದಾನೆ. ಅಲ್ಲಿದ್ದ ವ್ಯಕ್ತಿಯೊಬ್ಬ ನಾನೇ ಜಯೇಶ್ ಎಂದು ಪರಿಚಯಿಸಿ ತನ್ನಲ್ಲಿದ್ದ ಬ್ಯಾಗ್ ತೆರೆದು ತೋರಿಸಿ 500 ಮುಖ ಬೆಲೆಯ ನೋಟುಗಳ 10 ಬಂಡಲ್ ತೋರಿಸಿ 25 ಲಕ್ಷವಿದೆ ಅಂದಿದ್ದಾನೆ. ಸಾರ್ವಜನಿಕ ಸ್ಥಳವಾಗಿದ್ದ ಕಾರಣ ಪ್ರೇಮ್ ಕುಮಾರ್ ಬ್ಯಾಗ್ ಅನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿರಲಿಲ್ಲ,
ಇದೇ ವೇಳೆ ದೆಹಲಿಯ ಮಹಿ ಅವರಿಗೆ ಕರೆ ಮಾಡಿ 25 ಲಕ್ಷ ರೂಪಾಯಿ ತಲುಪಿದೆ ಎಂದು ತಿಳಿಸುವಂತೆ ಜಯೇಶ್ ಪ್ರೇಮ್ ಕುಮಾರ್ ಗೆ ಹೇಳಿದ್ದಾನೆ. ಅದರಂತೆ ಕರೆ ಮಾಡಿ ಹೇಳಿದ ಕೆಲವೇ ಕ್ಷಣದಲ್ಲಿ ಮಹಿ ಮನೆ ಬಾಗಿಲು ತಟ್ಟಿದ ವ್ಯಕ್ತಿ 25 ಲಕ್ಷ ರೂಪಾಯಿ ಸಂಗ್ರಹಿಸಿದ್ದಾನೆ.
Read this : ಪಂಕ್ಚರ್ ಅಂಗಡಿಯವರ ಪಾಪದ ಕೃತ್ಯ : ರಸ್ತೆಯಲ್ಲಿ ಮೊಳೆ ಹೆಕ್ಕಿದ ಟ್ರಾಫಿಕ್ ಪೊಲೀಸ್
ಆದರೆ ಮನೆಗೆ ಹೋಗಿ ಪ್ರೇಮ್ ಕುಮಾರ್ ಜೈನ್ ಬ್ಯಾಗ್ ತೆರೆದು ಪರಿಶೀಲನೆ ಮಾಡಿದ್ರೆ ಒಂದೇ ಒಂದು 500 ರೂಪಾಯಿ ಮುಖ ಬೆಲೆಯ ಅಸಲಿ ನೋಟು ಇತ್ತು, ಉಳಿದ ಎಲ್ಲಾ ನೋಟುಗಳು ಝೆರಾಕ್ಸ್ ನೋಟುಗಳಾಗಿತ್ತು. ಮೋಸ ಹೋಗಿರುವುದು ಅರಿವಾಗುತ್ತಿದ್ದಂತೆ ಸಿಸಿಬಿಯಲ್ಲಿ ದೂರು ದಾಖಲಾಗಿದೆ.
ಆದರೆ ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ತೆರಿಗೆ ಕದ್ದು ಕಳ್ಳ ಮಾರ್ಗದಲ್ಲಿ ಹಣ ಸಾಗಿಸುವ ದಂಧೆ ಬೆಂಗಳೂರಿನಲ್ಲಿ ಸಕ್ರಿಯವಾಗಿರೋದು ಪಕ್ಕಾ. ದೆಹಲಿಯ ಸ್ನೇಹಿತನಿಂದ ಬ್ಯಾಂಕ್ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದ್ರೆ ಈ ಸಮಸ್ಯೆಯೇ ಹುಟ್ಟುತ್ತಿರಲಿಲ್ಲ. ಕಾಸು ಬ್ಯಾಂಕ್ ಖಾತೆಗೆ ಬಂದ್ರೆ ತೆರಿಗೆ ಕಟ್ಟಬೇಕಲ್ವ, ಹೀಗಾಗಿಯೇ ಈ ವ್ಯಾಪಾರಿ ಅಡ್ಡ ದಾರಿ ಹಿಡಿದ್ದ ಅನ್ಸುತ್ತೆ. ಅಡ್ಡ ದಾರಿಯಲ್ಲಿ ಹೋದ ಇದೀಗ ಕೈ ಸುಟ್ಟು ಕೊಂಡಿದ್ದಾನೆ.