ಬೆಂಗಳೂರು : ರಾಜ್ಯದ ರಸ್ತೆಗಳು ನಿರ್ವಹಣೆ ಇಲ್ಲದ ಕಾರಣದಿಂದ ಗುಂಡಿ ಬಿದ್ದಿದೆ. ಗುತ್ತಿಗೆದಾರರು ತಿಂದು ಉಂಡು ತೇಗಿರುವ ಕಾರಣದಿಂದ ಜನರ ಸಂಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ಇನ್ನು ಜನಪ್ರತಿನಿಧಿಗಳು ಶೀಘ್ರದಲ್ಲೇ ಯಾವುದೇ ಚುನಾವಣೆ ಇಲ್ಲ, ಸುಮ್ನೆ ತಲೆ ಕೆಡಿಸಿಕೊಳ್ಳುವುದ್ಯಾಕೆ ಎಂದು ಮೌನ ವೃತದಲ್ಲಿದ್ದಾರೆ.
ಈ ನಡುವೆ ಕೆರೆಯಂತಾಗಿರುವ ರಸ್ತೆ ದುರಸ್ತಿಗೆ ಆಗ್ರಹಿಸಿ ಬೆಂಗಳೂರು ಅಂಜನಾಪುರ ಬಡಾವಣೆ ನಿವಾಸಿಗಳು ವಿನೂತನ ಪ್ರತಿಭಟನೆಗೆ ನಡೆಸಿದ್ದಾರೆ. ನೀರು ತುಂಬಿರುವ ರಸ್ತೆಯಲ್ಲಿ ತೆಪ್ಪದಲ್ಲಿ ಕೂತು, ಭತ್ತ ನಾಟಿ ಮಾಡುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದರು.
ಇನ್ನು ಸ್ಥಳೀಯರು ಹೇಳುವ ಪ್ರಕಾರ ಕಳೆದ 12 ವರ್ಷಗಳಿಂದ ಈ ರಸ್ತೆ ದುರಸ್ಥಿ ಭಾಗ್ಯವನ್ನೇ ಕಂಡಿಲ್ಲವಂತೆ. ಹೀಗಾಗಿ ಕನಕಪುರ ಬನ್ನೇರುಘಟ್ಟಕ್ಕೆ ಸಂಪರ್ಕ ಕಲ್ಪಿಸುವ ಸಂಪರ್ಕ ಕೊಂಡಿಯಾದ ಅಂಜನಾಪುರ ರಸ್ತೆಯಲ್ಲಿ ಓಡಾಡುವವರು ಸೊಂಟ ಮುರಿದುಕೊಳ್ಳುವಂತಾಗಿದೆ.
Discussion about this post