ಬಳ್ಳಾರಿ : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ರಾಜ್ಯ ಸರ್ಕಾರದ ಪ್ರಕಾರ ನಿಯಂತ್ರಣದಲ್ಲಿದೆ. ಆದರೆ ಸಾವಿನ ಸಂಖ್ಯೆಗಳಿಗೆ ಮಾತ್ರ ಇನ್ನೂ ಕಡಿವಾಣ ಬಿದ್ದಿಲ್ಲ. ಸೋಂಕಿತರ ಸಂಖ್ಯೆ ಕಡಿಮೆಯಾದರೂ ಸಾವಿನ ಸಂಖ್ಯೆಗ ನಿಯಂತ್ರಣಕ್ಕೆ ಬಾರದಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ನಡುವೆ ಕೊರೋನಾ ಸೋಂಕಿಗೆ ಬಲಿಯಾದ ಶಿಕ್ಷಕರೊಬ್ಬರ ಮೃತದೇಹವನ್ನು ವಿದ್ಯಾರ್ಥಿಗಳೇ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ಬಳ್ಳಾರಿಯ ಸಿರಗುಪ್ಪದಲ್ಲಿ ನಡೆದಿದೆ. ಇಲ್ಲಿನ ವಿನಾಯಕ ನಗರ ನಿವಾಸಿ ನಿವೃತ್ತ ಶಿಕ್ಷಕ ವೈ.ಈಶ್ವರಪ್ಪ (63) ಕಳೆದ ವಾರ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದರು.
ಕಳೆದ ಶನಿವಾರ ಮೃತಪಟ್ಟ ಈಶ್ವರಪ್ಪ ಅವರ ಮೃತದೇಹವನ್ನು ಹಳೆ ವಿದ್ಯಾರ್ಥಿಗಳ ಒಟ್ಟಾಗಿ ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಪಿಪಿಇ ಕಿಟ್ ಧರಿಸಿ ತನ್ನ ನೆಚ್ಚಿನ ಗುರುವಿನ ಪಾರ್ಥವ ಶರೀರಕ್ಕೆ ಗೌರವ ನಮನ ಸಲ್ಲಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ವಿದ್ಯಾರ್ಥಿಗಳ ಮಾನವೀಯತೆಯ ಕಾರ್ಯ ಇದೀಗ ಜನಮೆಚ್ಚುಗೆಗೆ ಪಾತ್ರವಾಗಿದೆ.
Discussion about this post