ಒಂದು ಚಿರತೆ ಇದೀಗ ಇಡೀ ಬೆಳಗಾವಿಯನ್ನು ಹೈರಾಣು ಮಾಡಿದೆ ( Belagavi leopard)
ಬೆಳಗಾವಿ : ಕಳೆದ ಎರಡು ವಾರಗಳಿಂದ ಬೆಳಗಾವಿಯನ್ನು ಕಾಡುತ್ತಿರುವ ಚಿರತೆ ಇದೀಗ ದೊಡ್ಡ ತಲೆನೋವು ತಂದೊಡ್ಡಿದೆ. ನಗರದ ಗಾಲ್ಫ್ ಮೈದಾನ, ಜಾಧವ ನಗರದ ಪೊದೆಯೊಳಗೆ ಕಾಣಿಸಿಕೊಂಡಿದ್ದ ಚಿರತೆ ಪತ್ತೆಗೆ ಅರಣ್ಯ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಪ್ರಾರಂಭಿಸಿತ್ತು. ಆದರೆ ಚಿರತೆ ಕಣ್ಣಾಮುಚ್ಚಾಲೆ ಆಡುತ್ತಿದೆ.( Belagavi leopard)
ಈಗಾಗಲೇ ಚಿರತೆ ಕಾರ್ಯಾಚರಣೆ ಹಿನ್ನಲೆಯಲ್ಲಿ ಗಾಲ್ಫ್ ಮೈದಾನದ ಸುತ್ತಮುತ್ತಲಿನ ಅನಮೇಕ ಶಾಲೆಗಳಿಗೆ ರಜೆ ಸಾರಲಾಗಿದೆ. ಈ ಸಂಖ್ಯೆ ಸೋಮವಾರ 22ಕ್ಕೆ ಏರಿದೆ. ಇಂದು ಕೂಡ ನಗರ ಹಾಗೂ ಗ್ರಾಮೀಣ ಭಾಗದ 22 ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಇದನ್ನು ಓದಿ : Agriculture : ತೋಟಕ್ಕೆ ವಿಷ ಸುರಿಯುತ್ತೀರಾ…ಕ್ಯಾನ್ಸರ್ ನಿಮ್ಮ ಮನೆಯಂಗಳಕ್ಕೆ ತಲುಪಿದೆ ಅಂದುಕೊಳ್ಳಿ
ಇಂದು ಬೆಳಗ್ಗೆ ಹಿಂಡಲಗಾ ರಸ್ತೆಯಲ್ಲಿರುವ ವನಿತಾ ವಿದ್ಯಾಲಯದ ಬಳಿಯ ಡಬಲ್ ರೋಡ್ನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಬಸ್ ಚಾಲಕರೊಬ್ಬರು ಚಿರತೆ ರಸ್ತೆಯಲ್ಲಿ ಹೋಗುತ್ತಿದ್ದ ದೃಶ್ಯವನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದರು. ಇದರ ಆಧಾರದಲ್ಲಿ ರಸ್ತೆ ದಾಟಿ ಗಾಲ್ಫ್ ಮೈದಾನದಲ್ಲಿ ಹೋದ ಚಿರತೆಯನ್ನ ಹಿಡಿಯಲು ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಬಲೆ, ಅರವಳಿಕೆ ಗನ್ ಹಾಗೂ ಲಾಠಿ ಹಿಡಿದು ಕೊಂಬಿಂಗ್ ಆರಂಭಿಸಿದ್ದರು. ಇನ್ನೇನು ಚಿರತೆ ಹಿಡಿಯಬೇಕು ಅನ್ನುವಷ್ಟರಲ್ಲಿ ವನಿತಾ ವಿದ್ಯಾಲಯದ ಹಿಂದಿನ ಭಾಗದಲ್ಲಿ ಕಾಣಿಸಿಕೊಂಡ ಚಿರತೆ ತಪ್ಪಿಸಿಕೊಂಡು ಓಡಿದೆ.
Discussion about this post