ಬೆಂಗಳೂರಿನಲ್ಲಿ ಒಟ್ಟು 28 ವಿಧಾನ ಸಭಾ ಕ್ಷೇತ್ರಗಳಿವೆ. ಈ ಪೈಕಿ 10 ವಿಧಾನಸಭಾ ಕ್ಷೇತ್ರಗಳಲ್ಲಿನ ವಾರ್ಡ್‌ಗಳ ( BBMP WARD ) ಸಂಖ್ಯೆ ಹೆಚ್ಚಳವಾಗಿಲ್ಲ
2011 ಜನಗಣತಿಯನ್ನು ಆಧರಿಸಿ ಬೆಂಗಳೂರಿನ ವಾರ್ಡ್‌ಗಳ ಸಂಖ್ಯೆಯನ್ನು 243 ಹೆಚ್ಚಿಸುವಂತೆ ವಾರ್ಡ್ ಮರುವಿಂಗಡಣಾ ಸಮಿತಿ ವರದಿ ಸಲ್ಲಿಸಿತ್ತು. ಈ ವರದಿಗೆ ಸಮ್ಮತಿ ಸೂಚಿಸಿದ್ದ ಸರ್ಕಾರ ವಾರ್ಡ್ ವಿಂಗಡಣೆ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆಯನ್ನು ಕೇಳಿತ್ತು. ಇದೀಗ ಆಕ್ಷೇಪಣೆ ಸ್ವೀಕರಿಸಿರುವ ಸರ್ಕಾರ ಬೆಂಗಳೂರಿಗರು ಕೊಟ್ಟ ಸಲಹೆ ಆಧಾರದಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ವಾರ್ಡ್ ಗಳ ಪಟ್ಟಿಯನ್ನು ( ( BBMP WARD ) ) ಅಂತಿಮಗೊಳಿಸಿದೆ. ಈ ಮೂಲಕ 198 ವಾರ್ಡ್‌ಗಳಿದ್ದ BBMPಯಲ್ಲಿ ಇನ್ಮುಂದೆ 243 ವಾರ್ಡ್‌ಗಳು ರಚನೆಯಾದಂತಾಗಿದೆ.
ಈ ಪೈಕಿ 24 ವಾರ್ಡ್ ಗಳ ಹೆಸರನ್ನು ಬದಲಾವಣೆ ಮಾಡಲಾಗಿದ್ದು, ಕಾವೇರಿನಗರದ ವಾರ್ಡ್ ನಂ 55ಕ್ಕೆ ಪುನೀತ್ ರಾಜ್ ಕುಮಾರ್ ವಾರ್ಡ್ ( puneeth rajkumar ward ) ಎಂದು ನಾಮಕರಣ ಮಾಡಲಾಗಿದೆ. ಇದರೊಂದಿಗೆ ಕೆಲ ವಾರ್ಡ್ ಗಳಿಗೆ ಛತ್ರಪತಿ ಶಿವಾದಿ, ಚಾಣಕ್ಯ, ವೀರಮದಕರಿ, ರಣಧೀರ ಕಂಠೀರವ, ಕೃಷ್ಣದೇವರಾಯ ಅನ್ನುವ ಹೊಸ ಹೆಸರುಗಳನ್ನು ಇಡಲಾಗಿದೆ.
ಇದನ್ನೂ ಓದಿ : Target PM Modi : ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು : ನಿವೃತ ಪೊಲೀಸ್ ಅಧಿಕಾರಿ ದಂಪತಿ ಬಂಧನ
2011ರ ಜನಗಣತಿ ಆಧರಿಸಿದಂತೆ ಬೆಂಗಳೂರಿನಲ್ಲಿ 84.43 ಲಕ್ಷ ಜನಸಂಖ್ಯೆಯಿದ್ದು ಅದನ್ನು 243 ವಾರ್ಡ್‌ಗಳಿಗೆ ಹಂಚಿಕೆ ಮಾಡಲಾಗಿದೆ. ಪ್ರತಿ ವಾರ್ಡ್‌ಗೆ ಸರಾಸರಿ 35 ಸಾವಿರ ಜನಸಂಖ್ಯೆ ಬರಲಿದೆ. ನಗರದ ಕೇಂದ್ರ ಭಾಗದಲ್ಲಿ ಅಷ್ಟೊಂದು ಪ್ರಮಾಣದ ಜನಸಂಖ್ಯೆ ಹೆಚ್ಚಳವಾಗಿಲ್ಲ. ಹೀಗಾಗಿ, ಬಿಬಿಎಂಪಿ ( BBMP ) ಕೇಂದ್ರ ವಲಯಗಳಾದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದ ವಾರ್ಡ್‌ಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುವಿದಿಲ್ಲ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದಿಗಿಂತ 6 ವಾರ್ಡ್‌ಗಳನ್ನು ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನಲ್ಲಿ ( bengaluru ) ಒಟ್ಟು 28 ವಿಧಾನ ಸಭಾ ಕ್ಷೇತ್ರಗಳಿವೆ. ಈ ಪೈಕಿ 10 ವಿಧಾನಸಭಾ ಕ್ಷೇತ್ರಗಳಲ್ಲಿನ ವಾರ್ಡ್‌ಗಳ ಸಂಖ್ಯೆ ಹೆಚ್ಚಳವಾಗಿಲ್ಲ
ಲುಲು ಮಾಲ್ ನಲ್ಲಿ ನಮಾಜ್ : ಚಾಲೀಸಾ ಪಠಿಸಲು ಕೋರಿಕೆ
ಕಾನೂನು, ನಿಯಮಗಳನ್ನು ಉದ್ದೇಶಪೂರ್ವಕವಾಗಿ ಗಾಳಿಗೆ ತೂರುವುದನ್ನು ನಿಲ್ಲಿಸಿದ್ರೆ ದೇಶ ಸರ್ವ ಜನಾಂಗ ಶಾಂತಿಯ ತೋಟವಾಗಿರುತ್ತದೆ
ಕೆಲ ದಿನಗಳ ಹಿಂದಷ್ಟೇ ಲಖನೌದಲ್ಲಿ ತೆರೆದ ಲುಲು ಮಾಲ್ ಇದೀಗ ವಿವಾದಕ್ಕೆ ಗುರಿಯಾಗಿದೆ. ಮಾಲ್ ನಲ್ಲಿ ನಮಾಜ್ ಮಾಡಲು ಅವಕಾಶ ಕೊಡಲಾಗಿದೆ ಅನ್ನುವ ಆರೋಪ ಕೇಳಿ ಬಂದಿದ್ದು, ಮುಸ್ಲಿಮರು ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋ ಜುಲೈ 12 ರಂದು ಎಂದು ಹೇಳಲಾಗುತ್ತಿದೆ. ಇನ್ನು ವಿಡಿಯೋ ವೈರಲ್ ಆದ ಬೆನ್ನಲ್ಲೇ ಘಟನೆಯನ್ನು ಹಿಂದೂ ಮಹಾಸಭಾ ಖಂಡಿಸಿದ್ದು, ಮಾಲ್ ಬಹಿಷ್ಕಾರಕ್ಕೆ ಬಹಿರಂಗ ಕರೆ ನೀಡಿದೆ. ಜೊತೆಗೆ ಹನುಮಾನ್ ಚಾಲೀಸಾ ಪಠಣೆಗೆ ಅವಕಾಶ ಕೋರಿದೆ.
ಈ ಬಗ್ಗೆ ಹಿಂದೂ ಮಹಾಸಭಾ ರಾಷ್ಟ್ರೀಯ ವಕ್ತಾರ ಶಿಶಿರ್ ಚತುರ್ವೇದಿ ಪ್ರತಿಕ್ರಿಯೆ ನೀಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದು ಸರ್ಕಾರಿ ಆದೇಶದ ಉಲ್ಲಂಘನೆಯಾಗಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡುವುದಾಗಿ ಹೇಳಿದ್ದಾರೆ. ಇನ್ನು ಈ ಬಗ್ಗೆ ಲುಲುಮಾಲ್ ಕೂಡಾ ಪ್ರತಿಕ್ರಿಯಿಸಿದ್ದು, ಇಂತಹ ಚಟುವಟಿಕೆಗಳಿಗೆ ಮಾಲ್ ನಲ್ಲಿ ಅವಕಾಶವಿಲ್ಲ. ನಮಾಜ್ ಮಾಡಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಹೀಗೆ ಮಾಡಿದವರ ಗುರುತು ಪತ್ತೆ ಮಾಡಲಾಗುವುದು ಅಂದಿದ್ದಾರೆ.
Discussion about this post