ಬೆಂಗಳೂರು : ಪ್ರತಿ ವರ್ಷದ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಸುವುದು ಸಂಪ್ರದಾಯ. ಆದರೆ ಕಳೆದ ವರ್ಷ ಕೊರೋನಾ ಕಾರಣದಿಂದ ಕಡಲೆಕಾಯಿ ಪರಿಷೆ ನಡೆದಿರಲಿಲ್ಲ.
ಈ ವರ್ಷ ಕೊರೋನಾ ಅಬ್ಬರ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಕಡಲೆ ಕಾಯಿ ಪರಿಷೆ ನಡೆಸಲು ಬಿಬಿಎಂಪಿ ಅನುಮತಿ ನೀಡಿದ್ದು ನವೆಂಬರ್ 29 ರಂದು ಪರಿಷೆ ನಡೆಯಲಿದೆ. ಒಟ್ಟು ಮೂರು ದಿನಗಳ ಕಾಲ ನಡೆಯಲಿರುವ ಪರಿಷೆಗೆ ಶನಿವಾರವೇ bull temple ರಸ್ತೆಯಲ್ಲಿ ಅಂಗಡಿಗಳು ತಲೆ ಎತ್ತಲಿವೆ.
ಈ ಜಾತ್ರೆಗೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಜನ ಆಗಮಿಸುತ್ತಾರೆ. ರಸ್ತೆ ರಸ್ತೆಗಳಲ್ಲಿ ರಾಶಿ ರಾಶಿ ಕಡಲೆಕಾಯಿ ಮಾರಾಟವೇ ಈ ಜಾತ್ರೆಯ ವಿಶೇಷವಾಗಿದೆ. ಇನ್ನು ಜಾತ್ರೆಯ ಅಂಗವಾಗಿ ದೊಡ್ಡ ಬಸವನಿಗೆ ಕಡಲೆಕಾಯಿ ಅಭಿಷೇಕ ಕೂಡಾ ನಡೆಯುತ್ತದೆ.
Discussion about this post