ಮಹಾಮನೆಯಲ್ಲಿ ಇದೀಗ ಟಾಪ್ 5 ಸ್ಪರ್ಧಿಗಳ ಪೈಕಿ ಇಬ್ಬರು ಫೈನಲ್ ವೇದಿಕೆ ಹತ್ತಲು ಸಜ್ಜಾಗಿ ನಿಂತಿದ್ದಾರೆ. ಆದರೆ ಆ ಇಬ್ಬರು ಯಾರು ಅನ್ನುವುದೇ ಈಗಿರುವ ಕುತೂಹಲ. ಬಹುತೇಕ ವೀಕ್ಷಕರ ಪ್ರಕಾರ ಮಂಜು ಹಾಗೂ ಅರವಿಂದ್ ಫೈನಲ್ ವೇದಿಕೆ ಹತ್ತುತ್ತಾರೆ. ಆದರೆ ಈ ಇಬ್ಬರ ಪೈಕಿ ಒಬ್ಬರನ್ನು ಪಕ್ಕಕ್ಕೆ ತಳ್ಳಿ ವೈಷ್ಣವಿ ಫೈನಲ್ ವೇದಿಕೆ ಹತ್ತಿದರೂ ಹತ್ತಬಹುದು ಅನ್ನುವ ಅಭಿಪ್ರಾಯ ಕೇಳಿ ಬಂದಿದೆ. ಹೀಗಾಗಿ ಟಾಪ್ 3 ಸ್ಪರ್ಧಿಗಳ ಪೈಕಿ ವೈಷ್ಣವಿ ಇರುವ ಸಾಧ್ಯತೆಗಳಿದೆ.
ಹಾಗಾದ್ರೆ ವೈಷ್ಣವಿ ಫೈನಲ್ ವೇದಿಕೆ ಹತ್ತಲು ಆರ್ಹರೇ. ಖಂಡಿತಾ ಇಲ್ಲ. ವೈಷ್ಣವಿ ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿದ್ರು, ಯಾರ ಜೊತೆಗೂ ಕಿತ್ತಾಡಿಲ್ಲ ಅನ್ನುವುದನ್ನು ಬಿಟ್ರೆ, ಮಹಾಮನೆಯಲ್ಲಿ ಹೇಳಿಕೊಳ್ಳುವಂತ ಸಾಧನೆ ಮಾಡಲಿಲ್ಲ. ಕಿರುತೆರೆಯಿಂದ ಬಂದವರಾದರೂ ಜನರನ್ನು ರಂಜಿಸಲಿಲ್ಲ. ಅಗ್ನಿಸಾಕ್ಷಿಯ ಸನ್ನಿಧಿಯ ಫೇಮ್ ಅವರನ್ನು ಕಾಪಾಡಿಕೊಂಡು ಬಂದಿತ್ತು ಬಿಟ್ರೆ ಅವರ ಪ್ರದರ್ಶನ ಅವರಿಗೆ ಓಟು ತಂದಿರಲಿಲ್ಲ.
ಇನ್ನು ಅಡುಗೆ ಮನೆಯಲ್ಲೇ ಕಾಲ ಕಳೆಯುತ್ತಿದ್ದ ವೈಷ್ಣವಿ ಟಾಸ್ಕ್ ಗಳ ಬಗ್ಗೆ ಎಂದಿಗೂ ಗಂಭೀರವಾಗಿರಲಿಲ್ಲ. ಟಾಸ್ಕ್ ಗಳನ್ನು ಎಂದಿಗೂ ಸೀರಿಯಸ್ ತೆಗೆದುಕೊಳ್ಳದ ಕಾರಣದಿಂದಲೇ ಅವರು ಸುಲಭ ಟಾಸ್ಕ್ ಗಳನ್ನೂ ಗೆಲ್ಲುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಒಳ್ಳೆ ಹೃದಯದ ವೈಷ್ಣವಿ ಕೈಗೆ ಬಿಗ್ ಬಾಸ್ ಕಪ್ ಹೋಗಲಾರದು ಅನ್ನುವುದು ನಿರೀಕ್ಷೆ
Discussion about this post