ಬಿಗ್ ಬಾಸ್ ಫಿನಾಲೆಯ ಮೊದಲ ದಿನದ ಕಾರ್ಯಕ್ರಮ ಪ್ರಾರಂಭವಾದ ವೇಳೆ ಎಲ್ಲವೂ ಸರಿಯಾಗಿತ್ತು. ಆದರೆ ರಾತ್ರಿ 10.30ರ ಬಳಿಕ ಬಿಗ್ ಬಾಸ್ ಪ್ರಸಾರಕ್ಕೆ ಸಾಕಷ್ಟು ಅಡೆ ತಡೆಗಳು ಎದುರಾಗಿತ್ತು. ಪ್ರೋಮೋ ಮೇಲೆ ಪ್ರೋಮೋಗಳನ್ನು ವಾಹಿನಿ ಪ್ರಸಾರ ಮಾಡಿತ್ತು. ಇದರಿಂದ ವೀಕ್ಷಕರು ಸಾಕಷ್ಟು ಕಿರಿ ಕಿರಿ ಅನುಭವಿಸಿದ್ದರು. ಆದರೆ ಟಿವಿ ವಾಹಿನಿಗಳ ಒಳ ಹೊರಗು ಗೊತ್ತಿದ್ದ ಮಂದಿ ಎನೋ ತಾಂತ್ರಿಕ ಸಮಸ್ಯೆಯಾಗಿರಬೇಕು ಎಂದು ಅರ್ಥ ಮಾಡಿಕೊಂಡಿದ್ದರು.
ಈ ನಡುವೆ ಎರಡನೇ ದಿನ ಫಿನಾಲೆ ವೇದಿಕೆ ಹತ್ತಿರುವ ಸುದೀಪ್ ವೀಕ್ಷಕರಿಗೆ ಆಗಿರುವ ಕಿರಿಕಿರಿ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಇಂಟರ್ ನೆಟ್ ಸಮಸ್ಯೆಯಿಂದ ಬಿಗ್ ಬಾಸ್ ಪ್ರಸಾರದಲ್ಲಿ ಸಾಕಷ್ಟು ಎಡವಟ್ಟಾಯ್ತು. ಈ ಆಡಚಣೆಗಾಗಿ ವಿಷಾಧಿಸುತ್ತೇವೆ ಅಂದಿರುವ ಸುದೀಪ್, ಎಲ್ಲಿ ಏನು ಸಮಸ್ಯೆಯಾಯ್ತು ಅನ್ನುವುದನ್ನೂ ವೀಕ್ಷಕರಿಗೆ ವಿವರಿಸಿದ್ದಾರೆ.
ಈ ಸೀಸನ್ ಸಾಕಷ್ಟು ಚಾಲೆಂಜ್ ಗಳಿಂದ ಕೂಡಿತ್ತು. ಹೊರಗಡೆ ಇದ್ದು ಮನೆಯವರನ್ನು ನೋಡಿಕೊಳ್ಳಬೇಕಾಗಿದೆ. ಹಲವು ಸವಾಲುಗಳನ್ನು ನಾವು ಎದುರಿಸಬೇಕಾಗಿ ಬಂತು. ಫಿನಾಲೆ ಎಪಿಸೋಡ್ ಪ್ರಾರಂಭವಾಗುವ ಎರಡರಿಂದ 3 ಗಂಟೆ ಮುಂಚೆ ಶೂಟಿಂಗ್ ಪ್ರಾರಂಭವಾಗಿರುತ್ತದೆ. ಹೀಗಾಗಿ ಶೂಟಿಂಗ್ ನಡೆಯುತ್ತಿರುವಂತೆ ಕಾರ್ಯಕ್ರಮ ಪ್ರಸಾರವಾಗುತ್ತಿರುತ್ತದೆ.
ಕ್ಯಾಮಾರದಲ್ಲಿ ಶೂಟ್ ಆಗುವ ಕಾರ್ಯಕ್ರಮ ಎಡಿಟ್ ಆಗಬೇಕು, ಬಳಿಕ ಮ್ಯೂಸಿಕ್ ಹಾಕಬೇಕು, ಬ್ರೇಕ್ ಗಳನ್ನು ಸೇರಿಸಬೇಕು, ನಂತರ ಫೈನಲ್ ಎಡಿಟ್ ಆಗಿ ಅದು ಮುಂಬೈಗೆ ಹೋಗಬೇಕು. ಮುಂಬೈ ನಿಂದ ನೋಯ್ಡಾದಲ್ಲಿರುವ MCR ಗೆ ತಲುಪಿ, ಉಪಗ್ರಹದ ಮೂಲಕ ನಿಮ್ಮ ಟಿವಿಗಳನ್ನು ಬರಬೇಕು. ಆದರೆ ನಿನ್ನೆ ಇಂಟರ್ ನೆಟ್ ಸಮಸ್ಯೆಯಿಂದ ಕಾರ್ಯಕ್ರಮ ಪ್ರಸಾರದಲ್ಲಿ ತಡವಾಯ್ತು ಎಂದು ಸುದೀಪ್ ಹೇಳಿದ್ದಾರೆ.
Discussion about this post