ಇಂದಿನಿಂದ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಸಿಕ್ಕಾಪಟ್ಟೆ ಕುತೂಹಲವಿದೆ. ಕಾರಣ ಸಿಂಪಲ್, ಹಿಂದಿನ ಸೀಸನ್ ಗಳಲ್ಲಿ ಎನೂ ಗೊತ್ತಿಲ್ಲದೆ ಸ್ಪರ್ಧಿಗಳು ಮನೆಯೊಳಗಡೆ ಹೋಗ್ತಾ ಇದ್ರು. ಈ ಬಾರಿ ಹಾಗಲ್ಲ ಎಲ್ಲವೂ ಗೊತ್ತಿದ್ದೂ ಸ್ಪರ್ಧಿಗಳು ಮನೆಯೊಳಗಡೆ ಹೋಗ್ತಾ ಇದ್ದಾರೆ.
ಕೊರೋನಾ ಕಾರಣದಿಂದ ಬಿಗ್ ಬಾಸ್ ಅರ್ಧಕ್ಕೆ ನಿಂತಾಗ ಹೊರ ಪ್ರಪಂಚಕ್ಕೆ ಕಾಲಿಟ್ಟಿದ್ದ ಸ್ಪರ್ಧಿಗಳು ಅನೇಕ ವಾಹಿನಿಗಳಿಗೆ ಸಂದರ್ಶನ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಉಳಿದ ಸ್ಪರ್ಧಿಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದರು. ಚಂದ್ರಚೂಡ್, ಸಂಬರಗಿ ಅಂತವರು ಒಂದಿಷ್ಟು ಹೆಚ್ಚೇ ಕಮೆಂಟ್ ಪಾಸ್ ಮಾಡಿದ್ದರು. ಇದೀಗ ಅವೆಲ್ಲವನ್ನೂ ಪರಸ್ಪರ ನೋಡಿದ ಮಂದಿ ಒಂದೆಡೆ ಸೇರುತ್ತಿದ್ದಾರೆ.
ಇದರ ಪ್ರತಿಫಲ ಅನ್ನುವಂತೆ ಬಿಗ್ ಬಾಸ್ ಕಾರ್ಯಕ್ರಮದ ಮೊದಲ ದಿನವೇ ಬೆಂಕಿ ಹತ್ತಿ ಉರಿದಿದೆ. ಕಲರ್ಸ್ ವಾಹಿನಿ ಪ್ರಸಾರ ಮಾಡಿರುವ ಪ್ರೋಮೋದಲ್ಲಿ ಚಂದ್ರಚೂಡ್ ಹಾಗೂ ಸಂಬರಗಿಯನ್ನು ಉಳಿದ ಸ್ಪರ್ಧಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಅವರಾಡುವ ಮಾತುಗಳನ್ನು ಕೇಳಿದರೆ ಈ ಇಬ್ಬರೂ ಮಾಡಿದ್ದು ತಲೆ ತಗ್ಗಿಸುವ ಕೆಲಸ ಅನ್ನುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಸಾಕ್ಷಿ ಅನ್ನುವಂತೆ ಬಿಗ್ ಬಾಸ್ ಕೊಟ್ಟ ಫೋಟೋ ಬೆಂಕಿಗೆ ಹಾಕೋ ಟಾಸ್ಕ್ ನಲ್ಲಿ ಅತ್ಯಂತ ಹೆಚ್ಚು ಮಂದಿ ಸಂಬರಗಿ ಹಾಗೂ ಚಂದ್ರಚೂಡ್ ಫೋಟೋ ಗಳನ್ನೇ ಬೆಂಕಿಗೆ ಹಾಕಿದ್ದಾರೆ.
Discussion about this post