ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಇಂದಿನಿಂದ ಟೇಕಾಫ್ ಆಗಿದೆ. ಮೊದಲ ದಿನದ ಸಂಚಿಕೆಯೇ ಸಾಕಷ್ಟು ಕುತೂಹಲ ಕೆರಳಿಸಿದ್ದು, ಮನೆಯಿಂದ ಹೊರಗಿದಷ್ಟು ದಿನ ಪರಸ್ಪರ ಮಾಡಿದ ಆರೋಪ ಪ್ರತ್ಯಾರೋಪಗಳಿಗೆ ಟಾಂಟ್ ಕೊಡುವ ಕಾರ್ಯವೂ ಇಂದು ನಡೆದಿದೆ.
ಮನೆಗೆ ಬಂದ ಮೊದಲ ದಿನವೇ ನಾಮಿನೇಷನ್ ಟಾಸ್ಕ್ ನೀಡಲಾಗಿದ್ದು, ಚಂದ್ರಚೂಡ್ ಹಾಗೂ ಸಂಬರಗಿಯವರೇ ಅತೀ ಹೆಚ್ಚು ಮತಗಳಿಂದ ನಾಮಿನೇಟ್ ಆಗಿದ್ದಾರೆ. ಮನೆಯಿಂದ ಹೊರಗೆ ಬಂದ ಮೇಲೆ ಅವರಾಡಿದ ಮಾತುಗಳು ಉಳಿದ ಸ್ಪರ್ಧಿಗಳಿಗೆ ಇಷ್ಟವಾಗಿರಲಿಲ್ಲ. ಹೀಗಾಗಿಯೇ ಇಬ್ಬರೂ ನೆಗೆಟಿವ್ ಮನಸ್ಥಿತಿ ಹೊಂದಿದ್ದಾರೆ ಅನ್ನುವ ಆರೋಪ ಹೊರಿಸಿಯೇ ನಾಮಿನೇಟ್ ಮಾಡಿದ್ದಾರೆ.
ಅದರಲ್ಲೂ ಪಾವಗಡ ಮಂಜು ಸಂಬರಗಿಯನ್ನು ನೇರವಾಗಿ ನೀನೇನು ಮಾಡಿದ್ದೀಯಾ, ನಿನ್ನ ಐಡೆಂಟಿಟಿ ಏನು ಎಂದೇ ಪ್ರಶ್ನಿಸಿದ್ದಾರೆ. ಮನೆಯಿಂದ ಹೊರಗೆ ಬಂದ ಮೇಲೆ ಸಂಬರಗಿ ಮಂಜು ಅವರನ್ನು ಹಳ್ಳಿ ಕೂಡಾ ಎಂದು ತುಂಬಾ ಕೀಳಾಗಿ ಸಂಭೋಧಿಸಿದ್ದರು. ಆತ ಮುಖವಾಡದ ವ್ಯಕ್ತಿ, ಕಳಪೆ ಜೋಕ್ ಗಳನ್ನು ಮಾಡ್ತಾನೆ ಎಂದು ಆರೋಪಿಸಿದ್ದರು.
ಇದಕ್ಕೆ ಉತ್ತರಿಸಿದ ಮಂಜು, ಹೌದು ನಾನು ಹಳ್ಳಿ ಹುಡುಗನೇ, ನಾನು ಹಳ್ಳಿಯಿಂದಲೇ ಬಂದಿರೋದು ಅದೇ ನನ್ನ ಐಡೆಂಟಿಟಿ. ನಾಲ್ಕು ವರ್ಷಗಳಿಂದ ಶೋ ಮಾಡುತ್ತಿದ್ದೇನೆ. ಸಂಬರಗಿ ಮಾಡಿರುವುದೇನು ಎಂದು ಪ್ರಶ್ನಿಸಿದ್ದಾರೆ.
ಇನ್ನು ಚಂದ್ರಚೂಡ್ ಅವರನ್ನು ನಾಮಿನೇಟ್ ಮಾಡಿ ಮಾತನಾಡಿದ ಮಂಜು, ಹುಡುಗಿಯರ ವಿಚಾರದಲ್ಲಿ ಕೆಟ್ಟದಾಗಿ ಮಾತನಾಡುವುದನ್ನು ಮೊದಲು ಬಿಡಿ, ಮನೆಯೊಳಗೆ ಇದ್ದಷ್ಟು ದಿನ ದಿವ್ಯಾ ಸುರೇಶ್ ಅವರನ್ನು ಮಗಳೇ ಎಂದು ಕರೆದು, ಮನೆಯ ಹೊರಗಡೆ ಹೋದ ತಕ್ಷಣ ಕಬ್ಬನ್ ಪಾರ್ಕ್ ವಿಚಾರಗಳ ಅಗತ್ಯವೇನಿತ್ತು. ಸ್ವಂತ ಮಗಳ ಬಗ್ಗೆ ಹೀಗೆ ಮಾತನಾಡಿದ್ರೆ ಸಹಿಸಿಕೊಳ್ತಾರ ಎಂದು ಫೋಟೋವನ್ನು ಬೆಂಕಿ ಹಾಕಿದ್ದಾರೆ.
ಇವತ್ತು ಚಂದ್ರಚೂಡ್ ಹಾಗೂ ಪ್ರಶಾಂತ್ ಸಂಬರಗಿ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ನೋಡಿದರೆ ಅವರಿಬ್ಬರೂ ಸ್ತ್ರೀ ದ್ವೇಷಿಗಳು ಎಂದು ಬಿಗ್ ಬಾಸ್ ಮನೆಯಲ್ಲಿ ಹಣೆ ಪಟ್ಟಿಕಟ್ಟಿಕೊಂಡರೂ ಅಚ್ಚರಿ ಇಲ್ಲ.
Discussion about this post