ಮೊನ್ನೆ ಮೊನ್ನೆ ಶಮಂತ್ ಕೂದಲಿಗೆ ಕೈ ಹಾಕಿದ್ದ ಮಂಜು ಪಾವಗಡ, ಕಿಚ್ಚ ಸುದೀಪ್ ಕಡೆಯಿಂದ ಭೇಷ್ ಅನ್ನಿಸಿಕೊಂಡಿದ್ದರು. ಮಾತ್ರವಲ್ಲದೆ ರಾಜೀವನ ಕೂದಲಿಗೆ ಕತ್ತರಿ ಹಾಕೋ ಛಾಲೆಂಜ್ ಕೊಟ್ಟಿದ್ದರು. ಆದರೆ ಆಗ ಮಂಜುಗಾಗಲಿ, ಸುದೀಪ್ ಅವರಿಗಾಗಲಿ ರಾಜೀವನ ಕೂದಲ ರಹಸ್ಯವೇನು ಅನ್ನುವುದು ಗೊತ್ತಿರಲಿಲ್ಲ. ಅದೊಂದು ಸ್ಟೈಲ್ ಅನ್ನುವುದಷ್ಟೇ ಎಲ್ಲರೂ ಅಂದುಕೊಂಡಿದ್ದರು.
ಸುದೀಪ್ ಕೊಟ್ಟ ಮತ್ತೊಂದು ಛಾಲೆಂಜ್ ಸ್ವೀಕರಿಸಿದ ಮಂಜು, ಶನಿವಾರ ರಾಜೀವನ ಕೂದಲಿಗೆ ಕತ್ತರಿಗೆ ಹಾಕಿದ್ದಾರೆ. ಆಗ್ಲೇ ಇಡೀ ಮನೆಯ ಸದಸ್ಯರಿಗೆ ಗೊತ್ತಾಗಿದ್ದು, ರಾಜೀವ ಇಷ್ಟು ಉದ್ದ ಕೂದಲು ಬಿಟ್ಟಿರುವುದ್ಯಾಕೆ ಎಂದು. ಸಮಾಜಮುಖಿ ಕಾರ್ಯ ಮಾಡುವ ಸಲುವಾಗಿ ರಾಜೀವ ಹೀಗೆ ಉದ್ದ ಕೂದಲು ಬಿಟ್ಟಿದ್ದರು. ಅದು ಕೂಡ ಒಂದೆರೆಡು ವರ್ಷವಲ್ಲ, ಬರೋಬ್ಬರಿ ಎರಡೂವರೆ ವರ್ಷಗಳ ಕಾಲ.
ವಾರಾಂತ್ಯದಲ್ಲಿ ರಾಜೀವ್ ಅವರ ಹೇರ್ ಕಟ್ ಬಗ್ಗೆ ಟಾಪಿಕ್ ಕೈಗೆತ್ತಿಕೊಂಡ ಸುದೀಪ್ ಮಂಜು ಅವರ ಕೈಚಳಕವನ್ನು ಬಾಯಿ ತುಂಬಾ ಹೊಗಳಿದ್ದಾರೆ. ಈ ವೇಳೆ ರಾಜೀವ್ ಅವರನ್ನು ಮಾತನಾಡಿಸಿದಾಗ ಅದು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಉದ್ದೇಶದಿಂದ ಅವರು ಕೂದಲು ಬಿಟ್ಟಿದ್ದೆ ಅನ್ನುವುದನ್ನು ವಿವರಿಸಿದ್ದಾರೆ. ದಾನ ಮಾಡಬಹುದಾದಷ್ಟು ಉದ್ದ ಕೂದಲು ಬೆಳೆದಿರುವ ಹಿನ್ನಲೆಯಲ್ಲಿ ನಾನು ಕೂಡಾ ಕತ್ತರಿ ಪ್ರಯೋಗಕ್ಕೆ ಒಪ್ಪಿಕೊಂಡೆ ಅಂದೆ. ರಾಜೀವ ಅವರ ಈ ಕಾರ್ಯವನ್ನು ಮೆಚ್ಚಿದ ಸುದೀಪ್ ಮೆಚ್ಚುಗೆಯ ಚಪ್ಪಾಳೆ ಕೊಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಇದೇ ಕೂದಲನ್ನು ಸೂಕ್ತ ಸಂಸ್ಥೆಯೊಂದಕ್ಕೆ ತಲುಪಿಸುವಂತೆ ಸುದೀಪ್ ಅವರ ಬಳಿ ರಾಜೀವ್ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್ ಖಂಡಿತಾ ನಿಮ್ಮ ಇಚ್ಛೆಯಂತೆ ಅದನ್ನು ತಲುಪಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ಕೊಟ್ಟಿದ್ದಾರೆ.
Discussion about this post