ಬಿಗ್ ಬಾಸ್ ಕಾರ್ಯಕ್ರಮ ಮುಗಿಸಿ ಬಂದ ಮೇಲೂ ಸ್ಪರ್ಧಿಗಳು ತಮ್ಮ ತಮ್ಮ ಲೋಕಕ್ಕೆ ಮರಳಿದ್ದಾರೆ. ಆದರೆ ಚಂದ್ರಚೂಡ್ ಹಾಗೂ ಪ್ರಶಾಂತ್ ಸಂಬರಗಿ ಇನ್ನೂ ಅದೇ ಗುಂಗಿನಲ್ಲಿದ್ದಾರೆ. ಬಿಗ್ ಬಾಸ್ ಆಟ ಅನ್ನುವುದನ್ನು ಮರೆತು ಹೊಸ ಜೀವನ ಶುರುಮಾಡೋದನ್ನು ಬಿಟ್ಟು ಮತ್ತೆ ಹಳೆ ಗಾಯ ಕೆರೆಯುತ್ತಾ ಕೂತಿದ್ದಾರೆ.
ಶನಿವಾರ ಇನ್ಸ್ಟಾ ದಲ್ಲಿ ನಡೆದ ಲೈವ್ ಕಾರ್ಯಕ್ರಮದಲ್ಲೂ ಹೀಗೆ ಆಗಿದೆ. ಪ್ರಿಯಾಂಕ, ಪ್ರಶಾಂತ್ ಹಾಗೂ ಚಂದ್ರಚೂಡ್ ನೇರ ಪ್ರಸಾರ ಬಂದಿದ್ದರು. ಈ ವೇಳೆ ಬಿಗ್ ಬಾಸ್ ಅನುಭವಗಳನ್ನು ಇವರೆಲ್ಲಾ ಹಂಚಿಕೊಳ್ತಾರೆ ಎಂದು ಜನ ಕೂತಿದ್ರೆ ಇವರಿಬ್ಬರು ತೌಡು ಕುಟ್ಟಲು ಪ್ರಾರಂಭಿಸಿದ್ದರು. ಉಳಿದ ಸ್ಪರ್ಧಿಗಳ ಬಗ್ಗೆ ನೆಗೆಟಿವ್ ಕಮೆಂಟ್ ಬಿಟ್ರೆ ಮತ್ತೇನೂ ಇರಲಿಲ್ಲ. ಜೊತೆಗೆ ತಾವೇ ದೊಡ್ಡ ಸಾಧಕರು ಅನ್ನುವುದನ್ನು ಹೇಳಿಕೊಳ್ಳುವುದಕ್ಕೆ ಲೈವ್ ಸೀಮಿತವಾಗಿತ್ತು.
ಈ ನಡುವೆ ಇದೇ ನೇರ ಪ್ರಸಾರದಲ್ಲಿ ಪ್ರಿಯಾಂಕ ತಿಮ್ಮೇಶ್, ಚಂದ್ರಚೂಡ್ ಅವರ ಚಳಿ ಬಿಡಿಸಿದ ಘಟನೆಯೂ ನಡೆದಿದೆ. ಚಂದ್ರಚೂಡ್ ಕುರಿತಂತೆ ಮಾತನಾಡಿದ್ದ ಪ್ರಿಯಾಂಕ, ಅವರು ಈಗ್ಲೂ ನನ್ನ ರೇಗಿಸುತ್ತಾರೆ ನಾನು ಬೇಸರ ಮಾಡಿಕೊಳ್ಳುತ್ತೇನೆ ಅದೊಂದು ರೀತಿಯಲ್ಲಿ ರೂಢಿಯಾಗಿದೆ ಅಂದಿದ್ದಾರೆ. ಜೊತೆಗೆ ನೇರಪ್ರಸಾರದಲ್ಲಿ ನನ್ನ ರೇಗಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಇದನ್ನು ಕಿವಿ ಹಾಕಿಕೊಳ್ಳದ ಚಂದ್ರಚೂಡ್, ಈ ಹುಡುಗಿ ದುರ್ಗಿ ರೀತಿ ಆಡುತ್ತೆ, ತ್ರಿಶೂಲ ಹಿಡಿದುಕೊಂಡೇ ನಿಂತಿರುತ್ತೆ ಅಂದಿದ್ದಾರೆ. ಇದರಿಂದ ಮುಖ ಕೆಂಪಕ್ಕೆ ಮಾಡಿಕೊಂಡ ಪ್ರಿಯಾಂಕ ಸರ್ ಹೀಗೆ ಹೇಳಿ ಹೇಳಿ ಜನ ನನಗೆ ಎರಡು ಪದ ಯೂಸ್ ಮಾಡುತ್ತಿದ್ದಾರೆ. over acting ಮತ್ತು attitude ಅಂತಾ. ಇದು ನಿಮ್ಮಿಂದಲೇ ಬಂದಿರೋದು ಎಂದು ಗರಂ ಆಗಿದ್ದಾರೆ.
ಈ ವೇಳೆ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಹೋದ ಚಂದ್ರಚೂಡ್ ನಾನು ದುರ್ಗಿ ಅಂತಾ ಹೊಗಳಿದ್ದು, ಅದು ಹೆಣ್ಣು ಮಗಳನ್ನು ಹೊಗಳೋ ಪದ ಬೈಯೋದಲ್ಲ ಅಂದಿದ್ದಾರೆ.
ಅದಕ್ಕೆ ಮತ್ತೆ ತಿರುಗೇಟು ಕೊಟ್ಟ ಪ್ರಿಯಾಂಕ ಅದು ಹೊಗಳೋದು ಆಮೇಲೆ ಮೊದಲು ಬೈಯ್ದುಕೊಂಡೇ ಹೇಳಿರುತ್ತೀರಿ, ಆಮೇಲೆ ಅದನ್ನು ಹೊಗಳಿಕೆ ಅಂತಾ ತಿರುಗಿಸುತ್ತೀರಿ ಅಂತಾ ಉತ್ತರಿಸಿದ್ದಾರೆ.
ಯಾಕೋ ವಿಷಯ ಗಂಭೀರವಾಗುತ್ತಿದೆ ಅನ್ನುವುದನ್ನು ಅರಿತ ಚಂದ್ರಚೂಡ್,
ಈ ಹುಡುಗಿ ಸೀರಿಯಸ್ ಆಗಿ ಆಳುತ್ತೆ ಬಿಟ್ಟು ಬಿಡಿ ವಿಷಯಾಂತರ ಮಾಡಿ ಪಾರಾಗಿದ್ದಾರೆ.
Discussion about this post