ಮಹಾಮನೆಯಲ್ಲಿ ಬಾಡಿಗಾರ್ಡ್ ಖ್ಯಾತಿಯ ಸ್ಪರ್ಧಿಗಳು ಇನ್ನಿಂಗ್ಸ್ ಎರಡಲ್ಲೂ ಇಡೀ ಮನೆ ನಾವು ಹೇಳಿದಂತೆ ನಡೆಯಬೇಕು ಎಂದು ನಿರ್ಧರಿಸಿದಂತಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ 11 ಕ್ಷೇತ್ರಗಳ ಪರಿಣಿತ ಖ್ಯಾತಿಯ ಚಂದ್ರಚೂಡ್ ಹಾಗೂ ಪ್ರಶಾಂತ್ ಸಂಬರಗಿ ಮಾಸ್ಟರ್ ಪ್ಲಾನ್ ಗಳನ್ನು ರೂಪಿಸುತ್ತಿದ್ದಾರೆ.
ಇಡೀ ಮನೆಯಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎಂದು ದೂರುತ್ತಿರುವ ಇವರು, ತಮ್ಮ ಗುಂಪಿಗೆ ಸದಸ್ಯರೇ ಸಿಗುತ್ತಿಲ್ಲ ಎಂದು ಕೊರಗುತ್ತಿದ್ದಾರೆ. ಹೀಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಇಬ್ಬರೇ ಕೂತಿದ್ದಾರೆ. ಈ ನಡುವೆ ಮಂಜು ಪಾವಗಡ ವಿರುದ್ಧ ಜಯ ಸಾಧಿಸಿದ್ದೇವೆ ಎಂದು ಇಬ್ಬರೂ ಅಂದುಕೊಂಡ್ರೆ ಹೊರಗಡೆ ಸಾಮಾಜಿಕ ಜಾಲತಾಣವನ್ನು ಸೆಗಣಿ ಸಾರಿಸಿ ಗುಡಿಸಿದ್ರು ಸಾಕಾಗಲ್ಲ, ಆ ಮಟ್ಟಿಗೆ ಕ್ಯಾಕರಿಸಿ ಉಗಿಯುತ್ತಿದ್ದಾರೆ.
ಇದನ್ನೂ ಓದಿ : ಪ್ರಿಯಾಂಕ ತಿಮ್ಮೇಶ್ ಗೆ ಕೊರೋನಾ ಲಸಿಕೆ ಕೊಡಿಸಿದ ಚಂದ್ರ ಚೂಡ್
ಮೊನ್ನೆ ಪ್ರಿಯಾಂಕ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಚಂದ್ರಚೂಡ್ ಮನೆಯ ಹೊರಗಡೆ ಒಂದು ತರ ಒಳಗಡೆ ಬಂದ ಮೇಲೆ ಫುಲ್ ಬದಲಾಗಿ ಬಿಟ್ಲು ಎಂದು ಕಿಡಿ ಕಾರಿದ್ದರು. ಇದಕ್ಕೆ ಪ್ರತಿಯಾಗಿ ಅವರು ಹೇಳಿದಕ್ಕೆ ತಲೆಯಾಡಿಸಿ ಯಸ್ ಅಂದ್ರೆ ನಾವು ಒಳ್ಳೆಯವರು, ಅವರ ಮಾತುಗಳನ್ನು ಒಪ್ಪಿಕೊಂಡಿಲ್ಲ ಅಂದ್ರೆ ಕೆಟ್ಟವರು ಎಂದು ಪ್ರಿಯಾಂಕ ಕೂಡಾ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ : ಪ್ರಶಾಂತ್ ಸಂಬರಗಿ ಸ್ತ್ರೀ ವಿರೋಧಿನಾ…? ಬಿಗ್ ಬಾಸ್ ಮನೆಯಲ್ಲಿ ಕಳಚಿ ಬಿತ್ತಾ ಅಸಲಿ ಮುಖ…?
ಈ ನಡುವೆ ಬಿಗ್ ಬಾಸ್ ಮನೆಯಲ್ಲಿ ಪ್ರಿಯಾಂಕ ಹಾಗೂ ಚಂದ್ರಚೂಡ್ ನೇರನೇರಾ ಕಿತ್ತಾಡಿಕೊಂಡಿದ್ದಾರೆ. ಟಾಸ್ಕ್ ಮುಗಿದ ಬಳಿಕ ಅಭಿನಂದಿಸಲು ಬಂದ ಚಂದ್ರಚೂಡ್ ಅವರ ಕಾಲೆಳೆಯಲು ಪ್ರಿಯಾಂಕ ಮುಂದಾದ್ರೆ, ಅದಕ್ಕೆ ಪ್ರತಿಯಾಗಿ ಹೋಗಿ ಹೋಗಿ ನಿನ್ನ ಹತ್ರ ಬಂದ್ನಲ್ಲ ಎಂದು ಚಂದ್ರಚೂಡ್ ಹೇಳಿದ್ದಾರೆ. ಇದು ಮಾತಿಗೆ ಮಾತು ಬೆಳೆದು ಏನು ನಿನ್ನ ಅಹಂಕಾರ..ಏನು ನಿನ್ನ ನಕ್ರ… ಎಂದು ಪ್ರಿಯಾಂಕ ವಿರುದ್ಧ ಅನಗತ್ಯ ಪದಪ್ರಯೋಗ ಮಾಡಿದ್ದಾರೆ ಚಂದ್ರಚೂಡ್. ಈ ವೇಳೆ ಸಿಡಿದೆದ್ದ ಪ್ರಿಯಾಂಕ ಚಂದ್ರಚೂಡ್ ಚಳಿ ಬಿಡಿಸಿದ್ದಾರೆ. ಪರಿಸ್ಥಿತಿ ನೋಡಿದರೆ ಮಹಾಮನೆಯಲ್ಲಿ ಬಾಡಿಗಾರ್ಡ್ಸ್ ಸಂಘ ಸ್ತ್ರೀವಿರೋಧಿ ಅನ್ನುವಂತೆ ಪ್ರಾಜೆಕ್ಟ್ ಆಗುತ್ತಿದೆ.
Discussion about this post