ಬಿಗ್ ಬಾಸ್ ಎಂಟನೇ ಸೀಸನ್ ನ ಎರಡನೇ ಇನ್ನಿಂಗ್ಸ್ ತುಂಬಾ ವಿಭಿನ್ನವಾಗಿ ಮೂಡಿಬರುತ್ತಿದೆ. ಅದರಲ್ಲೂ ಚಂದ್ರಚೂಡನನ್ನು ನಂಬಿ ಕೆಟ್ಟಿದ್ದ ಪ್ರಶಾಂತ್ ಸಂಬರಗಿ ತಮ್ಮ ತಪ್ಪು ತಿದ್ದಿ ಮುನ್ನಡೆಯುತ್ತಿದ್ದಾರೆ. ಚಕ್ರವರ್ತಿ ತನ್ನನ್ನು ಎಷ್ಟರ ಮಟ್ಟಿಗೆ ದಾರಿ ತಪ್ಪಿಸಿದ್ದಾರೆ ಅನ್ನುವುದು ಅರಿವಾಗಿದೆ. ಹೀಗಾಗಿ ಜೀವದ ಗೆಳೆಯ ಅಂದವನ ಜೊತೆಗೆ ಇದೀಗ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಹಾಗೇ ನೋಡಿದರೆ ಮೊದಲ ಇನ್ನಿಂಗ್ಸ್ನ ಆರಂಭದ ದಿನಗಳಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ಸಂಬಂಧ ಚೆನ್ನಾಗಿ ಇತ್ತು. ಮಂಜು ಪ್ರಶಾಂತ್ ಅವರನ್ನು ಪ್ರೀತಿಯಿಂದ ಮಾವ ಎಂದೇ ಕರೆಯುತ್ತಿದ್ದರು. ಯಾವಾಗ ಚಕ್ರವರ್ತಿ ಎಂಟ್ರಿ ಕೊಟ್ಟರೋ, ಮಂಜು ಹಾಗೂ ಸಂಬರಗಿ ನಡುವೆ ಹುಳಿ ಹಿಂಡುವಲ್ಲಿ ಯಶಸ್ವಿಯಾಗಿದ್ದರು. ಮಾವ ಮತ್ತು ಮಾಮ ಅನ್ನು ಶಬ್ಧದ ಅರ್ಥವೇ ತಿಳಿಯದ ಚಂದ್ರಚೂಡ್ ಇಡೀ ಮನೆಯ ವಾತಾವರಣ ಕೆಡಿಸಿದ್ದರು.
ಈ ನಡುವೆ ಮಹಾಮನೆಯಲ್ಲಿ ಟಾಸ್ಕ್ ನಡೆಯುತ್ತಿದ್ದು ಈ ಟಾಸ್ಕ್ನ ಪ್ರಕಾರ ವಿಜಯ ಯಾತ್ರೆ ತಂಡದ ಇಬ್ಬರು ಸದಸ್ಯರು, ನಿಂಗ್ ಐತೆ ತಂಡದ ಸದಸ್ಯರಿಗೆ ಊಟ ಮಾಡಿಸಬೇಕು. ವಿಜಯ ಯಾತ್ರೆ ಟೀಂನ ವೈಷ್ಣವಿ ಹಾಗೂ ಪ್ರಶಾಂತ್ ಸಂಬರಗಿ ಮಂಜುವನ್ನು ಕರೆದು ಕರೆದು ಊಟ ಮಾಡಿಸಿದ್ದಾರೆ.
ಈ ಮೂಲಕ ಮಂಜು ನಡುವಿನ ಕಾರ್ಮೋಡ ಕರಗಿದೆ ಅನ್ನುವುದನ್ನು ಸಂಬರಗಿ ಸಾರಿದ್ದಾರೆ. ಜೊತೆಗೆ ನಮ್ಮಿಬ್ಬರ ನಡುವೆ ಗೆಳೆತನ ಮತ್ತೆ ಚಿಗುರಿದೆ ಎಂದು ಹೇಳಿದ್ದಾರೆ.
Discussion about this post