ಮಹಾಮನೆಯ ಆಟ ಈ ವಾರದಿಂದ ಸಿಕ್ಕಾಪಟ್ಟೆ ತಿರುವು ಪಡೆದುಕೊಂಡಿದೆ. 11 ವಿದ್ಯೆ ಖ್ಯಾತಿಯ ಚಂದ್ರಚೂಡ್ ಹಾಗೂ ಹಳ್ಳಿ ಪ್ರತಿಭೆ ಖ್ಯಾತಿಯ ಮಂಜು ನಡುವಿನ ಜಗಳದಿಂದ ಮಹಾಮನೆಯಲ್ಲಿ ಇದೀಗ ಬೆಂಕಿ ಹತ್ತಿ ಉರಿಯಲಾರಂಭಿಸಿದೆ. ಈ ಜಗಳದಿಂದ ದಿವ್ಯಾ ಸುರೇಶ್ ಹಾಗೂ ಮಂಜು ಮೌನಕ್ಕೆ ಶರಣಾಗಿದ್ದಾರೆ. ಇನ್ನು ಮನೆ ಸದಸ್ಯರು ಇವರಿಬ್ಬರಿಂದ ಅಂತರ ಕಾಯ್ದುಕೊಂಡಿದ್ದಾರೆ.
ಈ ನಡುವೆ ಚಂದ್ರಚೂಡ್ ಹಾಗೂ ಪ್ರಶಾಂತ್ ಸಂಬರಗಿಯವರನ್ನು ಬಾಡಿಗಾರ್ಡ್ ಎಂದು ದಿವ್ಯಾ ಸುರೇಶ್ ಕರೆದಿರುವುದು ಇವರಿಬ್ಬರ ಉರಿಗೆ ಕಾರಣವಾಗಿದೆ. ಹೀಗಾಗಿ ಪ್ರತೀ ಸಲ ಟಾಂಗ್ ಕೊಡುವುದನ್ನು ಮುಂದುವರಿಸಿದ್ದಾರೆ. ಹೀಗಾಗಿಯೇ ಕಣ್ಣೀರ ಧಾರೆ ಸುರಿಯಲಾರಂಭಿಸಿದೆ.
ಸೋಮವಾರದ ಸಂಚಿಕೆಯಲ್ಲಿ ಪ್ರಶಾಂತ್ ಸಂಬರಗಿ ದಿವ್ಯಾ ಅವರನ್ನು ಟಾರ್ಗೇಟ್ ಮಾಡಿದ್ದು, ನಾನು ಮನೆಯಿಂದ ಹೊರಗೆ ಹೋದಾಗ ಕೊಟ್ಟಿರುವ ಸಂದರ್ಶನಗಳಲ್ಲಿ ಫೇಕ್ ಲವ್ ಸ್ಟೋರಿಗಳ ಬಗ್ಗೆ ಹೇಳಿದ್ದೇನೆ. ಇನ್ನು ತಮ್ಮ ಮನೆಯ ಸೆಕ್ಯೂರಿಟಿಗಾರ್ಡ್ಗೆ ಸಂಬಳ ಎಷ್ಟು ಗೊತ್ತಾ..? ಅವರಿಗೆ 30 ಸಾವಿರ ಸಂಬಳ ಕೊಡ್ತೇನೆ ಎಂದೆಲ್ಲ ಮಾತನಾಡಿದ್ದಾರೆ. ಆದರೆ ಇದೇ ಸಂಬರಗಿ ಈ ಹಿಂದೆ ದಿವ್ಯಾ ಹಾಗೂ ಮಂಜು ಅವರನ್ನು ಉದ್ದೇಶಿಸಿ ಬಾಡಿಗಾರ್ಡ್, ಸೆಕ್ಯೂರಿಟಿ ಗಾರ್ಡ್ ಎಂದೆಲ್ಲಾ ಕರೆದಿದ್ದರು. ಪ್ರಶಾಂತ್ ಸಂಬರಗಿ ಮಾತಿನಿಂದ ಕಿರಿಕಿರಿಗೆ ಒಳಗಾದ ದಿವ್ಯಾ ಕಣ್ಣೀರಧಾರೆ ಸುರಿಸಿದ್ದಾರೆ.
ಮತ್ತೊಂದು ಕಡೆ ಫೇಕ್ ಎಲಿಮಿನೇಷನ್ ಟಾಸ್ಕ್ ನಡೆಯುತ್ತಿದ್ದು, ಇಡೀ ಮನೆಯವರು ಸಂಬರಗಿಯವರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಮನೆಯವರ ವರ್ತನೆಯಿಂದ ಬೇಸತ್ತ ಸಂಬರಗಿ ಕಣ್ಣೀರು ಹಾಕಿದರೆ, ಜೀವದ ಗೆಳೆಯನ ಜೊತೆ ಮಾತನಾಡಲಾಗುತ್ತಿಲ್ಲ ಎಂದು ಚೂಡ್ ಕಣ್ಣೀರು ಹಾಕಿದ್ದಾರೆ.
Discussion about this post