ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಕಾಲಿಟ್ಟಿರುವ ಚಂದ್ರಚೂಡ್ ಅದ್ಭುತ ಪ್ರತಿಭಾವಂತ. ಸುದ್ದಿವಾಹಿನಿಗಳಲ್ಲಿ ಚರ್ಚೆಗೆ ಕೂತ್ರೆ ವೀಕ್ಷಕರನ್ನು ಹಿಡಿದುಕೊಳ್ಳುವ ಶಕ್ತಿವಂತ.
ಪತ್ರಿಕೋದ್ಯಮದ ಮೂಲಕ ವೃತಿ ಜೀವನ ಆರಂಭಿಸಿದ ಚಂದ್ರಚೂಡ ಬಳಿಕ ಸಿನಿಮಾ ಕ್ಷೇತ್ರದ ಕಡೆಗೆ ಹೊರಳಿದ್ದರು. ಕವಿತೆ, ಸಾಮಾಜಿಕ ಹೋರಾಟ, ಚಲನಚಿತ್ರ ನಿರ್ದೇಶನ ಹೀಗೆ ಹಲವು ಕ್ಷೇತ್ರಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
ಸಮಾಜದಲ್ಲಿ ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದ ಚಂದ್ರಚೂಡ ಎಲ್ಲರನ್ನೂ ಸ್ನೇಹಿತರಂತೆ ಭಾವಿಸುತ್ತಾರೆ. ಹೀಗಾಗಿ ಸಿದ್ದಾಂತಗಳನ್ನು ಬದಿಗಿಟ್ಟು ಅವರನ್ನು ಮೆಚ್ಚುವ ದೊಡ್ಡ ಸ್ನೇಹಿತ ವರ್ಗವಿದೆ. ಆದರೆ ಬಿಗ್ ಬಾಸ್ ಗೆ ಹೋದ ಮೇಲೆ ಅವರ ವರ್ತನೆ ಬದಲಾಗಿರುವುದು ಹಲವರಲ್ಲಿ ಆಶ್ಚರ್ಯ ಮೂಡಿಸಿದೆ.
ಬಿಗ್ ಬಾಸ್ ಮನೆ ಮಂದಿಯೂ ಚಂದ್ರಚೂಡ ವರ್ತನೆಯಿಂದ ಬೇಸತ್ತು ಹೋಗಿದ್ದಾರೆ. ಸರ್ವಾಧಿಕಾರಿಯಂತೆ ಆಡುತ್ತಿರುವ ಚಂದ್ರಚೂಡ ಬಗ್ಗೆ ಈಗಾಗಲೇ ಅಸಮಾಧಾನ ಹೊಗೆ ಕಾಣಿಸಿಕೊಂಡಿದೆ. ಆದರೆ ತಾನೂ ಹೀಗೆ ಆಡಬೇಕು ಎಂದು ಒಳ ಹೋಗಿರುವ ಚಂದ್ರಚೂಡ ಮತ್ತೊಬ್ಬ ಪ್ರಥಮ್ ಆಗೋ ಪ್ರಯತ್ನದಲ್ಲಿದ್ದಾರೆ.
ಈ ನಡುವೆ ಚಂದ್ರಚೂಡ 96 ದಿನಗಳ ಜೈಲು ವಾಸ ಅನುಭವಿಸಿದ್ದರು ಅನ್ನುವ ಮಾಹಿತಿ ಹೊರ ಬಿದ್ದಿದೆ. ಈ ವಿಷಯವನ್ನು ಅವರೇ ಹೇಳಿಕೊಂಡಿದ್ದು, ಆಂಧ್ರ ಪ್ರದೇಶದ ಪವಾಡ ಪುರುಷರ ಬಗ್ಗೆ ನಾನೊಂದು ಪುಸ್ತಕ ಬರೆದೆ, ಅದರಲ್ಲಿ ಅವರೊಬ್ಬರು ನಕಲಿ ಎಂದು ಹೇಳಿದ್ದೆ. ಅದು ನಿಜವೂ ಆಗಿತ್ತು. ಆದರೆ ನಾನು ಪುಸ್ತಕ ಬರೆದ ಕಾರಣದಿಂದ 96 ದಿನ ಜೈಲಿನಲ್ಲಿ ಇರಬೇಕಾಯಿತು ಅಂದಿದ್ದಾರೆ.
Discussion about this post