ಕರ್ನಾಟಕದ ಜನಸಂಖ್ಯೆ ಎಷ್ಟು ಅಂದ್ರೆ ಥಟ್ ಅಂತಾ ಬರೋದು 5 ಕೋಟಿ, ಸರಿಯಾಗಿ ಯೋಚಿಸಿ ಹೇಳಿ ಅಂದ್ರೆ ಆರೂವರೆ ಕೋಟಿ. ಆದರೆ ಮಹಾಮನೆಯ 11 ವಿದ್ಯೆಗಳ ಖ್ಯಾತಿಯ ಚಂದ್ರಚೂಡ್ ಅವರು ಕರ್ನಾಟಕದ ಜನಸಂಖ್ಯೆಯನ್ನು ಏಳೂವರೆ ಕೋಟಿ ಅನ್ನುವ ಮೂಲಕ ತಮ್ಮ ಜ್ಞಾನ ಭಂಡಾರವನ್ನು ಅಖಂಡ ಕರ್ನಾಟಕದ ಮುಂದಿಟ್ಟಿದ್ದಾರೆ.
ಸೂಪರ್ ಸಂಡೆ ವಿದ್ ಸುದೀಪ್ ಕಾರ್ಯಕ್ರಮದಲ್ಲಿ ಮಹಾಮನೆಯ ಅಡುಗೆ ವಿಚಾರದಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ಚಂದ್ರಚೂಡ್ ಕರ್ನಾಟಕದಲ್ಲಿ ಎಳೂವರೆ ಕೋಟಿ ಕನ್ನಡಿಗರಿದ್ದಾರೆ ಅಂದಿದ್ದಾರೆ. ಈ ವೇಳೆ ಆರೂವರೆ ಕೋಟಿ ಎಂದು ಸುದೀಪ್ ಕರೆಕ್ಷನ್ ಹಾಕಿದ್ರು ಅದನ್ನು ಪತ್ರವಳ್ಳಿ ಖ್ಯಾತಿಯ ಚಂದ್ರವಳ್ಳಿ ಕಿವಿಗೆ ಹಾಕಿಕೊಳ್ಳಲೇ ಇಲ್ಲ.
ಬಿಗ್ ಬಾಸ್ ಮನೆಯಲ್ಲಿ ಈ ಬಾರಿಗೆ ಅಡುಗೆ ಮನೆಯ ಜವಾಬ್ದಾರಿಯನ್ನು ಹುಡುಗರಿಗೆ ವಹಿಸಲಾಗಿದೆ. ಹೀಗಾಗಿ ಅಡುಗೆ ಮನೆಯ ಬಗ್ಗೆಯೇ ಸಾಕಷ್ಟು ಮಾತುಗಳಿತ್ತು. ಇದೇ ವಿಷಯದಲ್ಲಿ ಸುದೀಪ್ ಚಂದ್ರಚೂಡ್ ಅವರನ್ನು ಮಾತಿಗೆಳೆದಿದ್ದಾರೆ. ಈ ವೇಳೆ ಸುದೀಪ್ ಸಾಕ್ಷಿಯಾಗಿ ಎಳೂವರೆ ಕೋಟಿ ಕನ್ನಡಿಗರಿಗೆ ಹೇಳುತ್ತೇನೆ ಎಂದು ಮಾತು ಪ್ರಾರಂಭಿಸಿದ್ದಾರೆ. ಆದರೆ ಬಾಡಿಗಾರ್ಡ್ ಖ್ಯಾತಿಯ ಚಂದ್ರಚೂಡ್ ಇದನ್ನು ಕಿವಿಗೆ ಹಾಕಿಕೊಳ್ಳದೇ ಮಾತು ಮುಂದುವರಿಸಿದ್ದಾರೆ ಈ ಮೂಲಕ ತಮ್ಮ ಸಾಮಾನ್ಯ ಜ್ಞಾನವೇನು ಅನ್ನುವುದನ್ನು ಚಂದ್ರಚೂಡ ಕರ್ನಾಟಕದ ಮುಂದೆ ಪ್ರದರ್ಶಿಸಿದ್ದಾರೆ.
Discussion about this post