ಅಗ್ನಿ ಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ ಬಿಗ್ ಬಾಸ್ ಮನೆಯಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.
ನಿರೀಕ್ಷೆ ಆಟವಾಡದೆ ಇದ್ದರೂ ಅವರಿಗಿರುವ ಅಭಿಮಾನಿ ಬಳಗದ ಕಾರಣದಿಂದ ಪ್ರತೀ ವಾರ ಅವರು ಸೇಫ್ ಅನ್ನಿಸಿಕೊಳ್ಳುತ್ತಿದ್ದಾರೆ.
ಜೊತೆಗೆ ಬಿಗ್ ಬಾಸ್ ಮನೆಯ ಸಹ ಸ್ಪರ್ಧಿಗಳಿಗೂ ವೈಷ್ಣವಿ ಅಪಾಯ ಅನ್ನಿಸಿಲ್ಲ, ಆದರೆ ಸದ್ದಿಲ್ಲದೆ ಅವರು ಫೈನಲ್ ತಲುಪುತ್ತಾರೆ ಅನ್ನುವ ಕಲ್ಪನೆ ಅವರಿಗಿಲ್ಲ.
ಈ ನಡುವೆ ಬಿಗ್ ಬಾಸ್ ಮನೆಯಲ್ಲಿ ತಮ್ಮ ಭವಿಷ್ಯ ಗಂಡನ ಬಗ್ಗೆ ಕನಸುಗಳನ್ನು ಬಿಚ್ಚಿಟ್ಟಿರುವ ಅವರು ಕನಸಿನ ಹುಡುಗರ ಹೀಗಿರಬೇಕು ಅಂದಿದ್ದಾರೆ.
ಹುಡುಗ ಸಿಂಪಲ್ ಆಗಿರಬೇಕು, ಯಾವುದೇ ಆಡಂಭರ ಇರಬಾರದು. ಅವರು ಏನಾದರೂ ಮಾಡಿಕೊಳ್ಳಲಿ ತೊಂದರೆ ಇಲ್ಲ.
ಇಂಡಸ್ಟ್ರಿಯವರಾದರೂ ಪರವಾಗಿಲ್ಲ, ಹಾಗಂತ ಅದನ್ನೇ ತಲೆಗೆ ತುಂಬಿಕೊಂಡಿರಬಾರದು. ಅಯ್ಯೋ ಕೆಲ್ಸ ಕೆಲ್ಸ ಅಂತಾ ಇರಬಾರದು. ಕೆಲಸ ಬಿಟ್ಟರೆ ಮತ್ತೊಂದು ಜಗತ್ತಿದೆ ಅನ್ನುವುದು ಅವರಿಗೆ ಗೊತ್ತಿರಬೇಕು.
ಅವರಿಗೆ ಯೋಚನೆ ಮಾಡುವ ಶಕ್ತಿ ಇರಬೇಕು, ವೃತ್ತಿಯೇ ಬೇರೆ ನನ್ನ ಜೀವನವೇ ಬೇರೆ, ವೃತ್ತಿ ಬೇರೆ ವ್ಯಕ್ತಿತ್ವ ಬೇರೆ ಅಂತ ಅವರಿಗೆ ಗೊತ್ತಿರಬೇಕು ಅಂದಿದ್ದಾರೆ.
ಈ ವೇಳೆ ವಯಸ್ಸಿನ ಅಂತರ ಎಷ್ಟಿರಬೇಕು ಎಂದು ರಾಜೀವ್ ಪ್ರಶ್ನಿಸಿದ್ರೆ, ಅಂತರ ಎಷ್ಟಾದರೂ ಪರವಾಗಿಲ್ಲ. ವಯಸ್ಸಿನ ಅಂತರ 9 ರಿಂದ 10 ವರ್ಷವಾದರೂ ಪರವಾಗಿಲ್ಲ. ಒಟ್ಟಿನಲ್ಲಿ ನನಗೆ ಲಾಯಲ್ ಆಗಿರಬೇಕು, ಹಾನೆಸ್ಟ್ ಆಗಿರಬೇಕು.
ತಪ್ಪಾದರೂ ಮಾಡ್ಲಿ ಬೇರೆ ಹುಡುಗಿಯನ್ನು ಫರ್ಟ್ ಮಾಡ್ಲಿ, ಅವರ ಜೊತೆ ಹೋಗಿ ಬರ್ಲಿ. ಆದರೆ ಅಧನ್ನು ಪ್ರಾಮಾಣಿಕವಾಗಿ ಬಂದು ನನ್ನ ಬಳಿ ಹೇಳಬೇಕು.
ನಾನು ಯಾವತ್ತೂ ಯಾರನ್ನೂ ತಡೆಯುವುದಿಲ್ಲ.ತಪ್ಪೋ ಸರಿಯೋ ನಾನು ಪ್ರೋತ್ಸಾಹಿಸುತ್ತೇನೆ. ಆದರೆ ಅವರು ಮಾಡುತ್ತಿರುವುದು ಸರಿಯೋ ತಪ್ಪೋ ಅನ್ನುವುದು ಅವರ ಮನಸ್ಸಿಗೆ ಬರಬೇಕು. ನಾನು ಯಾವುದು ಸರಿ ಯಾವುದು ತಪ್ಪು ಅನ್ನುವುದನ್ನು ಅವರಿಗೆ ಹೇಳುವಂತಿರಬಾರದು.
ತಪ್ಪು ಸರಿ ಅನ್ನುವುದು ಅವರ ತಿಳುವಳಿಕೆಗೆ ಬರಬೇಕು. ನಾನು ಹೇಳಿ ಅದನ್ನು ಕಲಿಯೋದಲ್ಲ.
ಇದನ್ನೂ ಓದಿ : ಬಿಗ್ ಬಾಸ್ ಮನೆಯ ಲವ್ ಸ್ಟೋರಿ : ಬ್ರೋಗೌಡ ಪಟಾಯಿಸಲು ಹೊರಟಿರೋದು ವೈಷ್ಣವಿಗೌಡ ಅವರನ್ನು ಅಂದ್ರೆ ನಂಬ್ತೀರಾ
ನನ್ನ ಮೌನವನ್ನು ಅವರು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಅವರಿಗೆ ಇದ್ದರೆ ಸಾಕು ಎಂದು ವೈಷ್ಣವಿಯನ್ನು ಅರ್ಥ ಮಾಡಿಕೊಳ್ಳುವ ಗಂಡ ಹೇಗೆ ಇರಬೇಕು ಅನ್ನುವುದನ್ನು ವಿವರಿಸಿದ್ದಾರೆ.
ಇದೇ ವೇಳೆ ತನ್ನ ಮದುವೆಯಾಗುವ ಹುಡುಗನಿಗೆ, ಅವನ ಜೀವನದಲ್ಲಿ ಸಿಗದಷ್ಟು ಪ್ರೀತಿ ನನ್ನಿಂದ ಸಿಗುತ್ತದೆ ಎಂದು ಎದೆ ತಟ್ಟಿ ಹೇಳಿರುವ ವೈಷ್ಣವಿ ನನಗೂ ಜೀವನದಲ್ಲಿ ಫ್ರೀಡಂ ಬೇಕು. ಕೆಲಸ ಮಾಡಬಾರದು ಅಂದ್ರೆ ನನಗೆ ಕೋಪ ಬರುತ್ತದೆ. ಕೆಲಸ ನನ್ನ ಆಯ್ಕೆ.
ಸಾಮಾನ್ಯವಾಗಿ ಮದುವೆಯಾದ ಮೇಲೆ ಹುಡುಗರು ಹೇಳೋದೋ ಹೆಂಡ್ತಿಯಾದವಳು ಮನೆಯಲ್ಲಿರಬೇಕು, ಅಡುಗೆ ಮಾಡಿಕೊಂಡು ಇರಬೇಕು ಅಂತಾ. ಆದರೆ ನಾನು ಅಡುಗೆಯನ್ನೂ ಮಾಡುತ್ತೇನೆ, ಕೆಲಸವನ್ನೂ ಮಾಡುತ್ತೇನೆ.
ಮಗುವಾದ ಮೇಲೆ ಖಂಡಿತಾ ಕೆಲಸ ಕಡಿಮೆ ಮಾಡುತ್ತೇನೆ ಎಂದು ತಮ್ಮ ಭವಿಷ್ಯದ ಸಾಂಸರಿಕ ಜೀವನದ ಕನಸುಗಳನ್ನು ಮಹಾಮನೆಯಲ್ಲಿ ತೆರೆದಿಟ್ಟಿದ್ದಾರೆ.
ಹಾಗಂತ ತನ್ನ ಕನಸಿನ ಹುಡುಗನ ಬಗ್ಗೆ ವೈಷ್ಣವಿ ಮಾತನಾಡುತ್ತಿರುವುದು ಮೊದಲೇನಲ್ಲ. ಹಿಂದೊಮ್ಮೆ ಕಲರ್ಸ್ ಕನ್ನಡ ಚಾಟ್ ಕಾರ್ನರ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು . ನಾನು ಮನಸ್ಸು ನೋಡುತ್ತೇನೆ, ಲುಕ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪ್ರತೀ ವರ್ಷ ಮನುಷ್ಯ ಬದಲಾಗುತ್ತಾನೆ.
ಹೀಗಾಗಿ ನನ್ನ ಮದುವೆಯಾಗುವ ಹುಡುಗನ ಮನಸ್ಸು ತುಂಬಾ ಚೆನ್ನಾಗಿರಬೇಕು ಆತನಿಗೆ ಒಳ್ಳೆ ಗುಣ ಇರಬೇಕು, ಬೇರೆಯವರಿಗೆ ಕೆಟ್ಟದನ್ನು ಬಯಸಬಾರದು ಅಂದಿದ್ದರು.
ಒಟ್ಟಿನಲ್ಲಿ ವೈಷ್ಣವಿ ಬಿಗ್ ಬಾಸ್ ಮನೆಯಿಂದ ಬಂದ ತಕ್ಷಣ ಮದುವೆಯಾಗೋದು ಖಚಿತ ಅಂತಾಯ್ತು.
Discussion about this post