Saturday, February 27, 2021

ಬಿಗ್ ಬಾಸ್ ಆಫರ್ ತಿರಸ್ಕರಿಸಿದ ವೈಷ್ಣವಿ ಗೌಡ… ಕಾರಣವೇನು ಗೊತ್ತಾ….?

Must read

ಈ ತಿಂಗಳ ಅಂತ್ಯಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗೋದು ಪಕ್ಕಾ ಆಗಿದೆ. ಈಗಾಗಲೇ ಸ್ಪರ್ಧಿಗಳ ಆಯ್ಕೆಯೂ ಅಂತಿಮಗೊಂಡಿದ್ದು, ಬಿಡದಿಯ ಕಡೆ ಪ್ರಯಾಣ ಬೆಳೆಸಿಯಾಗಿದೆ.

ಈ ನಡುವೆ ಬಿಗ್ ಬಾಸ್ ಮನೆಗೆ ಹೋಗುವವರು ಯಾರು ಅನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅವರಂತ ಇವರಂತೆ ಅನ್ನುವ ಅಂತೆ ಕಂತೆಗಳು ಮಾತ್ರ ಬರುತ್ತಿದೆ.

ಈ ನಡುವೆ ಬಿಗ್ ಬಾಸ್ ಮನೆಯ ಆಫರ್ ತಿರಸ್ಕರಿಸಿದವರ ಹೆಸರುಗಳು ಬಹಿರಂಗಗೊಳ್ಳಲಾರಂಭಿಸಿದೆ.

ಬಿಗ್ ಬಾಸ್ ಹೋಗುತ್ತಾರೆ ಎನ್ನಲಾಗಿದ್ದ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಇದೀಗ ನಾನು ಬಿಗ್ ಬಾಸ್ಮನೆಗೆ ಹೋಗುತ್ತಿಲ್ಲ ಅಂದಿದ್ದಾರೆ.

ನನಗೆ ಆಫರ್ ಬಂದಿದ್ದು ಹೌದು, ಬಿಗ್ ಬಾಸ್ ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸುವ ಅವಕಾಶವೂ ದೊರಕಿತ್ತು.

ಆದರೆ ಬಹುಕೃತ ವೇಷಂ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಕಾರಣ ನಾನು ಮಹಾಮನೆಗೆ ಹೋಗುತ್ತಿಲ್ಲ ಅಂದಿದ್ದಾರೆ.

ಬಹುಕೃತ ವೇಷಂ ಸಿನಿಮಾದಲ್ಲಿ ವೈಷ್ಣವಿ ನಾಯಕಿಯಾಗಿ ನಟಿಸುತ್ತಿದ್ದು, ನಕ್ಷತ್ರ ಅನ್ನುವ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಗಳಿದ್ದು ಈಗಾಗಲೇ ಡಬ್ಬಿಂಗ್ ಕಾರ್ಯ ಮುಕ್ತಾಯಗೊಂಡಿದೆ.

ಧಾರಾವಾಹಿಗಳ ನಿರ್ದೇಶಕ ಪ್ರಶಾಂತ್ ಆಚಾರ್ಯ ಈ ಚಿತ್ರವನ್ನು ನಿರ್ದೇಶಿಸಿದ್ದು, ಅವರದ್ದೇ ಮೊದಲ ಸಿನಿಮಾ ‘ಗೌಡ್ರು ಸೈಕಲ್‌’ನಲ್ಲಿ ನಟಿಸಿದ್ದ ಶಶಿಕಾಂತ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್‌ ಪೂಜಾರಿ, ‘ಮಜಾ ಟಾಕೀಸ್’ ಖ್ಯಾತಿಯ ಸನಾತನಿ ಇದರಲ್ಲಿ ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ.

ಮಾಸ್‌ ಮಾದ, ವಿನೋದ್ ಸಾಹಸ ನಿರ್ದೇಶನ ಮಾಡಿದ್ದಾರೆ. ವೈಶಾಖ್ ಭಾರ್ಗವ್ ಇದರ ಸಂಗೀತ ನಿರ್ದೇಶನ ಮಾಡಿದ್ದಾರೆ.

ಹಾಡುಗಳಿಗೆ ಭರ್ಜರಿ ಚೇತನ್‌ಕುಮಾರ್, ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಹರ್ಷನಂದನ್ ಮತ್ತ ಡಿಕೆ ರವಿ ಎಂಬುವವರು ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

- Advertisement -
- Advertisement -

Latest article