ಬೆಂಗಳೂರು : ಬಿಗ್ ಬಾಸ್ ಸೀಸನ್ 8ರಲ್ಲಿ ಮಹಿಳಾ ಕ್ಯಾಪ್ಟನ್ ಆಯ್ಕೆಯಾಗಿಲ್ಲ ಅನ್ನುವ ಮಾತುಗಳು ಕೆಲ ದಿನಗಳಿಂದ ಕೇಳಿ ಬಂದಿತ್ತು. ಇದೀಗ ದಿವ್ಯಾ ಉರುಡುಗ ಸೀಸನ್ 8ರ ಮೊದಲ ಮಹಿಳಾ ಕ್ಯಾಪ್ಟನ್ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಬಿಗ್ ಬಾಸ್ ಸೀಸನ್ 8ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸ್ಪರ್ಧಿಗಳು ಮನೆಯಲ್ಲಿದ್ದಾರೆ. ಆದರೆ ಮಹಿಳಾ ಕ್ಯಾಪ್ಟನ್ ಮನೆಯಲ್ಲಿ ಅಧಿಕಾರ ನಡೆಸಿಲ್ಲ ಅನ್ನುವ ಕೊರಗು ಎಲ್ಲರಲ್ಲಿತ್ತು. ಈ ಬಗ್ಗೆ ಮನೆಯಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಗಳು ನಡೆದಿತ್ತು.
ದಿವ್ಯಾ ಉರುಡುಗ ನೇರ ದಿಟ್ಟ ನಿಷ್ಟುರ ಸ್ಪರ್ಧಿ. ತಪ್ಪು ಅಂದಾಗ ಅರವಿಂದ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಹೀಗಾಗಿಯೇ ದಿವ್ಯಾ ಉರುಡುಗ ಅಂದ್ರೆ ಮನೆಯಲ್ಲಿರುವ ಮಂದಿಗೆ ಮಾತ್ರವಲ್ಲ ಬಿಗ್ ಬಾಸ್ ವೀಕ್ಷಕರಿಗೂ ಇಷ್ಟವಾಗಿದ್ದಾರೆ. ಈ ನಡುವೆ ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ದಿವ್ಯಾ ಪ್ರೇಮ ಕಹಾನಿ ನಡೆಯುತ್ತಿದೆ ಅನ್ನುವ ಸುದ್ದಿಗಳು ಕೂಡಾ ಹರಿದಾಡುತ್ತಿದೆ.
ಕೊರೋನಾ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಮತ್ತೆ ಎರಡನೇ ಇನ್ನಿಂಗ್ಸ್ ಶುರುವಾಗಿದೆ. ಮತ್ತೆ ಕೊರೋನಾ ಶುರುವಾಗುತ್ತಲೆ ಬಿಗ್ ಬಾಸ್ ಮನೆಯಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಜಗಳ ನಡೆಯುತ್ತಿದೆ.
ಈ ನಡುವೆ ಜಿವ್ಯಾ ಉರುಡುಗ ಹಾಗೂ ಅರವಿಂದ್ ಲವ್ ಸ್ಟೋರಿ ಮುಂದುವರಿದಿದೆ. ಜೊತೆಗೆ ದಿವ್ಯಾ ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿಯೇ ಆಟವಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
Discussion about this post