ಸೆಕೆಂಡ್ ಇನ್ನಿಂಗ್ ಸಲುವಾಗಿ ಅತಿಥಿಗಳನ್ನು ಒಳಗಡೆ ಕರೆಸಿಕೊಂಡಿರುವ ಮಹಾಮನೆ ಈ ಬಾರಿ ಯುದ್ಧಭೂಮಿಯಾದರೂ ಅಚ್ಚರಿ ಇಲ್ಲ. ಇಲ್ಲಿರುವ ಎಲ್ಲರಿಗೂ ಗೆಲ್ಲುವುದು ಅನಿವಾರ್ಯವಾಗಿರುವ, ಜನರ ಮನ ಗೆಲ್ಲಲೇಬೇಕು. ಮತ್ತೊಂದು ಕಡೆ ಹಲವರಿಗೆ ಹಲವರನ್ನು ಕಂಡರೆ ಆಗೋದಿಲ್ಲ ಅನ್ನುವ ಪರಿಸ್ಥಿತಿ ಇದೆ.
ಬಿಗ್ ಬಾಸ್ ಆಟ ಅಂದುಕೊಂಡು ಮನೆಯಿದ ಹೊರಗೆ ಹೋದ ಮೇಲೆ ಆಟದ ರೀತಿಯಲ್ಲೇ ಮಾತನಾಡಿದ್ರೆ ಈ ಸಮಸ್ಯೆ ಬರುತ್ತಿರಲಿಲ್ಲ. ಯಾವಾಗ ವೈಯುಕ್ತಿಕ ಹೇಳಿಕೆಗಳನ್ನು ಕೊಟ್ಟರೋ, ಪರಸ್ಪರ ದ್ವೇಷ ಶುರುವಾಗಿದೆ. ಈ ದ್ವೇಷ ಮನೆಯೊಳಗೂ ಕಾಣಿಸಿಕೊಂಡಿದ್ದು, ಇನ್ನು ಒಂದೆರೆಡು ವಾರದಲ್ಲಿ ಅದು ಸ್ಪೋಟಗೊಳ್ಳುವುದು ಕೂಡಾ ಖಚಿತ.
ಈ ನಡುವೆ ಬುಧವಾರ ನಡೆದ ನಾಮಿನೇಷನ್ ಸಂದರ್ಭದಲ್ಲಿ ದಿವ್ಯಾ ಸುರೇಶ್ ಚಂದ್ರಚೂಡ್ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮನೆಯೊಳಗೆ ಇದ್ದಷ್ಟು ದಿನ ನನ್ನ ಬಗ್ಗೆ ನೀವಾಡಿದ ಮಾತು ನನಗೆ ಬೇಸರ ತರಿಸಿಲ್ಲ. ಯಾಕಂದ್ರೆ ಅದು ಆಟದ ಭಾಗವಾಗಿತ್ತು. ಆದರೆ ಮನೆಯಿಂದ ಹೊರಗಡೆ ಹೋದ ಮೇಲೂ ನನ್ನ ಬಗ್ಗೆ ಕೀಳಾಗಿ, ಕೆಟ್ಟದಾಗಿ ಮಾತನಾಡಿದ್ರಿ, ತುಂಬಾ ಬೇಸರವಾಯ್ತು ನನಗೆ, ನಿಮ್ಮ ಅದೊಂದು ಮಾತಿನಿಂದ ನಾನು ತುಂಬಾ ಕಣ್ಣೀರು ಹಾಕಿದೆ ಅನ್ನುವ ಮೂಲಕ ಬೇಸರ ಹೊರ ಹಾಕಿದ್ದಾರೆ.
ಇದೇ ವೇಳೆ ಸಂಬರಗಿ ಬಗ್ಗೆಯೂ ಕೆಂಡ ಕಾರಿರುವ ದಿವ್ಯಾ ಸುರೇಶ್ ಅವರಿಂದ ತನಗೆ ಆಗಿರುವ ನೋವನ್ನು ಹೊರ ಹಾಕಿದ್ದಾರೆ. ಇನ್ನು ಸಂಬರಗಿ ವಿರುದ್ಧ ನಿಧಿ ಸುಬ್ಬಯ್ಯ ಕೂಡಾ ಕಾರಿದ್ದಾರೆ.
Discussion about this post