ಕನ್ನಡ ಮಹಾಮನೆಯಲ್ಲಿ ಜಗಳ, ಕಿತ್ತಾಟಗಳನ್ನು ನೋಡಿ ಬೇಸರಗೊಂಡಿರುವ ಬಿಗ್ ಬಾಸ್ ಪ್ರಿಯರಿಗೆ ಇಂದು ಅಂದ್ರೆ ಸೋಮವಾರ ಪ್ರಸಾರವಾಗಲಿರುವ ಸಂಚಿಕೆ ತುಂತುರು ಮಳೆಗರೆಯುವುದು ಖಂಡಿತಾ. ಪ್ರೀತಿ, ನೋವು, ನಗು, ಕಣ್ಣೀರುಗಳನ್ನು ಹೊತ್ತ ಸಂಚಿಕೆ ಇಂದು ಪ್ರಸಾರವಾಗಲಿದ್ದು, ಬಾಂಧವ್ಯಗಳಿಗೆ ಬಣ್ಣ ಕಟ್ಟಿದ ಸಂಬರಗಿ, ಚಂದ್ರಚೂಡ ಅವರಿಗೆ ಪಾಠದಂತಿದೆ. ಆಡಬಾರದ ಮಾತುಗಳನ್ನು ಮನೆಯಲ್ಲಿ ಆಡಿದ್ದ ಚಂದ್ರಚೂಡ ಹಾಗೂ ಸಂಬರಗಿ ಈ ಟಾಸ್ಕ್ ನಿಂದಲಾದ್ರೂ ಬದಲಾದ್ರೆ ಪುಣ್ಯ.
ಮನಸ್ಸು ಕದ್ದಿದ್ದ ಹುಡುಗಿಗೆ ಹುಡುಗರು ಬಲೂನ್ ನೀಡಬೇಕು, ಹುಡುಗಿಯರು ತಮ್ಮ ಸ್ವಂತದ ವಸ್ತುವನ್ನು ಹುಡುಗರಿಗೆ ನೀಡಬೇಕು ಅನ್ನುವ ಟಾಸ್ಕ್ ಒಂದನ್ನು ಬಿಗ್ ಬಾಸ್ ಕೊಟ್ಟಿದ್ದರು. ಈ ವೇಳೆ ನಿರೀಕ್ಷೆಯಂತೆ ಪರಸ್ಪರದ ಬಾಂಧ್ಯವನ್ನು ತೋರಿಸಿದ್ದಾರೆ. ಅದರಲ್ಲೂ ವಿಶೇಷ ಅನ್ನಿಸಿದ್ದು, ದಿವ್ಯಾ ಸುರೇಶ್ ಮುಖದಲ್ಲಿ ಮಗಳನ್ನು ಕಂಡ ಚಂದ್ರಚೂಡ್.
ಈ ನಡುವೆ ಅರವಿಂದ್ ಬಗ್ಗೆ ದಿವ್ಯಾ ಉರುಡುಗ ಮನ ಬಿಚ್ಚಿ ಮಾತನಾಡಿದ್ದು, ಒಂದೇ ಮಾತಿನಲ್ಲಿ ಅವನು ಜೀವನಪೂರ್ತಿ ನನ್ನ ಜೊತೆಗಿರಬೇಕು ಅಂದಿದ್ದಾರೆ. ಅಲ್ಲಿಗೆ ಅರವಿಂದ್ ಅಭಿಮಾನಿಗಳ ಬಹುದಿನಗಳ ಬೇಡಿಕೆಯೊಂದು ಈಡೇರುವ ದಿನ ಹತ್ತಿರ ಬಂದಿದೆ ಅಂದಾಯ್ತು.
ಮತ್ತೆ ಮಾತು ಮುಂದುವರಿಸಿರುವ ದಿವ್ಯಾ ಅವನು ನನಗೆ ರಿಯಲಿ ಸ್ಪೆಷಲ್, ಹೀಗಾಗಿ ಅಪ್ಪಾಜಿ ನನಗೆಂದು ಕೊಡಿಸಿದ ರಿಂಗ್ ಅನ್ನು ಅವನಿಗೆ ಕೊಡಿಸುತ್ತೇನೆ ಎಂದು ಉಂಗುರ ತೊಡಿಸಿದ್ದಾರೆ.
ಅದಕ್ಕೂ ಮುನ್ನ ದಿವ್ಯಾ ಬಗ್ಗೆ ಮಾತನಾಡಿದ್ದ ಅರವಿಂದ್, ನಾನು ಮಾತನಾಡೋದು ಕಡಿಮೆ, ಮಾತಿಲ್ಲದಿದ್ದರೂ ನನ್ನನ್ನು ಅವಳು ಅರ್ಥ ಮಾಡಿಕೊಂಡಿದ್ದಾಳೆ ಎಂದು ಹೃದಯಾಕಾರದ ಬಲೂನ್ ಅನ್ನು ಕೊಟ್ಟಿದ್ದಾರೆ.
ಈ ಮಾತುಕತಯ ಸಂದರ್ಭದಲ್ಲಿ ಇಬ್ಬರು ಕಣ್ಣೀರು ಸುರಿಸುತ್ತಿದ್ದರು ಅನ್ನುವುದನ್ನು ಮರೆಯುವಂತಿಲ್ಲ.
Discussion about this post