ಕಾರ್ಯಕರ್ತರ ರಾಜೀನಾಮೆ ಬಗ್ಗೆ ನಾಯಕರು ಕೇವಲವಾಗಿ ಮಾತನಾಡುವುದನ್ನು ನಿಲ್ಲಿಸಿ Amit shah bommai
ಬೆಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಬೆಳವಣಿಗೆ ಬಗ್ಗೆ ಗೃಹ ಸಚಿವ ಅಮಿತ್ ಶಾ ಗರಂ (Amit shah bommai)ಆಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಿನ್ನೆ ರಾತ್ರಿ ಬೆಂಗಳೂರಿಗೆ ಆಗಮಿಸಿರುವ ಅವರು ಬೊಮ್ಮಾಯಿ ಜೀ ಹಮಾರೆ ಪಾರ್ಟಿ ಮೆ ಕ್ಯಾ ಚಲ್ ರಹಾ ಹೈ ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ರಾಜೀನಾಮೆ ಬಗ್ಗೆ ಅಮಿತ್ ಶಾ ಗರಂ ಆಗಿದ್ದು, ರಾಜ್ಯದಲ್ಲಿ ಏನು ನಡೆಯುತ್ತಿದೆ. ನೀವು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.(Amit shah bommai) ಜೊತೆಗೆ ಕಾರ್ಯಕರ್ತರು ನಮ್ಮ ಆಸ್ತಿಯಾಗಿದ್ದು, ಅವರನ್ನು ಕಡೆಗಣಿಸಬೇಡಿ. ಚುನಾವಣಾ ವರ್ಷದಲ್ಲಿ ಕಾರ್ಯಕರ್ತರನ್ನು ಸರಿಯಾಗಿ ನೋಡಿಕೊಳ್ಳಬೇಕು ತಾನೇ ಅಂದಿದ್ದಾರಂತೆ.
ಇದನ್ನೂ ಓದಿ : Sanjay arora: ಸಾಧಕ ಐಪಿಎಸ್ ಅಧಿಕಾರಿಗೆ ದೆಹಲಿ ಪೊಲೀಸ್ ಆಯುಕ್ತ ಹುದ್ದೆ
ಈ ನಡುವೆ ಈಶ್ವರಪ್ಪ ಸೇರಿದಂತೆ ಕೆಲ ನಾಯಕರು ಕಾರ್ಯಕರ್ತರ ಬಗ್ಗೆ ಕೇವಲವಾಗಿ ಮಾತನಾಡಿರುವುದರ ಬಗ್ಗೆಯೂ ಮಾತನಾಡಿರುವ ಅಮಿತ್ ಶಾ, ವಿಷಯವನ್ನು ನೀವೇ ನಿಯಂತ್ರಿಸಬಹುದಾಗಿತ್ತು, ಕಾರ್ಯಕರ್ತರನ್ನು ಸಮಾಧಾನಗೊಳಿಸಬಹುದಾಗಿತ್ತು, ವಿಷಯವನ್ನು ನೀವು ಬೆಳೆಸಲು ಬಿಟ್ಟಿದ್ಯಾಕೆ ಎಂದು ಬೊಮ್ಮಾಯಿಯವರನ್ನು ಅಮಿತ್ ಶಾ ಪ್ರಶ್ನಿಸಿದ್ದಾರೆ ಅನ್ನಲಾಗಿದೆ. ಜೊತೆಗೆ ಲಾಠಿ ಜಾರ್ಜ್ ಬಗ್ಗೆಯೂ ಪ್ರಸ್ತಾಪವಾಗಿದೆಯಂತೆ.
ಇನ್ನು ಪೂರ್ತಿ ಬೆಳವಣಿಗೆ ಕುರಿತಂತೆ ಸಿಎಂ ಬೊಮ್ಮಾಯಿಯವರು ಅಮಿತ್ ಶಾ ಅವರಿಗೆ ವಿವರಣೆ ಕೊಟ್ಟಿದ್ದು, ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವೇನು ಅನ್ನುವ ಬಗ್ಗೆಯೂ ವಿವರಿಸಿದ್ದಾರೆ. ಜೊತೆಗೆ ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಕೈಗೊಂಡ ಕ್ರಮಗಳನ್ನು ವಿವರಿಸಿದ್ದಾರೆ ಎಂದು ಖಾಸಗಿ ಟಿವಿ ವಾಹಿನಿ ವರದಿ ಮಾಡಿದೆ.
Discussion about this post