Rowdy Parade ಪರೇಡ್ ನಡೆಸುವ ಸಂದರ್ಭದಲ್ಲಿ Koppal SP Arunangshu giri ರೌಡಿಗಳ whatsapp group ನೋಡಿ ಗಾಬರಿಯಾಗಿದ್ದಾರೆ. Baragettava sanghaದ ಚಟುವಟಿಕೆ ಅನುಮಾನಕ್ಕೆ ಕಾರಣವಾಗಿದೆ
ಕೊಪ್ಪಳ : ಜಿಲ್ಲಾ ಎಸ್ಪಿ ಅರುಣಾಂಗ್ಶುಗಿರಿ ತಮ್ಮ ವ್ಯಾಪ್ತಿಯಲ್ಲಿ ಮೆರೆಯುತ್ತಿದ್ದ ರೌಡಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಇದೇ ವೇಳೆ ಕೆಲ ಅಧಿಕಾರಿಗಳಿಗೂ ಪರೋಕ್ಷವಾಗಿ ಎಚ್ಚರಿಕೆಯನ್ನು ಪೊಲೀಸ್ ವರಿಷ್ಠಾಧಿಕಾರಿಗಳು ರವಾನಿಸಿದ್ದಾರೆ. ಇದೇ ಸಂದರ್ಭದಲ್ಲಿ ರೌಡಿಯೊಬ್ಬನ ಮೊಬೈಲ್ ನಲ್ಲಿ ರೌಡಿಗಳ whatsapp ಪರಿಶೀಲನೆ ನಡೆಸುವಾಗ Baragettava sangha ದ ಹೆಸರಿನಲ್ಲಿದ್ದ ಗ್ರೂಪ್ ನೋಡಿ ಗಾಬರಿಯಾಗಿದ್ದಾರೆ.
ರೌಡಿಯೊಬ್ಬನನ್ನು ಕರೆದು ಆತನ ಹಿನ್ನಲೆ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಮೊಬೈಲ್ ಕೇಳಿದ್ದಾರೆ. ಬಳಿಕ whatsapp ನೋಡಿದಾಗ ಬರಗೆಟ್ಟವರ ಸಂಘದ ( Baragettava sangha) ಹೆಸರಿನಲ್ಲಿ ಗ್ರೂಪ್ ತೆರೆದಿರುವುದು ಗೊತ್ತಾಗಿದೆ. ನೋಡಿದರೆ ಅದಕ್ಕೆ ರೌಡಿಯೇ ಆಡ್ಮಿನ್ ಆಗಿದ್ದ. ಬರಗೆಟ್ಟವರ ಸಂಘ ( Baragettava sangha) ಅಂದ್ರೆ ಏನು ಅನ್ನುವುದು Koppal SP Arunangshu gir ಅವರಿಗೆ ಗೊತ್ತಾಗಲಿಲ್ಲ. ಅವರು useless fellow ಅಂದಾಗ ಸರಿಯಾಗಿದೆ ನಿನಗೆ, ನೀನೊಬ್ಬ ಯೂಸ್ ಲೆಸ್, ಅದಕ್ಕೊಂದು ಯೂಸ್ ಲೆಸ್ ಗ್ರೂಪ್ ಅಂದರು.
ಇದನ್ನೂ ಓದಿ : ಮೋದಿ ಫೋನ್ ಕರೆಗೆ ಮಣಿದು ಡಿಸಿಎಂ ಹುದ್ದೆಗೇರಿದ ಫಡ್ನವೀಸ್
ಜೊತೆಗೆ ಮತ್ತಷ್ಟು ಪರಿಶೀಲನೆ ನಡೆಸಿದಾಗ, ಫೋನ್ ನಲ್ಲಿ ಹುಡುಗಿಯರ ಜೊತೆಗೆ ಸಿಕ್ಕಾಪಟ್ಟೆ ಚಾಟ್ ಮಾಡಿರುವುದು ಗೊತ್ತಾಗಿದೆ. ಇದೇನು ಇಷ್ಟೊಂದು ಹುಡುಗಿಯರ ಜೊತೆಗೆ ಮಾತುಕತೆ, ರೇಪ್ ಗೀಪ್ ಮಾಡಿಲ್ಲ ತಾನೇ, ವೇಶ್ಯಾವಾಟಿಕೆ ನಡೆಸುತ್ತಿಲ್ಲ ತಾನೇ ಎಂದು ಪ್ರಶ್ನಿಸಿದ್ದಾರೆ. ಆದ್ಯಾಕೋ ರೌಡಿ ಕೊಟ್ಟ ಉತ್ತರ ತೃಪ್ತಿ ತರಲಿಲ್ಲ. ಹೀಗಾಗಿ ಸಂಬಧ ಪಟ್ಟ ಠಾಣೆಯ ಅಧಿಕಾರಿಯನ್ನು ಕರೆದು, ಈತನ ಮೇಲೆ ನಿಗಾ ಇಡಿ, ಫೋನ್ ಚೆಕ್ ಮಾಡಿ, ವರದಿ ಕೊಡಿ ಎಂದು ಸೂಚಿಸಿದ್ದಾರೆ.
ಒಟ್ಟಿನಲ್ಲಿ ಬರಗೆಟ್ಟ ಸಂಘಕ್ಕೆ ಅಧ್ಯಕ್ಷನಾಗಲು ಹೋದ ಕರ್ಮಕ್ಕೆ ರೌಡಿಯೊಬ್ಬ ಮತ್ತೆ ಪೊಲೀಸರ ಕೈಯಿಂದ ಅನುಭವಿಸಬೇಕಾಗಿ ಬಂದಿದೆ.
Rowdy Parade Koppal SP Arunangshu giri : ಎಷ್ಟು ಜನ ಹೆಣ್ಣು ಮಕ್ಕಳ ಜೀವನ ಹಾಳು ಮಾಡ್ತೀಯಾ… ನಿನಗೆ ಹೆಣ್ಣು ಮಕ್ಕಳಿಲ್ವಾ
ಕೊಪ್ಪಳ : ಜಿಲ್ಲೆಯಲ್ಲಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಇದೀಗ ಎಲ್ಲಾ ಜಿಲ್ಲೆಗಳಲ್ಲಿ Rowdy Parade ಪರೇಡ್ ನಡೆಸಲಾಗುತ್ತಿದೆ. ಪ್ರತೀ ಠಾಣೆಯಲ್ಲಿ ಪ್ರತೀ ತಿಂಗಳು ಇಂತಹ ಪರೇಡ್ ನಡೆದರೆ ರೌಡಿಗಳು ಬಾಲ ಮುದುಡಿಕೊಂಡಿರುತ್ತಾರೆ. ಆದರೆ ಅಂತಹ ಜನ ಸ್ನೇಹಿ ಠಾಣೆಗಳು ಕರ್ನಾಟಕದಲ್ಲಿ ಎಲ್ಲಿದೆ. ಇತ್ತೀಚಿನ ಪೊಲೀಸ್ ಪರೀಕ್ಷಾ ಹಗರಣ ಇಲಾಖೆಯ ಮೇಲಿನ ನಂಬಿಕೆಯನ್ನೇ ಹುಸಿಗೊಳಿಸಿದೆ. ಈ ನಡುವೆ Koppal SP Arunangshu giri Rowdy Parade ನಡೆಸಿದ್ದಾರೆ.
ಈ ವೇಳೆ ಕೊಪ್ಪಳ ಜಿಲ್ಲೆಯ ರೌಡಿಗಳ ಬೆವರಿಳಿಸಿದ ಎಸ್ಪಿ ಅರುಣಾಂಗ್ಶುಗಿರಿ, ಕಾನೂನಿಗೆ ಗೌರವ ಕೊಟ್ರೆ ಸರಿ, ತಪ್ಪಿದ್ರೆ ಸೆಕ್ಷನ್ ಹಾಕೋ ಪ್ರಶ್ನೆ ಇಲ್ಲ, ಓನ್ಲಿ ಗಡಿಪಾರು ಅಂದಿದ್ದಾರೆ. ಇದೇ ಸಂದರ್ಭದಲ್ಲಿ ವೇಶ್ಯಾವಾಟಿಕೆ ನಡೆಸಿ ಪದೇ ಪದೇ ಸಿಕ್ಕಿ ಬೀಳುತ್ತಿರುವ ಮಹಿಳೆಯನ್ನು ಕಂಡು ಸಿಡಿಮಿಡಿಗೊಂಡ ಪೊಲೀಸ್ ವರಿಷ್ಠಾಧಿಕಾರಿ ಊರು ಬಿಟ್ಟು ಹೋಗುವಂತೆ ಗದರಿದ್ದಾರೆ
ಎಷ್ಟು ಜನ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದೀಯಾ, ನಿನಗೆ ಹೆಣ್ಣು ಮಕ್ಕಳಿಲ್ವ, ನಿನ್ನ ಮಗಳಿಗೂ ಇದೇ ದಾರಿ ಮಾಡಿಕೊಡುತ್ತೀಯಾ, 50 ವಯಸ್ಸಾಗಿದ್ದರೂ ಇಂಥ ಚಟುವಟಿಕೆ ನಡೆಸುತ್ತೀಯಾ, ಬ್ಯಾಗ್ ಪ್ಯಾಕ್ ಮಾಡಿ ರೆಡಿ ಇರಿ. ಊರು ಬಿಟ್ಟು ಹೋಗಲು ರೆಡಿ ಇರು. ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದು ಸಾಕು ಅಂದಿದ್ದಾರೆ.
Discussion about this post