ಕಲಿಯುಗದಲ್ಲಿ ಕೆಲವೊಮ್ಮೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಅನ್ನುವ ಪಾಲಿಸಿ ಜಾರಿಗೆ ಬರುತ್ತದೆ. ಹಾಗಂತ ಅದು ಎಲ್ಲಾ ಸಂದರ್ಭಗಳಲ್ಲಿ ಅಲ್ಲ.
ಸ್ಪೇನ್ ನಲ್ಲೂ ಇಂತಹುದೇ ಒಂದು ಘಟನೆ ನಡೆದಿದ್ದು, ಅತ್ಯಾಚಾರ ಮಾಡಲು ಮಹಿಳೆ ಎರಗಿದವನು ತುಂಡಾದ ಮರ್ಮಾಂಗ ಹಿಡಿದು ಒಂದ್ಸಲ ಜೋಡಿಸಿ ಬಿಡಿ ಡಾಕ್ಟ್ರೆ ಎಂದು ಆಸ್ಪತ್ರೆಗೆ ಓಡಿದ ಪ್ರಸಂಗ ನಡೆದಿದೆ.
The sun ಪತ್ರಿಕೆಯ ವರದಿ ಪ್ರಕಾರ ಸ್ಪೇನ್ ನಲ್ಲಿ ಈ ಘಟನೆ ನಡೆದಿದ್ದು, ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಕಾಮುಕ ಮ್ಯಾನೇಜರ್ ಅಲ್ಲಿನ ಮಹಿಳಾ ಸಿಬ್ಬಂದಿಯ ಮೇಲೆ ಕಣ್ಣು ಹಾಕಿದ್ದ. ಪ್ರತೀ ಸಲ ಲೈಂಗಿಕ ಕ್ರಿಯೆಗಾಗಿ ಪೀಡಿಸುತ್ತಿದ್ದ ಆತ ಹಿಂಸೆ ನೀಡುತ್ತಿದ್ದ. ಆದರೆ ಮಹಿಳಾ ಸಿಬ್ಬಂದಿ ಮ್ಯಾನೇಜರ್ ಆಮಿಷಗಳಿಗೆ, ಒತ್ತಾಯಕ್ಕೆ ಮಣಿದಿರಲಿಲ್ಲ.
ತಾನು ಬಯಸಿದ್ದು ಸಿಗೋದಿಲ್ಲ ಎಂದು 35ರ ಹರೆಯದ ಮ್ಯಾನೇಜರ್ ಗೆ ಅರಿವಾಯ್ತೋ, ರಾಕ್ಷಸ ಸ್ವರೂಪ ತಾಳಿದ್ದಾನೆ. ಜೂನ್ 1 ರಂದು ಸ್ಥಳೀಯ ಸಮಯ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರ ಪ್ರಯತ್ನ ಮಾಡಿದ್ದಾನೆ. ಈ ವೇಳೆ ರಕ್ಷಣೆ ಸಲುವಾಗಿ ಕೈಯಲ್ಲಿದ್ದ ಚಾಕುವಿನಿಂದ ಮ್ಯಾನೇಜರ್ ಮರ್ಮಾಂಗವನ್ನು ಮಹಿಳೆ ತುಂಡರಿಸಿದ್ದಾಳೆ. ಅಷ್ಟೇ ಭವಿಷ್ಯ ಮುಖ್ಯ ಎಂದು ಅರಿತ ಮ್ಯಾನೇಜರ್ ಮರ್ಮಾಂಗದೊಂದಿಗೆ ಆಸ್ಪತ್ರೆಗೆ ದೌಡಾಯಿಸಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ವೈದ್ಯರು ಮರ್ಮಾಂಗವನ್ನು ಶಸ್ತ್ರ ಚಿಕಿತ್ಸೆ ಮೂಲಕ ಜೋಡಿಸಿದ್ದಾರೆ. ಇದೀಗ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಅನ್ನುವ ಸುದ್ದಿ ಕೂಡಾ ಬಂದಿದೆ.
ಈ ನಡುವೆ ಮ್ಯಾನೇಜರ್ ಹಾಗೂ ಮಹಿಳಾ ಸಿಬ್ಬಂದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ.
ಅಂದ ಹಾಗೇ ಮ್ಯಾನೇಜರ್ ಬಾಂಗ್ಲಾದೇಶದ ಪ್ರಜೆ ಎಂದು ಗೊತ್ತಾಗಿದೆ.
Discussion about this post