ಬಂಟ್ವಾಳ (Bantwal) ಉದ್ಧಾರವಾಯ್ತು ನಾಯಿ ಪದಕ್ಕೆ ಸಂಬಂಧಿಸಿದಂತೆ ಅಧಿಕಾರಿ ಮತ್ತು ಪುರಸಭಾ ಸದಸ್ಯರು ಕಿತ್ತಾಡಿಕೊಡಿದ್ದಾರೆ
ಬಂಟ್ವಾಳ : ಒಳ ಚರಂಡಿ ಮತ್ತು ನೀರು ಸರಬರಾಜು ವಿಚಾರಕ್ಕೆ ಸಂಬಂಧಿಸಿದಂತೆ ಕರೆದಿದ್ದ ವಿಶೇಷ ಸಭೆಯಲ್ಲಿ ಅಧಿಕಾರಿಗಳು ಮತ್ತು Bantwal ಪುರಸಭಾ ಸದಸ್ಯರು ಕಿತ್ತಾಡಿಕೊಂಡ ಘಟನೆ ಇಂದು ನಡೆದಿದೆ. ನೀವು ನನ್ನ ನಾಯಿ ಅಂದ್ರಿ, ನೀವು ನನ್ನ ನಾಯಿ ಅಂದ್ರಿ ಅಂತಾ ಪರಸ್ಪರ ಜವಾಬ್ದಾರಿ ಮರೆತು ಕಿತ್ತಾಡಿಕೊಂಡಿದ್ದಾರೆ. ಪರಿಸ್ಥಿತಿ ನೋಡಿದರೆ ಇಂತಹ ಅಧಿಕಾರಿಗಳಿಂದ ಬಂಟ್ವಾಳ (Bantwal) ಉದ್ಧಾರವಾಗಲು ಖಂಡಿತಾ ಸಾಧ್ಯವಿಲ್ಲ
ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆ ವಿಶೇಷ ಸಭೆ ಪ್ರಾರಂಭವಾಗುತ್ತಿದ್ದಂತೆ, ಈ ಹಿಂದಿನ ಸಭೆಗೆ ನೀವು ಯಾಕೆ ಬರಲಿಲ್ಲ ಎಂದು ಶರೀಫ್ ಅವರು ಪುರಸಭಾ ಸದಸ್ಯ ಎ. ಗೋವಿಂದ ಪ್ರಭು ಅವರನ್ನು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಗೋವಿಂದ ಪ್ರಭು, ನನಗೆ ನೋಟಿಸ್ ಬಂದಿಲ್ಲ ಅಂದಿದ್ದಾರೆ.
Read : Agneepath naxal : ಅಗ್ನಿಪಥ ಹಿಂಸಾಚಾರದಲ್ಲಿ ನಕ್ಸಲ್ ಕೈವಾಡ
ಈ ವೇಳೆ ಮಧ್ಯಪ್ರವೇಶಿಸಿದ ಸಿಬ್ಬಂದಿ ರಝಾಕ್, ನಿಮಗೆ ನಾನು ಸೌಜನ್ಯವಾಗಿ ಹೇಳಿದ್ದೇನೆ ಅಂದಿದ್ದಾರೆ. ಇದರಿಂದ ಕೆರಳಿದ ಪ್ರಭು, ನೀನು ಯಾರು ಹೇಳಲು, ಸಂಬಂಧಪಟ್ಟವರು ಸತ್ತಿದ್ದಾರೆಯೇ ಎಂದು ದನಿ ಏರಿಸಿದ್ದಾರೆ. ಈ ವೇಳೆ ಪುರಸಭಾ ಮುಖ್ಯಾಧಿಕಾರಿ ಎದ್ದು ನಿಂತು ನೀನು ಸಾಯಿ, ನಮಗೆ ಸಾಯಲು ಹೇಳುತ್ತೀಯಾ ಎಂದು ಏಕವಚನದಲ್ಲೇ ಎಗರಾಡಿದ್ದಾರೆ.
ಪುರಸಭಾ ಮುಖ್ಯಾಧಿಕಾರಿ ವರ್ತನೆ ವಿರುದ್ಧ ಸಿಡಿದೆದ್ದ, ಬಿಜೆಪಿ ಸದಸ್ಯರು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಈ ವೇಳೆ ರಾಘವೇಂದ್ರ ಅನ್ನುವ ಸಿಬ್ಬಂದಿ ಗೋವಿಂದ ಪ್ರಭು ನಮ್ಮ ಮೇಲೆ 5 ಲಕ್ಷ ಲಂಚದ ಆರೋಪ ಮಾಡಿದ್ದಾರೆ ಅಂದಿದ್ದಾರೆ.
ಈ ವೇಳೆ ಮಾತಿನ ಚಕಮಕಿ ನಡೆಯುತ್ತಿದ್ರೆ, ಮುಖ್ಯಾಧಿಕಾರಿ ಎದ್ದು ನಿಂತು ನನಗೆ ನಾಯಿ ಎಂದು ನೀವು ಬೈದಿದ್ದೀರಿ ಅಂದಿದ್ದಾರೆ. ಇದಕ್ಕೆ ನಾನು ನಿಮಗೆ ನಾಯಿ ಅಂದಿದ್ದು ಹೌದು, ನೀವು ನನಗೆ ನಾಯಿ ಅಂದ್ರಿ ಅದಕ್ಕೆ ನಾನು ನಾಯಿ ಅಂದಿದ್ದೇನೆ ಅಂದಿದ್ದಾರೆ.
Discussion about this post