ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಯುವಕನ ಇಂಡೋನೇಷ್ಯಾ ಕ್ರಿಕೆಟ್ ಸಾಧನೆ
ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಯುವಕನೊಬ್ಬ ಇದೀಗ ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ಟೀಂಗೆ ಆಯ್ಕೆಯಾಗಿದ್ದಾರೆ. ಕುಕ್ಕಿಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹುಣಸೆಬೆಟ್ಟು ಮಹಾಬಲ ಶೆಟ್ಟಿಯವರ ಪುತ್ರ ಧನೇಶ್ ಶೆಟ್ಟಿ ಈ ಸಾಧನೆ ಮಾಡಿದ ಯುವಕ. ತಮ್ಮೂರಿನ ಹುಡುಗನ ಸಾಧನೆಗೆ ಇದೀಗ ಇಡೀ ಊರು ಸಂಭ್ರಮಿಸುತ್ತಿದೆ.
ಇದನ್ನೂ ಓದಿ ; ಊಟ ಇಲ್ಲ ಅನ್ನಬೇಡಿ : ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಕಮಿಟಿಗೆ ಶಾಸಕರ ಸೂಚನೆ
ಹಲವು ವರ್ಷಗಳಿಂದ ಇಂಡೋನೇಷ್ಯಾದಲ್ಲೇ ಪತ್ನಿಯೊಂದಿಗೆ ನೆಲೆಸಿರುವ ಧನೇಶ್ ಶೆಟ್ಟಿ, ಇಂಡೋನೇಷ್ಯಾ ಆರೋಗ್ಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೇ ಧನೇಶ್ ಅವರಿಗೆ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ. ಅದರಲ್ಲೂ ಕ್ರಿಕೆಟ್ ಅಂದ್ರೆ ಅಚ್ಚುಮೆಚ್ಚು.
ಇಂಡೋನೇಷ್ಯಾದಲ್ಲೂ ತಮ್ಮ ಕಮ್ಮ ಕ್ರೀಡಾ ಸಾಧನೆ ಮುಂದುವರಿಸಿದ ಧನೇಶ್ ಇದೀಗ ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಕಾಂಬೋಡಿಯಾ ಜೊತೆಗಿನ ಪಂದ್ಯಾಟದಲ್ಲಿ 20-20 ಟೂರ್ನಿಯ ನಾಲ್ಕು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಪಡೆದು ಸಾಧನೆಯನ್ನೂ ಮಾಡಿದ್ದಾರೆ.
Bantwal youth Dhanesh Shetty selected for Indonesian national cricket team
Dhanesh Shetty, hailing from Kukkippadi’s Hunase Bettu and son of Mahabala Shetty, has earned the honor of representing Indonesia in cricket. Dhanesh, who is married and currently employed with his wife at a healthcare institution in Indonesia, commenced his educational journey at Wamadapadav Government School for primary education.
Discussion about this post