ಬೆಂಗಳೂರು : ಕೊರೋನಾ ಸೋಂಕಿನ ಮೂರನೇ ಅಲೆ ತೀವ್ರವಾಗಿ ಹರಡುತ್ತಿದೆ. ಅದು ಹರಡುತ್ತಿರುವ ವೇಗ ಗಮನಿಸಿದರೆ ನಿತ್ಯ ಒಂದು ಲಕ್ಷ ಕೇಸ್ ಗಳು ವರದಿಯಾದರು ಅಚ್ಚರಿ ಇಲ್ಲ. ಅದರಲ್ಲೂ ತೀರಾ ಹೆಚ್ಚು ಅನ್ನಿಸುವಷ್ಟು ಸುತ್ತಾಡುವ ಮಂದಿಗೆ ಹಾಗೂ ಅವರೊಂದಿಗೆ ಸಂಪರ್ಕದಲ್ಲಿರುವವರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ.
ಈಗಾಗಲೇ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದ ವಿವಿಧ ಜಿಲ್ಲೆಗಳ ಪೊಲೀಸರಿಗೆ ಸೋಂಕು ಅಂಟಿದ್ದು, ಅದೃಷ್ಯ ಅನ್ನುವಂತೆ ಯಾರಿಗೂ ಗಂಭೀರ ಆರೋಗ್ಯ ಸಮಸ್ಯೆಯಾಗಿಲ್ಲ. ಇನ್ನು ಬೆಂಗಳೂರಿನಲ್ಲೂ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದ್ದು, ಏನಿಲ್ಲ ಅಂದರೂ 1500 ಪೊಲೀಸರು ಮೂರನೇ ಅಲೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಈ ನಡುವೆ ನಗರದ 7 ಡಿಸಿಪಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ರಾಮನಗರದಿಂದ ವರ್ಗಾವಣೆಯಾಗಿ ಬಂದಿರುವ ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಅವರಿಗೆ ಸೋಂಕು ದೃಢಪಟ್ಟಿದ್ದು, ಕಾಂಗ್ರೆಸ್ ಪಾದಯಾತ್ರೆಯ ಭದ್ರತೆಯ ಜವಾಬ್ದಾರಿಯನ್ನು ಇದೇ ಗಿರೀಶ್ ವಹಿಸಿಕೊಂಡಿದ್ದರು.
ಇನ್ನುಳಿದಂತೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಅಗ್ನೇಯ ವಿಭಾಗದ ಡಿಸಿಪಿ ಶ್ರೀನಿವಾಸ ಮಹಾದೇವ ಜೋಶಿ, ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್, CAR ಕೇಂದ್ರ ವಿಭಾಗದ ಡಿಸಿಪಿ ಸುಜಿತ ಸಲ್ಮಾನ್, ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ.
Discussion about this post