ಬೆಂಗಳೂರು : ಕೇರಳಕ್ಕೆ ಹೋಗುವವರು ಹಾಗೂ ಕೇರಳದಿಂದ ಬಂದವರ ಜೊತೆಗೆ ಬೆರೆಯುವವರು ಒಂದಿಷ್ಟು ದಿನಗಳ ಕಾಲ ಎಚ್ಚರಿಕೆ ವಹಿಸುವುದು ಉತ್ತಮ. ಕೇರಳಕ್ಕೆ ಹೋಗಿ ಬಂದವರ ಜೊತೆಗೆ ಕನಿಷ್ಟ 14 ದಿನಗಳ ಕಾಲ ಅಂತರ ಕಾಪಾಡಿಕೊಳ್ಳುವುದು ಉತ್ತಮ. ಜೊತೆಗೆ ಕೇರಳಕ್ಕೆ ಹೋಗಿ ಬಂದವರು ಕೂಡಾ ಆರೋಗ್ಯ ಇಲಾಖೆಯ ಸಲಹೆಯಂತೆ ಕ್ವಾರಂಟೈನ್ ಗೆ ಒಳಗಾಗುವುದು ಉತ್ತಮ. ಯಾಕಂದ್ರೆ ಕೇರಳಕ್ಕೆ ಹೋಗಿ ಬಂದವರಲ್ಲೇ ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿದೆ. ಹೀಗೆ ಬೆಂಗಳೂರಿನಲ್ಲಿ ಕೇರಳಕ್ಕೆ ಹೋಗಿ ಬಂದ ಒಂದೇ ಕುಟುಂಬದ ನಾಲ್ವರಿಗೆ ಸೋಂಕು ತಗುಲಿದೆ.
ಯಲಹಂಕ ವಲಯದ ಅಟ್ಟೂರಿನ ಫಾರ್ಚೂನ್ ಟೆಂಡರ್ ಅಪಾರ್ಟ್ ಮೆಂಟ್ ನ ಕೇರಳ ಮೂಲದ ಕುಟುಂಬವೊಂದರ ನಾಲ್ಕು ಮಂದಿಗೆ ಕೊರೋನಾ ಸೋಂಕು ತಗುಲಿದೆ. ಕಳೆದ ನಾಲ್ಕು ದಿನಗಳ ಹಿಂದೆ ಸಂಬಂಧಿಕರ ಮದುವೆ ಸಲುವಾಗಿ ಕೇರಳಕ್ಕೆ ಇವರೆಲ್ಲಾ ಹೋಗಿ ಬಂದಿದ್ದರು. ಮದುವೆ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಎರಡು ದಿನಗಳ ಹಿಂದೆ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಈ ವ್ಯಕ್ತಿ ಮದುವೆಗೆ ಬಂದ ಎಲ್ಲರೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದರು.
ಅದೇ ಹಿನ್ನಲೆಯಲ್ಲಿ ಬೆಂಗಳೂರಿನ ಕುಟುಂಬವು ಪರೀಕ್ಷೆ ಮಾಡಿಸಿಕೊಂಡ ವೇಳೆ ಮಕ್ಕಳು ಸೇರಿ ನಾಲ್ವರಿಗೆ ಕೊರೋನಾ ಸೋಂಕು ತಗುಲಿರುವುದು ಗೊತ್ತಾಗಿದೆ. ಇದೀಗ ಪೂರ್ತಿ ಕುಟುಂಬ ಹೋಮ್ ಐಸೋಲೇಷನ್ ಗೆ ಒಳಗಾಗಿದೆ.
Discussion about this post