ದಿನಕ್ಕೊಂದು ಸೇಬು ತಿನ್ನಿ, ಡಾಕ್ಟರ್ ದೂರವಿರಿಸಿ ಅನ್ನುವ ಮಾತಿದೆ. ಆದರೆ ಈಗ ಹಾಗಿಲ್ಲ, ಡಾಕ್ಟರ್ ತಿಂದ ಮೇಲೆ ಡಾಕ್ಟರ್ ಭೇಟಿಯಾಗಲೇಬೇಕು. ಕಾರಣ ಸೇಬಿಗೆ ಸಿಂಪಡಿಸಿರುವ ಮೆಡಿಸಿನ್, ಅದರ ರಕ್ಷಣೆಗೆ ಸವರಿರುವ ವ್ಯಾಕ್ಸ್ ಆರೋಗ್ಯ ಕೆಡಿಸುತ್ತಿದೆ.
ಹಾಗಂತ ಸೇಬು ಮಾತ್ರವಲ್ಲ ಅದ್ಯಾವ ಹಣ್ಣು, ತರ್ಕಾರಿ,ಸೊಪ್ಪುಗಳನ್ನು ತಿನ್ನಬೇಕಾದರೂ ಸಾವಿರ ಸಲ ಯೋಚಿಸಬೇಕಾಗುತ್ತದೆ.ಸಂರಕ್ಷಣೆ ಸಲುವಾಗಿ ಹಾಕುತ್ತಿರುವ ಮೆಡಿಸಿನ್ ವಿಷವಾಗುತ್ತಿದೆ. ಈ ಸಮಸ್ಯೆಯಿಂದ ಮುಕ್ತವಾಗಬೇಕಾದರೆ ಮನೆಯಲ್ಲೇ ಸಾವಯವ ರೀತಿಯಲ್ಲಿ ಸೊಪ್ಪು ತರ್ಕಾರಿ ಬೆಳೆಸಿ ದೇಹಕ್ಕೆ ಸೇರುವ ವಿಷದ ಪ್ರಮಾಣ ಕಡಿಮೆ ಮಾಡಬಹುದು. ಇದೀಗ ಬಾಳೆಹಣ್ಣು ತಿನ್ನಬೇಕಾದರೂ ಸಾವಿರ ಸಲ ಯೋಚಿಸಬೇಕಾಗಿದೆ. ಇದಕ್ಕೆ ಕಾರಣ ಫೇಸ್ ಬುಕ್ ನಲ್ಲಿ ನಡೆದಿರುವ ಚರ್ಚೆ.
ಕೃಷಿಕ ಅನ್ನುವ ಫೇಸ್ ಬುಕ್ ನಲ್ಲಿ ರೈತರೊಬ್ಬರು “ ಬಾಳೆಗೊನೆ ತುದಿಗೆ 6 ಇಂಚು ಬಿಟ್ಟು ಕಟ್ ಮಾಡಿ ಅದ್ಕೆ ಸಗಣಿ ಮತ್ತು ಯುರಿಯ್ mix ಮಾಡಿ ತುದಿಗೆ ಕಟ್ದ್ರೆ ಕಾಯಿ ದಪ್ಪ ಆಗುತ್ತೆ ಅಂತ ನಿಜನ್ ಯಾರಾದ್ರೂ ಮಾಡಿದವರು ಇದ್ರೆ ಹೇಳಿ ಮತ್ತೆ ಅದರ ಜೊತೆ ಮತ್ತೆ ಏನಾದ್ರು mix ಮಾಡಬೇಕೆ ತಿಳಿಸಿ” ಅಂದಿದ್ದಾರೆ.
ಇದಕ್ಕೆ ಹತ್ತಾರು ಸಲಹೆಗಳು ಬಂದಿದೆ. ಕೆಲವರು ಜೀವಾಮೃತ ಕಟ್ಟಿ ಅಂದ್ರೆ, ಮತ್ತೆ ಕೆಲವರು ಯೂರಿಯಾ, ಪೊಟ್ಯಾಷ್ ಕಟ್ಟಿ ಅಂದಿದ್ದಾರೆ. ಮತ್ತೆ ಕೆಲವರು ಕೆಮಿಕಲ್ ಸೇರಿಸಬೇಡಿ, ಯೂರಿಯಾ ಹಾಕಬೇಡಿ ಆರೋಗ್ಯಕ್ಕೆ ಹಾನಿ ಅಂದಿದ್ದಾರೆ. ಇದಕ್ಕೆ ಶಾಕಿಂಗ್ ಉತ್ತರ ಬಂದಿದ್ದು, “ ಅದನ್ನ ತಿನ್ನೋ ಮನುಷ್ಯರು ನೊಡ್ಕೋತಾರ ಬಿಡಿ, ಚೀಪ್ ಮತ್ತು ನೋಡೋಕೆ ಸೈಜ್ ಚೆನ್ನಾಗಿರಬೇಕು ಅಂತ ಅದೇ ಮನುಷ್ಯರು ಅಲ್ವ ಹೇಳೋದು? ರೈತ ಒಬ್ಬ ಸಾಯಬೇಕು, ಉಳಿದವರೆಲ್ಲ ಚೆನ್ನಾಗಿ ಇರ್ಬೇಕು ಅಂದ್ರೆ ಹೆಂಗೆ ಸ್ವಾಮಿ ಅಂದಿದ್ದಾರೆ.
ಈ ರೈತರು ಕೊಟ್ಟಿರುವ ಉತ್ತರ ನಿಜಕ್ಕೂ ಚರ್ಚೆಯಾಗಲೇಬೇಕು. ಬೆಲೆಯೂ ಕಡಿಮೆ ಇರಬೇಕು ಆದರೆ ಕಾಯಿ ಸೈಜ್ ಇರಬೇಕು ಅಂದಾಗ ಬೆಳೆಗಾರನಿಗೆ ಅಡ್ಡ ದಾರಿ ಹಿಡಿಯದೆ ವಿಧಿಯಿಲ್ಲ.
Discussion about this post