ಬಾಗಲಕೋಟೆ ( bagalkot ) ಕೆರೂರು ಘರ್ಷಣೆಯಲ್ಲಿ ಗಾಯಗೊಂಡ ಹಿಂದೂ ಸಂಘಟನೆ ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಭೇಟಿಯಾಗೋದಿಲ್ಲ ಅಂದಿದ್ದಾರೆ
ಬಾಗಲಕೋಟೆ : ಬಾದಾಮಿ ತಾಲೂಕಿನ ಕೆರೂರು ಗುಂಪು ( bagalkot ) ಘರ್ಷಣೆಯಲ್ಲಿ ಗಾಯಗೊಂಡವರ ಆರೋಗ್ಯವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಇಂದು ವಿಚಾರಿಸಿದ್ದಾರೆ. ಈ ವೇಳೆ ಗಾಯಗೊಂಡ ಮುಸ್ಲಿಂ ವ್ಯಕ್ತಿಗಳು ಹಾಗೂ ಅವರ ಕುಟುಂಬಸ್ಥರು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ.
ಸಿದ್ದರಾಮಯ್ಯ ಅವರ ಟೂರ್ ಪ್ಲಾನ್ ಪ್ರಕಾರ ಗಾಯಗೊಂಡ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನೂ ಭೇಟಿಯಾಗಬೇಕಾಗಿತ್ತು. ಆದರೆ ಹಿಂದೂ ಸಂಘಟನೆಯ ಗಾಯಾಳುಗಳು ಸಿದ್ದರಾಮಯ್ಯ ನಮ್ಮ ಭೇಟಿಯಾಗಲು ಬರೋದು ಬೇಡ ಅಂದಿದ್ದಾರೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಸಿದ್ದರಾಮಯ್ಯ ಅವರ ಆಸ್ಪತ್ರೆ ಭೇಟಿ ರದ್ದಾಗಿದೆ. ಹಾಗಿದ್ದರೂ ಗೋಪಾಲ ಅನ್ನುವ ಗಾಯಾಳುವನ್ನು ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ಈ ವೇಳೆ ಗಾಯಾಳು ತಾಯಿ , ಹಿಂದುಗಳಿಗೆ ಕಿಮ್ಮತ್ತಿಲ್ಲವೇ ಎಂದು ಸಿದ್ದರಾಮಯ್ಯನವರನ್ನೇ ಪ್ರಶ್ನಿಸಿದ್ದಾರೆ. ಇದಾದ ಬಳಿಕ ಗೋಪಾಲ ಅವರಿಗೆ ಪರಿಹಾರ ಹಣ ಕೊಡಲು ಸಿದ್ದರಾಮಯ್ಯ ಮುಂದಾದ್ರು, ಆದರೆ ಅದನ್ನು ಸ್ವೀಕರಿಸಲು ಗೋಪಾಲ ಅವರ ಕುಟುಂಬಸ್ಥರು ನಿರಾಕರಿಸಿದ್ದಾರೆ.
ಇದನ್ನೂ ಓದಿ : mangalore liquor : ದಕ್ಷಿಣ ಕನ್ನಡ ಕುಡುಕರ ಜಿಲ್ಲೆಯಾಗುತ್ತಿದೆಯೇ…. ಮದ್ಯ ಮಾರಾಟದಲ್ಲಿ ಜಿಲ್ಲೆಗೆ ಅಗ್ರ ಸ್ಥಾನ
ಈ ಘಟನೆಯಲ್ಲಿ ಗಾಯಗೊಂಡಿದ್ದ ಹಿಂದೂ ಜಾಗರಣ ವೇದಿಕೆಯ ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ, ಯಮನೂರ ಸೇರಿದಂತೆ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಘಟನೆಯಲ್ಲಿ ಮುಸ್ಲಿಂ ಸಮುದಾಯದ ಐವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಗೆ ಸಿದ್ದರಾಮಯ್ಯ ಬರೋದು ಬೇಡ ಎಂದು ಬಾಗಲಕೋಟೆ ಎಸ್ಪಿಯವರಿಗೆ ಗಾಯಾಳುಗಳು ತಿಳಿಸಿದ ಹಿನ್ನಲೆಯಲ್ಲಿ ಭೇಟಿ ರದ್ದುಗೊಳಿಸಲಾಯ್ತು. ಕೇವಲ ಮುಸ್ಲಿಂ ಗಾಯಾಳುಗಳನ್ನು ಸಿದ್ದರಾಮಯ್ಯ ಭೇಟಿಯಾಗಬೇಕಾಯ್ತು.
ನಿಮ್ಮ ಹಣ ಯಾರಿಗೆ ಬೇಕು…. ಸಿದ್ದರಾಮಯ್ಯ ಕೊಟ್ಟ ಕಾಸನ್ನು ವಾಹನದ ಮೇಲೆ ಎಸೆದ ಮುಸ್ಲಿಂ ಮಹಿಳೆ
ಕ್ಷೇತ್ರ ಬಿಡುವ ಕಾರಣಕ್ಕೆ ಗೆಲ್ಲಿಸಿದವರನ್ನೇ ಮರೆತು ಬಿಟ್ರ ಸಿದ್ದರಾಮಯ್ಯ ಅನ್ನುವ ಅನುಮಾನ ಶುರುವಾಗಿದೆ
ಬಾಗಲಕೋಟೆ : ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಜುಲೈ 6 ರಂದು ನಡೆದ ಎರಡು ಗುಂಪುಗಳ ಘರ್ಷಣೆ ಗಾಯಗೊಂಡವರನ್ನು ಭೇಟಿಯಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ್ದಾರೆ. ನಗರದ ಆಶೀರ್ವಾದ ಆಸ್ಪತ್ರೆಗೆ ಭೇಟಿ ಕೊಟ್ಟ ಅವರು ಮುಸ್ಲಿಂ ಗಾಯಾಳುಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ನಾಲ್ವರು ಗಾಯಾಳುಗಳಿಗೆ ತಲಾ 50 ಸಾವಿರದಂತೆ ಎರಡು ಲಕ್ಷ ರೂಪಾಯಿ ಪರಿಹಾರ ಹಣ ನೀಡಿದ್ದಾರೆ.
ಈ ವೇಳೆ ಆಸ್ಪತ್ರೆಯಲ್ಲೇ ಹಣ ಪಡೆಯಲು ನಿರಾಕರಿಸಿದ ಗಾಯಾಳುಗಳು ನಿಮ್ಮ ಹಣ ನಮಗೆ ಬೇಕಾಗಿಲ್ಲ. ನೀವು ಅನ್ಯಾಯವಾದ ಸಂದರ್ಭದಲ್ಲಿ ಬರಲಿಲ್ಲ. ಈಗ ಬಂದಿದ್ದೀರಿ ಇದ್ಯಾವ ನ್ಯಾಯ, ನಮಗೆ ನಿಮ್ಮ ಹಣ ಬೇಕಾಗಿಲ್ಲ, ನ್ಯಾಯಬೇಕು ಎಂದು ಆಗ್ರಹಿಸಿದ್ದಾರೆ. ಈ ವೇಳೆ ತೀವ್ರ ಮುಜುಗರಕ್ಕೆ ಗುರಿಯಾದ ಸಿದ್ದರಾಮಯ್ಯ ಹೀಗೋ ಹಣವನ್ನು ಗಾಯಾಳುಗಳ ಕೈಯಲ್ಲಿ ಇಟ್ಟು ಬಂದಿದ್ದಾರೆ.
ಕಾರು ಹತ್ತಿ ಕೂತ ವೇಳೆ ಕಾರಿನ ಬಳಿ ಬಂದ ಮುಸ್ಲಿಂ ಮಹಿಳೆಯರು ನಿಮ್ಮ ಹಣ ಯಾರಿಗೆ ಬೇಕು,ನಮಗೆ ಶಾಂತಿ ಬೇಕಾಗಿದೆ. ಹಿಂದೂ ಮತ್ತು ಮುಸ್ಲಿಂರು ಅಣ್ಣ ತಮ್ಮಂದಿರಂತೆ ಬದುಕಬೇಕಾಗಿದೆ.ನಿಮ್ಮ ರಾಜಕೀಯ, ನಿಮ್ಮ ಹಣ ನಮಗೆ ಬೇಡ. ಮೊದಲು ನ್ಯಾಯ ಕೊಡಿಸಿ ಅಂದಿದ್ದಾರೆ.
ಆದರೆ ಅವರ ಮನವಿಯನ್ನು ಕೇಳುವ ಸ್ಥಿತಿಯಲ್ಲಿ ಸಿದ್ದರಾಮಯ್ಯ ಇರಲಿಲ್ಲ. ಮುಸ್ಲಿಂ ಮಹಿಳೆಯರನ್ನು ಸಮಾಧಾನ ಪಡಿಸುವುದರಲ್ಲೇ ಸಿದ್ದರಾಮಯ್ಯ ನಿರತರಾಗಿದ್ದರು. ಯಾಕೋ ಇದು ಆಗುವ ಮಾತಲ್ಲ, ಜನರ ಆಕ್ರೋಶ ತಡೆಯೋದು ಕಷ್ಟ ಎಂದು ಅರಿತ ಸಿದ್ದರಾಮಯ್ಯ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಈ ವೇಳೆ ಆಕ್ರೋಶಗೊಂಡ ಮುಸ್ಲಿಂ ಮಹಿಳೆ 2 ಲಕ್ಷ ರೂಪಾಯಿ ಹಣದ ಕಟ್ಟನ್ನು ಸಿದ್ದರಾಮಯ್ಯ ವಾಹನಕ್ಕೆ ಎಸೆದಿದ್ದಾರೆ. ಅದು ಅವರ ಬೆಂಗಾವಲು ವಾಹನಕ್ಕೆ ಬಿದ್ದಿದೆ.
ಘಟನೆ ಹಿನ್ನಲೆ
ಹುಡುಗಿಯರನ್ನು ಚುಡಾಯಿಸಿದ ವಿಚಾರ ಹಾಗೂ ಹಳೆಯ ದ್ವೇಷದ ಕಾರಣ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಜುಲೈ 6 ರಂದು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ಚಾರು ಇರಿತ ಕೂಡಾ ನಡೆದಿತ್ತು. ಘಟನೆಯಲ್ಲಿ ಹಿಂದೂ ಸಂಘಟನೆಯ ಅರುಣ, ಯಮನೂರ, ಲಕ್ಷ್ಮಣ ಅನ್ನುವವರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಮತ್ತೊಂದು ಕಡೆ ಬಂದೇನಾವಾಜ್ ಸೇರಿ ಕೆಲವರು ಆಸ್ಪತ್ರೆ ಸೇರಿದ್ದರು.
ಇದಾದ ಬಳಿಕ ಪಟ್ಟಣ ಉದ್ವಿಗ್ನಗೊಂಡಿತ್ತು. ತಳ್ಳುವ ಗಾಡಿಗೆ ಬೆಂಕಿ, ಅಂಗಡಿ ಧ್ವಂಸ ಸೇರಿದಂತೆ ಅನೇಕ ಕೃತ್ಯಗಳು ನಡೆದಿತ್ತು. ಬಳಿಕ ಸೆಕ್ಷನ್ 144ನ್ನು ಜಾರಿಗೊಳಿಸಲಾಗಿತ್ತು. ಈ ನಡುವೆ ಆಸ್ಪತ್ರೆಗೆ ಭೇಟಿ ನೀಡಿದ್ದ ಶ್ರೀರಾಮುಲು, ಯತ್ನಾಳ್, ನಿರಾಣಿ ಸೇರಿದಂತೆ ಅನೇಕ ಬಿಜೆಪಿ ನಾಯಕರು, ಹಿಂದೂ ಸಂಘಟನೆ ಕಾರ್ಯಕರ್ತರ ಆರೋಗ್ಯ ವಿಚಾರಿಸಿದ್ದರು, ಪರಿಹಾರ ಕೊಟ್ಟು ಬಂದಿದ್ದರು. ಆದರೆ ಗಾಯಗೊಂಡ ಮುಸ್ಲಿಂರ ಆರೋಗ್ಯ ವಿಚಾರಿಸಲು ಅದ್ಯಾವ ಕಾಂಗ್ರೆಸ್ ನಾಯಕರು ಬಂದಿರಲಿಲ್ಲ.
Discussion about this post