ತಿಮಿಂಗಿಲ ಸ್ವರೂಪಿ ಸರ್ಕಾರಿ ಅಧಿಕಾರಿಗಳು ತಾವು ತಿಂದು ತೇಗಿದ ಹಣದಲ್ಲಿ ಆಸ್ತಿ ಪಾಸ್ತಿ, ಬಂಗಲೆ, ವ್ಯವಹಾರ ಸಾಮಾಜ್ಯವನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಯಾವುದೂ ಕೂಡಾ ತಮ್ಮ ಹೆಸರಿನಲ್ಲಿರುವುದಿಲ್ಲ. ಬದಲಾಗಿ ತಮ್ಮ ಕುಟುಂಬದ ಸದಸ್ಯರು, ಸಂಬಂಧಿಗಳ ಹೆಸರಿನಲ್ಲಿರುತ್ತದೆ.
ಇಂತಹ ಆಸ್ತಿಗಳ ಮಾಹಿತಿ ಸಂಗ್ರಹಕ್ಕೆ ಮುಂದಾಗಿರುವ ಸರ್ಕಾರ, ಚರಾಸ್ತಿಯ, ಸ್ಥಿರಾಸ್ತಿ ವ್ಯವಹಾರಗಳನ್ನು 2 ತಿಂಗಳೊಳಗೆ ಸಲ್ಲಿಸುವಂತೆ ಆದೇಶಿಸಿದೆ, ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಾಗರತ್ನ ವಿ ಪಾಟೀಲ್ ಅವರು ಸುತ್ತೋಲೆ ಹೊರಡಿಸಿದ್ದು, ರಾಜ್ಯ ಸರ್ಕಾರಿ ನೌಕರರು ತಮ್ಮ ಹಾಗೂ ತಮ್ಮ ಕುಟುಂಬದ ಇತರ ಸದಸ್ಯರ ಹೆಸರಿನಲ್ಲಿ ಖರೀದಿಸಿರುವ ಚರಾಸ್ತಿಯ, ಸ್ಥಿರಾಸ್ತಿ ವ್ಯವಹಾರಗಳ ವಿವರ ಸಲ್ಲಿಸುವಂತೆ ಸೂಚಿಸಿದ್ದಾರೆ.
2021ರ ನಿಯಮಗಳ ನಿಯಮ 24(3)ರ ಅನುಸಾರ ತನ್ನೊಂದಿಗೆ ಅಧಿಕೃತ ವ್ಯವಹಾರವನ್ನು ಹೊಂದಿರುವ ವ್ಯಕ್ತಿಯನ್ನು ಹೊರತುಪಡಿಸಿ, ಬೇರೆ ಮೂಲಗಳಿಂದ ತನ್ನ ಹೆಸರಿನಲ್ಲಾಗಲಿ ಅಥವಾ ತನ್ನ ಕುಟುಂಬದ ಯಾವುದೇ ಸದಸ್ಯನ ಹೆಸರಿನಲ್ಲಾಗಲಿ ಗುತ್ತಿಗೆಯ, ಅಡಮಾನದ, ಖರೀದಿಯ, ಮಾರಾಟದ, ಉಡುಗೊರೆಯ ಮೂಲಕ ಬಂದ ಚರ ಮತ್ತು ಸ್ಥಿರ ಆಸ್ತಿಯ ವಿವರಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಮೊದಲೇ ತಿಳಿಸಬೇಕಾಗುತ್ತದೆ ಅಂದಿದ್ದಾರೆ.
Discussion about this post