ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ವಿಶ್ವ ಹಲವು ರಾಷ್ಟ್ರಗಳು ಇನ್ನಿಲ್ಲದಂತೆ ಹರ ಸಾಹಸ ಪಡುತ್ತಿದೆ. ಆದರೆ ಜನರ ಸಹಕಾರ ಕೊರತೆ ದೊಡ್ಡ ಸವಾಲು ಅನ್ನಿಸಿದೆ. ದೈಹಿಕ ಅಂತರ, ಮಾಸ್ಕ್ ಮರೆತು ಜನ ಬೀದಿಗಿಳಿದ ಮೇಲೆ ಸರ್ಕಾರವಾದರೂ ಸೋಂಕು ನಿಯಂತ್ರಿಸಲು ಹೇಗೆ ಸಾಧ್ಯ.
ಈ ನಡುವೆ 5ನೇ ಅಲೆಯ ಭೀತಿಯಲ್ಲಿರುವ ಅಸ್ಟ್ರೇಲಿಯಾ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮಗಳತ್ತ ಮುಖ ಮಾಡಿದೆ. ಭಾನುವಾರ ಮಧ್ಯರಾತ್ರಿಯಿಂದ ಲಸಿಕೆ ಪಡೆಯದ ಮಂದಿಗೆ ಲಾಕ್ ಡೌನ್ ಘೋಷಿಸಲಾಗಿದ್ದು, ಲಸಿಕೆ ಪಡೆಯದವರು ಸಾರ್ವಜನಿಕವಾಗಿ ಕಾಣಿಸಿಕೊಂಡರೆ 1450 ಯೂರೋ ಅಂದ್ರೆ ರೂಪಾಯಿ ಲೆಕ್ಕದಲ್ಲಿ 1.23 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.
ಕೊರೋನಾ ಲಸಿಕೆ ನಿರ್ಲಕ್ಷ್ಯ ಮಾಡುವವರ ವಿರುದ್ಧ ವಿಶ್ವದಲ್ಲೇ ಅತ್ಯಂತ ಕಠಿಣ ಕ್ರಮ ಇದು ಎನ್ನಲಾಗಿದ್ದು, ಆಸ್ಟೀಯಾದಲ್ಲಿ ಇನ್ನೂ 20 ಲಕ್ಷ ಮಂದಿ ಲಸಿಕೆ ಪಡೆದಿಲ್ಲ ಎನ್ನಲಾಗಿದೆ.
Discussion about this post