ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಏರತೊಡಗಿದೆ. ಇಂಧನ ದರ ಏರಿಕೆಯ ಕಾರಣದಿಂದ ಬಹುತೇಕ ಮಂದಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳತ್ತ ಒಲವು ತೋರಿದ್ದಾರೆ. ಆದರೆ ಸೂಕ್ತ ಜಾರ್ಜಿಂಗ್ ವ್ಯವಸ್ಥೆಗಳ ಕೊರತೆ ಅಡ್ಡಿಯಾಗಿ ಪರಿಣಮಿಸಿದೆ.
ಈ ನಡುವೆ ಈ ಸಮಸ್ಯೆ ನಿವಾರಣೆಗೆ ಮುಂದಾಗಿರುವ ಎಥರ್ ಎನರ್ಜಿ ಸಮಸ್ಯೆ ರಾಜ್ಯದಲ್ಲಿ ಒಂದು ಸಾವಿರ ತ್ವರಿತ ಜಾರ್ಜಿಂಗ್ ಘಟಕ ಸ್ಥಾಪಿಸಲು ನಿರ್ಧರಿಸಿದೆ. ಈ ಸಂಬಂಧ ಎಥರ್ ಹಾಗೂ ಎಸ್ಕಾಂಗಳ ನಡುವೆ ಒಪ್ಪಂದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿ ಹಾಕಿದ್ದಾರೆ. ಈ ವೇಳೆ ಎಥರ್ ಎನರ್ಜಿಯ ತರುಣ್ ಮೆಹ್ತಾ, ಬೆಸ್ಕಾಂ ಎಂಡಿ ರಾಜೇಂದ್ರ ಚೋಳನ್ ಉಪಸ್ಥಿತರಿದ್ದರು.
Had an incredible meeting with the Hon CM @BSBommai
— Tarun Mehta (@tarunsmehta) February 3, 2022
Walked in with an intent to intro us, walked out with a joint MoU committing 1000 Ather fast chargers across the state. Amazing speed & support from govt to enable this!
Karnataka is at the forefront of EV. Excited to be here! pic.twitter.com/1wsbGyt8VE
Discussion about this post