ಬೆಂಗಳೂರು : BPL ಕಾರ್ಡ್ ವಿತರಣೆ ಕುರಿತಂತೆ ರಾಜ್ಯ ಸರ್ಕಾರ ಸರಿಯಾದ ಮಾನದಂಡ ನಿಗದಿಪಡಿಸದ ಕಾರಣ ಹಾಗೂ ಅಧಿಕಾರಿಗಳು ಇರುವ ಮಾನದಂಡಗಳನ್ನು ಸರಿಯಾಗಿ ಜಾರಿಗೊಳಿಸದ ಕಾರಣ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಆಹಾರ ಇಲಾಖೆಯ ಮಂತ್ರಿ ಬದಲಾದಂತೆ ನಿಯಮಗಳು ಬದಲಾಗುತ್ತಿರುವುದು ಇದಕ್ಕೆ ಮತ್ತೊಂದು ಕಾರಣ.
ಮೊನ್ನೆ ಮೊನ್ನೆ ಟಿವಿ ಬೈಕ್ ಇದ್ದವರಿಗೆ BPL ಕಾರ್ಡ್ ಇಲ್ಲ ಅಂದಿದ್ದ ಸರ್ಕಾರ ಜನರ ಆಕ್ರೋಶ ಬೆದರಿತ್ತು. ಹಾಗಂತ ಇದೀಗ ಸದ್ದಿಲ್ಲದೆ ಅನೇಕ ಬಿಪಿಎಲ್ ಕಾರ್ಡ್ ಗಳು ರದ್ದಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ಸುಮಾರು 18 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು 15 ಸಾವಿರದಷ್ಟು ರೈತರ ಬಿಪಿಎಲ್ ಕಾರ್ಡುಗಳನ್ನು ಯಾವುದೇ ಕಾರಣ ನೀಡದೆ ರದ್ದು ಮಾಡಲಾಗಿದೆ.
ಅಧಿಕಾರಿಗಳ ಪ್ರಕಾರ ಬಿಪಿಎಲ್ ಕಾರ್ಡ್ ಪಡೆಯಲು ನಿಗದಿಪಡಿಸಿದ ಮಾನದಂಡಗಳು ಇಲ್ಲದ ಕಾರಣ ಬಡವರ ಬಿಪಿಎಲ್ ಕಾರ್ಡ್ ಕೂಡ ರದ್ದಾಗಿದೆಯಂತೆ. ಆದರೆ ಜನ ಹೇಳುವುದೇ ಬೇರೆ, ನಾವು BPL ಕಾರ್ಡ್ ಪಡೆಯಲು ಅರ್ಹರಾಗಿದ್ದೇವೆ ಹಾಗಿದ್ದರೂ ಈ ರೀತಿ ರದ್ದು ಮಾಡಿರುವುದು ಸರಿಯಲ್ಲ. ಒಂದು ವೇಳೆ ಆಹಾರ ಇಲಾಖೆ ನ್ಯಾಯ ನೀಡದಿದ್ರೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸೋ ಎಚ್ಚರಿಕೆ ನೀಡಲಾಗಿದೆ.
Discussion about this post