ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದು ಅಂದ್ರೆ ಅದು ನಿರೂಪಕಿ ಅನುಶ್ರೀ ಮದುವೆ ವಿಚಾರ. ಮದುವೆಯ ಕುರಿತಂತೆ ಹತ್ತು ಹಲವು ಸಲ ಸ್ಪಷ್ಟನೆ ಕೊಟ್ಟರೂ ಅನುಶ್ರೀ ಮದುವೆ ವಿಚಾರದಲ್ಲಿ ಸುದ್ದಿ ವಾಹಿನಿಗಳಿಗೆ ಟೀಆರ್ಪ್ ತಂದು ಕೊಡುವ ಸರಕಾಗಿತ್ತು. ಹೀಗಾಗಿಯೇ ಸುದ್ದಿ ವಾಹಿನಿಗಳು ಕೂಡಾ ಅನುಶ್ರೀ ಮದುವೆ ಹಿಂದೆ ಬಿದ್ದಿತ್ತು.
ಇದೀಗ ಮತ್ತೊಮ್ಮೆ ಅನುಶ್ರೀ ಮದುವೆ ವಿಚಾರ ಮತ್ತೆ ಸುದ್ದಿಯಲ್ಲಿದೆ. ಜೀ ಕನ್ನಡದಲ್ಲಿ ಜೋಡಿ ನಂಬರ್ ಒನ್ ಇನ್ನುವ ಕಾರ್ಯಕ್ರಮ ಆರಂಭವಾಗಿದೆ. ಇದು ರಿಯಲ್ ಜೋಡಿಗಳ ನಡುವಿನ ಪ್ರೀತಿ, ಬಾಂಧವ್ಯವನ್ನು ಹೆಚ್ಚು ಮಾಡುವ ಶೋ ಆಗಿದ್ದು, ಈ ಕಾರ್ಯಕ್ರಮದಲ್ಲಿ ಅನುಶ್ರೀ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ.
Discussion about this post