ಕಲರ್ಸ್ ವಾಹಿನಿಯಲ್ಲಿ ವಾರ್ಷಿಕ ಪ್ರಶಸ್ತಿ ಸಂಭ್ರಮ ನಡೆಯುತ್ತಿದೆ. ಕೊರೋನಾ ಸಂಕಷ್ಟ ಕಾಲದಲ್ಲೂ ದುಡಿದ ಕಲಾವಿದರೆಲ್ಲರೂ ಒಂದೇ ವೇದಿಕೆಯಡಿ ಸೇರಿದ್ದು, ಜನರನ್ನು ರಂಜಿಸುತ್ತಿದ್ದಾರೆ.
ಈ ನಡುವೆ ಹಲವು ವಿಭಾಗದ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಬೆಸ್ಟ್ ಛಾಯಾಗ್ರಹಣ ಪ್ರಶಸ್ತಿಯನ್ನು ಗಿಣಿರಾಮ ಧಾರವಾಹಿಯ ಪವನ್ ಕುಮಾರ್ ಪಡೆದುಕೊಂಡಿದ್ದು, ಮನಮೆಚ್ಚಿದ ಮಾವ ಪ್ರಶಸ್ತಿ ಸಿಹಿಕಹಿ ಚಂದ್ರು ( ನನ್ನರಸಿ ರಾಧೆ ) ಪಾಲಾಗಿದೆ. ಬೆಸ್ಟ್ ಅಮ್ಮ ಪ್ರಶಸ್ತಿಯನ್ನು ಕನ್ನಡತಿಯ ರತ್ಮಮಾಲ ಪಡೆದುಕೊಂಡಿದ್ದಾರೆ.
ಇನ್ನು ಬಹುನಿರೀಕ್ಷಿತ ಜನಮೆಚ್ಚಿದ ಮಂಥರೆ ಪ್ರಶಸ್ತಿ ನಮ್ಮನೆ ಯುವರಾಣಿಯಲ್ಲಿ ಅಹಲ್ಯಾ ಪಾತ್ರಕ್ಕೆ ಜೀವ ತುಂಬಿದ ಕಾವ್ಯಾ ಮಹಾದೇವ್ ಪಾಲಾಗಿದೆ. ಬೆಸ್ಟ್ ರೇಟೆಂಡ್ ನಾನ್ ಪಿಕ್ಷನ್ ರಾಜರಾಣಿ ಪಾಲಾಗಿದೆ. ಪ್ರಶಾಂತಿ ನಿರ್ಮಾಣದ ಈ ರಿಯಾಲಿಟಿ ಶೋ ಈ ಬಾರಿ ಬೆಸ್ಟ್ ರೇಟೆಂಡ್ ನಾನ್ ಪಿಕ್ಷನ್ ಪ್ರಶಸ್ತಿ ಗೆದ್ದುಕೊಂಡಿದೆ.
ಉತ್ತಮ ವಿದೂಷಕ ಪಾತ್ರ ಮಜಾ ಭಾರತ ಖ್ಯಾತಿಯ ಜಗಪ್ಪ ( ಮಿಥುನರಾಶಿ ) ಪಡೆದರೆ, ಮನ ಮೆಚ್ಚಿದ ಮನೆ ಹಿರಿಯ ಪ್ರಶಸ್ತಿಯನ್ನು ನಮ್ಮನೆ ಯುವರಾಣಿ ವಸುಧೇಂದ್ರ ರಾಜಗುರು ಖ್ಯಾತಿಯ ಸಂದೀಪ್ ಅಶೋಕ್ ಪಡೆದಿದ್ದಾರೆ. ಜನ ಮೆಚ್ಚಿದ ಶಕುನಿಯ ನಿರೀಕ್ಷೆಯಂತೆ ಗೀತಾ ಧಾರವಾಹಿಯ ಶೋಭರಾಜ್ ಪಾವೂರು ಪಾಲಾಗಿದೆ.
ಇನ್ನು ಉತ್ತಮ ಚಿತ್ರಕಥೆ ಪ್ರಶಸ್ತಿ ಮಂಗಳಗೌರಿಗೆ ಸಿಕ್ಕಿದ್ದು, ರಾಮ್ ಜೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈವರೆಗೆ ಪ್ರಕಟವಾಗಿರುವ ಪ್ರಶಸ್ತಿಗಳ ಪೈಕಿ ಇದೊಂದು ಪ್ರಶಸ್ತಿ not deserve ಅನ್ನಿಸಿದೆ. ಉತ್ತಮ ಚಿತ್ರಕಥೆಯನ್ನು ಹೊಂದಿದ ಬೇರೆ ನಾಲ್ಕೈದು ಧಾರವಾಹಿಗಳಿದ್ದರೂ ಮಂಗಳಗೌರಿ ಚಿತ್ರಕಥೆಗೆ ಪ್ರಶಸ್ತಿ ಬಂದಿರುವ ಅಚ್ಚರಿ ತರಿಸಿದೆ.
Discussion about this post