ಒಡಿಶಾ ( Odisha ) ರಾಜ್ಯ ಸಾರಿಗೆ ಪ್ರಾಧಿಕಾರದ ಕ್ರಿಯೇಟಿವಿಟಿಗೆ ಭೇಷ್ ಅಂದ ಜನ ( Angelo Mathews)
ಮುರಿದು ಹೋಗಿದ್ದ ಹೆಲ್ಮೆಟ್ ಧರಿಸಿಕೊಂಡು ಬಂದು ಎಡವಟ್ಟು ಮಾಡಿಕೊಂಡು ವಿಶ್ವದಾಖಲೆ ನಿರ್ಮಿಸಿದ ಶ್ರೀಲಂಕಾ ತಂಡದ ಆಟಗಾರ ಏಂಜೆಲೊ ಮ್ಯಾಥ್ಯೂಸ್ ( Angelo Mathews) ಇದೀಗ ಒಡಿಶಾ ( Odisha ) ರಾಜ್ಯ ಸಾರಿಗೆ ಪ್ರಾಧಿಕಾರದ ಕ್ರಿಯೇಟಿವಿಟಿಗೆ ಆಹಾರವಾಗಿದ್ದಾರೆ. ಹೆಲ್ಮೆಟ್ ಪರವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಈ ಪ್ರಕರಣವನ್ನು ಬಳಸಿಕೊಳ್ಳಲು ಪ್ರಾಧಿಕಾರ ಮುಂದಾಗಿದೆ.
ಬಾಂಗ್ಲಾದೇಶದ ಎದುರಿನ ಪಂದ್ಯದಲ್ಲಿ ಮುರಿದು ಹೋಗಿದ್ದ ಹೆಲ್ಮೆಟ್ ಧರಿಸಿಕೊಂಡು ಮೈದಾನಕ್ಕೆ ಬಂದು, ಬಳಿಕ ಬದಲಿ ಹೆಲ್ಮೆಟ್ ಗಾಗಿ ಕಾದು ಟೈಮ್ಡ್ ಔಟ್ ಔಟ್ಗೆ ಗುರಿಯಾಗಿದ್ದ ಶ್ರೀಲಂಕಾ ತಂಡದ ಆಟಗಾರ ಏಂಜೆಲೊ ಮ್ಯಾಥ್ಯೂಸ್ ( Angelo Mathews) ವಿಶ್ವ ಪ್ರಸಿದ್ಧವಾಗಿದ್ದರು. ನಿಯಮದಂತೆ ಕ್ರಿಸ್ ಗೆ ಬರುವಲ್ಲಿ ವಿಫಲರಾದ ಕಾರಣ ಟೈಮ್ಡ್ ಔಟ್ ಔಟ್ಗೆ ಗೆ ಗುರಿಯಾಗಿ ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಅಳಿಸಲಾಗದ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ : Deep fake video : ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ
ಇದೇ ನಿದರ್ಶನ ಬಳಸಿಕೊಂಡು ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಲು ಒಡಿಶಾ ರಾಜ್ಯ ಸಾರಿಗೆ ಪ್ರಾಧಿಕಾರವು ಮುಂದಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಒಡಿಶಾ ರಾಜ್ಯ ಸಾರಿಗೆ ಪ್ರಾಧಿಕಾರವು,
“ನಿಮ್ಮ ವಿಕೆಟ್ ಅನ್ನು ಬಲಿ ಕೊಡಬೇಡಿ. ಸ್ಥಿರವಾಗಿ ದೀರ್ಘಕಾಲ ಇನಿಂಗ್ಸ್ ಆಡಿ. ಎಂದಿಗೂ ಐಎಸ್ಐ ಪ್ರಮಾಣಿತ ಹೆಲ್ಮೆಟ್ ಅನ್ನೇ ಬಳಸಿ ಹಾಗೂ ಅದರ ಬೆಲ್ಟ್ ಅನ್ನು ಕಟ್ಟಿಕೊಳ್ಳಿ. ಈ ಕೆಲಸವನ್ನು ಹಿಂಬದಿ ಸವಾರರೂ ಮಾಡುವಂತೆ ನೀವು ಪ್ರೋತ್ಸಾಹಿಸಿ. ಮೈದಾನದಲ್ಲಾಗಲಿ ಅಥವಾ ಮೈದಾನದ ಹೊರಗಾಗಲಿ ಸುರಕ್ಷತೆಯೇ ಮೊದಲು”
ಎಂದು ವಾಹನ ಸವಾರರಿಗೆ ಮನವಿ ಮಾಡಿದೆ.
#RoadSafety lesson from #CWC23
— State Transport Authority, Odisha (@STAOdisha) November 6, 2023
Don't throw away your wicket, play a consistent long innings.
Always wear ISI certified helmet 🪖 & tie the strap. Also encourage pillion rider to do so.
On Field or Off Field #SafetyFirst always !#AngeloMatthews#CricketWorldCup#WorldCup2023 pic.twitter.com/r2h26t8GSn
ಇನ್ನು ಒಡಿಶಾ ರಾಜ್ಯ ಸಾರಿಗೆ ಪ್ರಾಧಿಕಾರದ ಸೃಜನಶೀಲತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಮತ್ತೆ ಕೆಲವರು ಕೇವಲ ಹೆಲ್ಮೆಟ್ ಧರಿಸಿದ್ರೆ ಸಾಲದು, ಕೆಟ್ಟ ರಸ್ತೆಯಿಂದ ಕೂಡಾ ಅಪಘಾತ ನಡೆಯುತ್ತದೆ ಅಂದಿದ್ದಾರೆ.
ಇನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿ ಪ್ರಕಾರ, 2022ರಲ್ಲಿ ಒಡಿಶಾದಲ್ಲಿ 11,663 ಅಪಘಾತ ಪ್ರಕರಣಗಳು ನಡೆದಿದ್ದು, ಈ ಪೈಕಿ 5,467 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 2,498 ಮಂದಿ ದ್ವಿಚಕ್ರ ವಾಹನ ಸವಾರಾಗಿದ್ದು. ಇಷ್ಟು ಮಂದಿಯಲ್ಲಿ 1795 ಮಂದಿ ಹೆಲ್ಮೆಟ್ ಧರಿಸದ ಕಾರಣ ಮೃತಪಟ್ಟಿದ್ದರು.
The Odisha State Transport Authority (STA) has taken Angelo Mathews dismissal to create awareness among the commuters. In its official X handle, the STA tried to strike a chord with the commuters by trying to create awareness about the use of helmet.
Discussion about this post