ಬಿಗ್ ಬಾಸ್’ ಖ್ಯಾತಿಯ ಅಕ್ಷತಾ ಕುಕ್ಕಿ ಅವರ ಮದುವೆ ನಿಶ್ಚಯವಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿಡಲು ಅಕ್ಷತಾ ಕುಕ್ಕಿ ಮನಸ್ಸು ಮಾಡಿದ್ದಾರೆ ( Akshatha kuki )
ಕನ್ನಡದ ನಟಿ ಅಕ್ಷತಾ ಕುಕ್ಕಿ ( Akshatha kuki) ಹೆಸರು ಅದೆಷ್ಟು ಜನರಿಗೆ ಗೊತ್ತಿದೆಯೋ ಗೊತ್ತಿಲ್ಲ. ಬಿಗ್ ಬಾಸ್ ಓಟಿಟಿ ಸೀಸನ್ ಅನ್ನು ಫಾಲೋ ಮಾಡಿದವರಿಗೆ ಈ ಹೆಸರು ಖಂಡಿತಾ ಗೊತ್ತಿರುತ್ತದೆ. ಮುಗಿದು ಹೋದ ಬಿಗ್ ಬಾಸ್ ಕಥೆ ಈಗ್ಯಾಕೆ ಅನ್ನೋದು ಹೆಡ್ ಲೈನ್ ನೋಡಿಯೇ ನಿಮಗೆ ಗೊತ್ತಾಗಿರುತ್ತದೆ.
ಹೌದು ‘ಬಿಗ್ ಬಾಸ್’ ಖ್ಯಾತಿಯ ಅಕ್ಷತಾ ಕುಕ್ಕಿ ಅವರ ಮದುವೆ ನಿಶ್ಚಯವಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿಡಲು ಅಕ್ಷತಾ ಕುಕ್ಕಿ ಮನಸ್ಸು ಮಾಡಿದ್ದಾರೆ.
ನಟಿ ಅಕ್ಷತಾ ಕುಕ್ಕಿ ಅವರ ಎಂಗೇಜ್ಮೆಂಟ್ ಇತ್ತೀಚೆಗೆ ನಡೆದಿದ್ದು. ಅವಿನಾಶ್ ಅನ್ನುವವರ ಜೊತೆಗೆ ಉಂಗುರ ಬದಲಾಯಿಸಿಕೊಂಡಿದ್ದಾರೆ. ಅಂದ ಹಾಗೇ ಅವಿನಾಶ್ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಂದ್ಹಾಗೆ, ಅವಿನಾಶ್ ಹಾಗೂ ಅಕ್ಷತಾ ಕುಕ್ಕಿ ಅವರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಅಂತೆ
ಅಕ್ಷತಾ ಕುಕ್ಕಿ ಹಾಗೂ ಅವಿನಾಶ್ ಅವರ ವಿವಾಹ ಸಮಾರಂಭ ಮಾರ್ಚ್ 27 ರಂದು ನಡೆಯಲಿದೆ. ಬೆಳಗಾವಿಯಲ್ಲಿ ಅಕ್ಷತಾ ಕುಕ್ಕಿ – ಅವಿನಾಶ್ ವಿವಾಹ ಕಾರ್ಯಕ್ರಮ ಜರುಗಲಿದೆ. ಮದುವೆಯಲ್ಲಿ ಸ್ಯಾಂಡಲ್ವುಡ್ ತಾರೆಯರು ಹಾಗೂ ‘ಬಿಗ್ ಬಾಸ್’ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
ಅಕ್ಷತಾ ಕುಕ್ಕಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯವರು. ಅಕ್ಷತಾ ಕುಕ್ಕಿ ಅವರ ಕುಟುಂಬಸ್ಥರೆಲ್ಲಾ ಸರ್ಕಾರಿ ನೌಕರಯಲ್ಲಿರುವವರು. ಅಕ್ಷತಾ ಕುಕ್ಕಿ ಕೂಡ ಸರ್ಕಾರಿ ಕೆಲಸಕ್ಕೆ ಸೇರಬೇಕಿತ್ತು. ಆದ್ರೆ, ಬಣ್ಣದ ಪ್ರಪಂಚ ಅಕ್ಷತಾ ಕುಕ್ಕಿ ಅವರನ್ನ ಕೈಬೀಸಿ ಕರೆಯಿತು. ಮಾಡೆಲ್ ಆಗಿದ್ದ ಅಕ್ಷತಾ ಕುಕ್ಕಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಧ್ರುವ ಸರ್ಜಾ ನಟಿಸುತ್ತಿರುವ ‘ಮಾರ್ಟಿನ್’ ಚಿತ್ರದಲ್ಲೂ ಅಕ್ಷಯಾ ಕುಕ್ಕಿ ಅಭಿನಯಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದಲ್ಲಿ ಅಕ್ಷತಾ ಕುಕ್ಕಿ ಸ್ಪರ್ಧಿಸಿದ್ದರು.
Discussion about this post