ಬೆಂಗಳೂರು : ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಬಿಜೆಪಿ, ಈಗಾಗಲೇ ಮತದಾರನ ಮನಗೆಲ್ಲುವ ಯೋಜನೆ ಹಾಕಿಕೊಂಡಿದೆ. ಕರ್ನಾಟಕದ ಮಟ್ಟಿಗೆ ಈಗಿನ ಪರಿಸ್ಥಿತಿಯಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಪಕ್ಷವನ್ನು ಗೆಲ್ಲಿಸುವ ತಾಕತ್ತು ಇಲ್ಲದಂತಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಮತ್ತೆ ಕಮಲ ಅರಳಬೇಕಾದರೆ ಮಹಾ ಮತಬೇಟೆಗಾರನೇ ಬರಬೇಕು.
ಈ ಹಿನ್ನಲೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ ಅನ್ನಲಾಗಿದೆ. ಜೂನ್ 20 ರಂದು ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿಗಳು ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವಿವರಗಳನ್ನು ಇದೀಗ ಪ್ರಧಾನಿ ಸಚಿವಾಲಯ ಪ್ರಕಟಿಸಿದೆ.
ಜೂನ್ 20 ರಂದು ಮಧ್ಯಾಹ್ನ 12ಕ್ಕೆ ಯಲಹಂಕ ವಾಯುನೆಲೆಗೆ ಬಂದಿಳಿಯುವ ನರೇಂದ್ರ ಮೋದಿ, ಮಧ್ಯಾಹ್ನ 12.30ಕ್ಕೆ ಬೆಂಗಲೂರು ಸಬರ್ಬನ್ ರೈಲು ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ನಂತರ 2.30ಕ್ಕೆ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಸಂಜೆ 4.50ಕ್ಕೆ ಹೆಲಿಕಾಫ್ಟರ್ ಮೂಲಕ ಮೈಸೂರಿಗೆ ಪ್ರಯಾಣ, ಸಂಜೆ 5ಕ್ಕೆ ಮೈಸೂರು ಕ್ ಶ್ರವಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗಿ. 6.30ಕ್ಕೆ ಸುತ್ತೂರು ವೇದ ಪಾಠ ಶಾಲೆ ಕಟ್ಟಡ ಲೋಕಾರ್ಪಣೆ. ರಾತ್ರಿ 7.30ಕ್ಕೆ ಮೈಸೂರು ಚಾಮುಂಡಿ ಬೆಟ್ಟದಲ್ಲಿ ದೇವಿಯ ದರ್ಶನ.
ಜೂನ್ 21 ರಂದು ಬೆಳಗ್ಗೆ 6.30ಕ್ಕೆ ಅರಮನೆ ಮುಂಭಾಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿ, ನಂತರ 9.25ಕ್ಕೆ ಮೈಸೂರಿನಿಂದ ತಿರುವನಂತಪುರಕ್ಕೆ ಪ್ರಧಾನಿಗಳು ತೆರಳುತ್ತಾರೆ. ತಿರುವನಂತಪುರ ವಿಮಾನ ನಿಲ್ದಾಣದಿಂದ ನೇರವಾಗಿ ದೆಹಲಿಗಳು ಪ್ರಧಾನಿಗಳು ಪ್ರಯಾಣ ಬೆಳೆಸುತ್ತಾರೆ.
Discussion about this post