ನಟ ಪುನೀತ್ ಸಾವಿನ ಸುದ್ದಿ ಕೇಳಿ ನೊಂದ ಮನಸ್ಸುಗಳಿಗೆ ಲೆಕ್ಕವಿಲ್ಲ. ಹಾಗಂತ ವಿಕೃತಿ ಮೆರೆದವರೂ ಕಡಿಮೆ ಇಲ್ಲ ಬಿಡಿ. ನಾಡು ನುಡಿಗಾಗಿ ಮಾತ್ರವಲ್ಲದೆ ಸಂಕಷ್ಟದಲ್ಲಿದ್ದ ಮಂದಿಗೆ ಸಹಾಯ ಮಾಡಿದ ದೇವದೂತ ಪುನೀತ್. ಇಂತಹ ಒಳ್ಳೆಯ ಮನಸ್ಸಿನ ಪುನೀತ್ ಸಾವಿನ ವಿಷಯದಲ್ಲಿ ಇದೀಗ ಡಯಾಗ್ನೋಸ್ಟಿಕ್ ಕೇಂದ್ರಗಳು ಕಾಸು ಮಾಡಲು ಹೊರಟಿದೆ.
ಪುನೀತ್ ಕುಮಾರ್ ಸಾವಿಗೆ ಹೃದಯ ಸ್ತಂಭನವೇ ಕಾರಣ ಅನ್ನುವುದು ಗೊತ್ತಾಗುತ್ತಿದ್ದಂತೆ ಹೃದಯ ತಪಾಸಣೆ ಮಾಡಿಸಿಕೊಳ್ಳುವವರ ಸಂಖ್ಯೆ ಏರತೊಡಗಿದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಸಾಲು ಸಾಲು ಜನ. ಈ ನಡುವೆ ಇದರ ಲಾಭ ಪಡೆಯಲು ಹೊರಟಿರುವ ರೋಗಪತ್ತೆ ಕೇಂದ್ರಗಳು ಹಲವು ಪ್ಯಾಕೇಜ್ ಗಳನ್ನು ಘೋಷಿಸಿದೆ.
ಜನರನ್ನು ಆಕರ್ಷಿಸುವ ಸಲುವಾಗಿ ಪುನೀತ್ ಗೆ ಶ್ರದ್ಧಾಂಜಲಿ ಸಲ್ಲಿಸಿ ಆಸ್ಪತ್ರೆಯ ಮುಂದೆ ಫ್ಲೆಕ್ಸ್ ಅಳವಡಿಸಿದೆ. ಈ ಫ್ಲೆಕ್ಸ್ ನಲ್ಲಿ “ ಪುನೀತ್ ಹೃದಯದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಹೃದಯ ಸಮಸ್ಯೆ ಬಗ್ಗೆ ನೀವು ಎಚ್ಚೆತ್ತುಕೊಳ್ಳಿ ವಿಶೇಷ ಶಿಬಿರದಲ್ಲಿ ಪಾಲ್ಗೊಳ್ಳಿ. ECG, RBS, BP, ಕೊಲೆಸ್ಟ್ರಾಲ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಬರೆಯಲಾಗಿದೆ.
ಒಟ್ಟಿನಲ್ಲಿ ಪುನೀತ್ ಗೆ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಫ್ಲೆಕ್ಸ್ ಪ್ರದರ್ಶಿಸಿ ವ್ಯವಹಾರ ವೃದ್ಧಿಸಿಕೊಳ್ಳುವ ಇವರಿಗೆ ಏನ್ ಹೇಳೋಣ.
Discussion about this post