ಕಾಬೂಲ್ : ಆಫಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರಿದಿದ್ದು, ಮಹಿಳೆಯರ ಮೇಲೆ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಅಂತರರಾಷ್ಟ್ರೀಯ ಒತ್ತಡಕ್ಕೆ ಸೊಪ್ಪು ಹಾಕದೆ ಮುನ್ನೆಡೆಯುತ್ತಿರುವ ತಾಲಿಬಾನಿಗಳು ಮಹಿಳೆಯರ ಪಾಲಿಗೆ ಕಂಟಕವಾಗಿದ್ದಾರೆ. ಅಲ್ಲಿ ಜಾರಿಗೆ ಬರುತ್ತಿರುವ ಕಠಿಣ ಕಾನೂನುಗಳನ್ನು ನೋಡಿದರ ತ ಆಫ್ಘನ್ ಮುಸ್ಲಿಂ ಮಹಿಳೆಯರು ಉಸಿರಾಡುವುದೇ ಕಷ್ಟ ಅನ್ನುವಂತಾಗಿದೆ.
ಈಗಾಗಲೇ ಹತ್ತು ಹಲವು ನಿರ್ಬಂಧಗಳನ್ನು ಮಹಿಳೆಯರಿಗೆ ವಿಧಿಸಿರುವ ತಾಲಿಬಾನಿಗಳು ಮುಂದುವರಿದ ಭಾಗವಾಗಿ ಮತ್ತಷ್ಟು ಹೊಸ ನಿರ್ಬಂಧಗಳನ್ನು ವಿಧಿಸಿದ್ದಾರೆ. ಹಿಜಾಬ್ ಧರಿಸದೆ ಮನೆಯಿಂದ ಹೊರಗೆ ಬರುವಂತಿಲ್ಲ, ಪುರುಷ ಸಂಬಂಧಿ ಜೊತೆಗಿಲ್ಲದೆ ಮಹಿಳೆಯರು ಒಂಟಿಯಾಗಿ ಪ್ರಯಾಣ ಮಾಡುವಂತಿಲ್ಲ. ಪಾರದರ್ಶಕ ಉಡುಪು ಧರಿಸುವಂತಿಲ್ಲ. ಮಹಿಳೆಯರು ಪ್ರಯಾಣಿಸುವ ಕ್ಯಾಬ್ ಗಳಲ್ಲಿ ಹಾಡು ಹಾಕೋ ಹಾಗಿಲ್ಲ, ಮದುವೆ ಸಮಾರಂಭಗಳಲ್ಲಿ ಮಹಿಳೆಯರು ಮತ್ತು ಪುರುಷರು ಜೊತೆಗೆ ನ್ಯತ್ಯ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.
ಇನ್ನು ಮಹಿಳೆಯರು ದೇಹ ಪೂರ್ತಿ ಮುಚ್ಚುವಂತೆ ಬುರ್ಖಾ ಧರಿಸಬೇಕಾಗಿದ್ದು, ಅದು ಕೂಡಾ ಪಾರದರ್ಶಕವಾಗಿರಬಾರದು. ಕೇವಲ ಬುರ್ಖಾ ಮಾತ್ರವಲ್ಲದೆ ಕೈಗವಸು ಧರಿಸುವುದು ಕೂಡಾ ಕಡ್ಡಾಯ.
ಮಂಗಳೂರು ಬೆಂಗಳೂರು ರೈಲಿನಲ್ಲಿ ಕಳ್ಳತನ – ಸುಳ್ಯದ ಅಬ್ದುಲ್ ಅಜೀಜ್ ಬಂಧನ
ಸುಳ್ಯ : ಮಂಗಳೂರು ಬೆಂಗಳೂರು ರೈಲಿನಲ್ಲಿ ಪ್ರಯಾಣಿಕರ ಅಮೂಲ್ಯ ವಸ್ತುಗಳನ್ನು ಕಳುವು ಮಾಡುತ್ತಿದ್ದ ಯುವಕನೊಬ್ಬನನ್ನು ಮಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸುಳ್ಯದ ನಿವಾಸಿ ಅಬ್ದುಲ್ ಅಜೀಜ್ (19) ಎಂದು ಗುರುತಿಸಲಾಗಿದೆ.
ನಿರಂತರವಾಗಿ ಮಂಗಳೂರು ಬೆಂಗಳೂರು ರೈಲು ಏರುತ್ತಿದ್ದ ಅಬ್ದುಲ್ ಅಜೀಜ್ ಪ್ರಯಾಣಿಕರು ನಿದ್ದೆಯಲ್ಲಿದ್ದ ಸಂದರ್ಭದಲ್ಲಿ ಅವರ ಮೊಬೈಲ್, ಮಹಿಳೆಯರ ಬ್ಯಾಗ್ ಸೇರಿ ಅಮೂಲ್ಯ ವಸ್ತುಗಳನ್ನು ಎಗರಿಸುತ್ತಿದ್ದ.
ಬಂಧಿತನಿಂದ 11 ಮೊಬೈಲ್ ಫೋನ್, ಒಂದು ಟ್ಯಾಬ್, ಒಂದು ವ್ಯಾನಿಟಿ ಬ್ಯಾಗ್ ಸೇರಿ ಪಾಸ್ ಪೋರ್ಟ್ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Discussion about this post