ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕೇಳಿ ಬಂದ ಸಿಡಿ ಪ್ರಕರಣದ ವೇಳೆ ಸದ್ದು ಮಾಡಿದ ವಕೀಲ ಜಗದೀಶ್ ಕೆ ಎನ್ ಮಹಾದೇವ್ ಅಧಿಕೃತವಾಗಿ ರಾಜಕೀಯ ಪಕ್ಷವೊಂದರ ಜೊತೆಗೆ ಗುರುತಿಸಿಕೊಳ್ಳಲಿದ್ದಾರೆ.
ಇಂದು ಜಗದೀಶ್ ಕೆ ಎನ್ ಮಹಾದೇವ್ ಅಮ್ ಆದ್ಮಿ ಪಕ್ಷ ಸೇರ್ಪಡೆಯಾಗಲಿದ್ದು, ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪಕ್ಷದ ಮುಖಂಡರ ಸಮ್ಮುಖದಲ್ಲಿ ಪೊರಕೆ ಕೈಗೆತ್ತಿಕೊಳ್ಳಲಿದ್ದಾರೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬಂದು ಅನೇಕರನ್ನು ಗುಡಿಸಿರುವ ಜಗದೀಶ್ ಆಮ್ ಆದ್ಮಿಯ ಪೊರಕೆ ಬಂದ ಮೇಲೆ ಏನು ಮಾಡಲಿದ್ದಾರೆ ಅನ್ನುವ ಕುತೂಹಲ ಎಲ್ಲರಲ್ಲಿದೆ.
ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಸಂತ್ರಸ್ಥೆಯ ಪರ ವಕಾಲತ್ತು ವಹಿಸಿದ ವೇಳೆ ಜಗದೀಶ್ ಕಾಂಗ್ರೆಸ್ ಸೇರಲಿದ್ದಾರೆ ಅನ್ನುವ ಸುದ್ದಿಗಳು ಹರಿದಾಡಿತ್ತು.

Discussion about this post