ಕೆಲ ದಿನಗಳ ಹಿಂದೆ ‘ಗಟ್ಟಿಮೇಳ’ ಧಾರಾವಾಹಿಯಿಂದ ನಟಿ ಸ್ವಾತಿ ಅವರು ಹೊರಗೆ ಬಂದಿದ್ದಾರೆ ಎಂಬ ಮಾತು ಕೇಳಿ ಬರುತ್ತಲಿತ್ತು.
ಈಗಾಗಲೇ ಮೂರು ಬಾರಿ ಸುಹಾಸಿನಿ ಪಾತ್ರಧಾರಿ ಬದಲಾಗಿದೆ. ಸ್ವಾತಿಗೂ ಮೊದಲು ಅರ್ಚನಾ ಎನ್ನುವವರು ಸುಹಾಸಿನಿ ಪಾತ್ರ ಮಾಡುತ್ತಿದ್ದರು. ಅವರು ಧಾರಾವಾಹಿಯಿಂದ ಹೊರಗೆ ಬರುತ್ತಿದ್ದಂತೆ ಸ್ವಾತಿ ಈ ಪಾತ್ರ ಮಾಡುತ್ತಿದ್ದರು. ಈಗ ಸ್ವಾತಿ ಜಾಗಕ್ಕೆ ಮತ್ತೆ ಅರ್ಚನಾ ಬರಲಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಕೂಡ ಅರ್ಚನಾ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರತಿಷ್ಠೆ, ಹಣದ ಮದ, ಅಹಂಕಾರ, ಗಾಂಭೀರ್ಯವಿರುವ ಸುಹಾಸಿನಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ. ಅರ್ಚನಾ ಅವರು ‘ಗಟ್ಟಿಮೇಳ’ ಧಾರಾವಾಹಿ ನಂತರದಲ್ಲಿ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಹೀಗಾಗಿ ಅವರು ಮತ್ತೆ ‘ಗಟ್ಟಿಮೇಳ’ದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
Discussion about this post