ಉದಯ ಟಿವಿಯಲ್ಲಿ ಪ್ರಸಾರ ಕಂಡಿದ್ದ ನಿನ್ನಂದಲೇ ಧಾರವಾಹಿಯಲ್ಲಿ ಕೊನೆಯದಾಗಿ ನಟಿಸಿದ್ದ ದೀಪಕ್ ಮಹಾದೇವ, ಇತ್ತೀಚೆಗೆ ನಟಿ ಚಂದನಾ ಜೊತೆಗೆ ಸಪ್ತಪದಿ ತುಳಿದಿದ್ದರು. ಮದುವೆ ಬಳಿಕ ಚಂದನ್ ನಟಿಸುತ್ತಾರೋ ಇಲ್ಲವೋ ಅಂದುಕೊಂಡರೆ, ಸುವರ್ಣ ವಾಹಿನಿಯ ಮರಳಿ ಮನಸಾಗಿದೆ ಸೆಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು ಚಂದನ್ ಕುಮಾರ್ ಮತ್ತು ದಿವ್ಯಾ ವಾಗುಕರ್ ನಟಿಸುತ್ತಿರುವ ಮರಳಿ ಮನಸಾಗಿದೆ ಟೀಂ ಸೇರಿರುವ ದೀಪಕ್ ಡಾಕ್ಟರ್ ಅಜಯ್ ಆಗಿ ನಟಿಸಲಿದ್ದಾರೆ.
ಮನೋ ರೋಗದಿಂದ ಬಳಲುತ್ತಿರುವ ಸಾಹಿತ್ಯಳ ಜೀವನದ ದೊಡ್ಡ ಸತ್ಯ ಈಗಾಗಲೇ ಬಯಲಾಗಿದ್ದು, ಈ ಸತ್ಯದ ಮುಂದುವರಿದ ಭಾಗವಾಗಿ ಡಾ. ಅಜಯ್ ಪಾತ್ರವನ್ನು ಪರಿಚಯಿಸಲಾಗುತ್ತಿದೆ. ಈ ಡಾಕ್ಟರ್ ಅಜಯ್ ಸಾಹಿತ್ಯ ಪತಿಯಾಗಿದ್ದು ಮುಂದೇನು ಅನ್ನುವ ಕುತೂಹಲ ವೀಕ್ಷಕರದ್ದು.
ಮತ್ತೊಂದು ಕಡೆ ಇಷ್ಟವಿಲ್ಲದೆ ಮದುವೆಯಾದ ಸ್ಪಂದನಾ ಹಾಗೂ ವಿಕ್ರಾಂತ್ ಆರಕ್ಕೆ ಏರುತ್ತಿಲ್ಲ, ಮೂರಕ್ಕೆ ಇಳಿಯುತ್ತಿಲ್ಲ ಅನ್ನುವಂತೆ ಸಾಗುತ್ತಿದೆ. ತನ್ನ ಬದುಕೇ ಬಿರುಗಾಳಿಗೆ ಸಿಕ್ಕಿ ದೋಣಿಯಂತಾಗಿರುವ ನಡುವೆಯೇ ಸಾಹಿತ್ಯಳ ಬದುಕನ್ನು ಸ್ಪಂದನಾ ಸರಿ ಮಾಡುತ್ತಾಳೆಯೇ ಅನ್ನುವುದಕ್ಕೆ ಮುಂದಿನ ಸಂಚಿಕೆಗಳಿಗೆ ಕಾಯಬೇಕಾಗಿದೆ.
Discussion about this post