ಎಸಿಬಿಯ ವರ್ತನೆ, ಅದರ ಮುಖ್ಯಸ್ಥನ ಮೇಲೆ ಇರುವ ಭ್ರಷ್ಟಾಚಾರದ ಆರೋಪ ಕುರಿತಂತೆ ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಭ್ರಷ್ಟಾಚಾರ ನಿಗ್ರಹ ದಳ MLA Zameer Ahmed Khan ನಿವಾಸಕ್ಕೆ ACB raid ಮಾಡಿದೆ
ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರಿನ ಚಾಮರಾಜಪೇಟೆಯ ಶಾಸಕ ಜಮೀರ್ ಅಹಮ್ಮದ್ ( Zameer Ahmed ) ನಿವಾಸಕ್ಕೆ ಎಸಿಬಿ ದಾಳಿ ( ACB raid) ನಡೆಸಿದೆ.
ಬೆಂಗಳೂರಿನ ದಂಡು ರೈಲ್ವೆ ನಿಲ್ದಾಣ ಬಳಿ ಇರುವ ಭವ್ಯ ಬಂಗಲೆ ಮೇಲೆ ಈ ದಾಳಿ ನಡೆದಿದ್ದು, ಇದೇ ವೇಳೆ ಜಮೀರ್ ಗೆ ಸಂಬಂಧಿಸಿದ 5 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
ಮುಂಬೈ ನಲ್ಲಿ ಟ್ರಾವೆಲ್ಸ್ ಎಜೆನ್ಸಿಯ ಮಾಲೀಕತ್ವ, ವಿದೇಶಿದಲ್ಲಿ ಆಸ್ತಿ, ದುಬೈ ನಲ್ಲಿ ಆಸ್ತಿ ಜೊತೆಗೆ ವ್ಯವಹಾರವಿದೆ ಅನ್ನುವುದು ಜಮೀರ್ ಮೇಲೆ ಬಂದಿರುವ ಆರೋಪ. ಜೊತೆಗೆ ಐಎಂಎ ಹಗರಣದಲ್ಲೂ ಜಮೀರ್ ಹೆಸರು ಕೇಳಿ ಬಂದಿತ್ತು. ಆದರೆ ಮುಂದೆ ಅದೇನಾಯ್ತು ಅನ್ನುವುದು ಗೊತ್ತಿಲ್ಲ. ಇದರೊಂದಿಗೆ ಶ್ರೀಲಂಕಾದಲ್ಲಿ ಶಿಷ್ಯರ ಹೆಸರಿನಲ್ಲಿ ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದಾರೆ ಅನ್ನುವ ಆರೋಪವನ್ನು ಜಮೀರ್ ಎದುರಿಸುತ್ತಿದ್ದಾರೆ.
ಇದನ್ನೂ ಓದಿ : ಟ್ರಾನ್ಸ್ ಫಾರ್ಮರ್ ಗೆ ಡಿಕ್ಕಿಯಾದ ಕಾರು : ಬೆಂಕಿ ತಗುಲಿ ಸ್ಥಳದಲ್ಲೇ ಒಬ್ಬನ ಸಾವು
ಈ ಸಂಬಂಧ ಈ ಹಿಂದೆ ಇಡಿ ಜಮೀರ್ ನಿವಾಸಕ್ಕೆ ದಾಳಿ ನಡೆಸಿತ್ತು. ಇದಾದ ಬಳಿಕ ಸರ್ಕಾರಿ ಯೋಜನೆಯೊಂದರಲ್ಲಿ ಅವ್ಯವಹಾರ ಆಗಿರುವ ಸಂಬಂಧ ಇಡಿಗೆ ದಾಖಲೆ ಲಭ್ಯವಾಗಿತ್ತು. ಈ ಬಗ್ಗೆ ಇಡಿ ಎರಡೆರಡು ಬಾರಿ ವರದಿ ನೀಡಿತ್ತು. ಮೊದಲ ವರದಿಯ ಸಂದರ್ಭದಲ್ಲೇ ಇಡಿ ಎಚ್ಚೆತ್ತುಕೊಳ್ಳಬೇಕಿತ್ತು. ಇದೀಗ ಎರಡನೇ ಸಲ ಇಡಿ ವರದಿಯ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ.
ಇದೀಗ ದಂಡು ರೈಲ್ವೆ ನಿಲ್ದಾಣದ ಸಮೀಪದ ನಿವಾಸ, ಸಿಲ್ವರ್ ಓಕ್ ಅಪಾರ್ಟ್ಮೆಂಟ್, ಸದಾಶಿವನಗರದ ಗೆಸ್ಟ್ ಹೌಸ್, ಬನಶಂಕರಿಯ ಜಿಕೆ ಅಸೋಸಿಯೇಟ್ಸ್, ಕಲಾಸಿ ಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಮೇಲೆ ದಾಳಿ ನಡೆಸಲಾಗಿದೆ.
ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರಿನ ಚಾಮರಾಜಪೇಟೆಯ ಶಾಸಕ ಜಮೀರ್ ಅಹಮ್ಮದ್ ( Zameer Ahmed ) ನಿವಾಸಕ್ಕೆ ಎಸಿಬಿ ದಾಳಿ ನಡೆಸಿದೆ.
ಬೆಂಗಳೂರಿನ ದಂಡು ರೈಲ್ವೆ ನಿಲ್ದಾಣ ಬಳಿ ಇರುವ ಭವ್ಯ ಬಂಗಲೆ ಮೇಲೆ ಈ ದಾಳಿ ನಡೆದಿದ್ದು, ಇದೇ ವೇಳೆ ಜಮೀರ್ ಗೆ ಸಂಬಂಧಿಸಿದ 5 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
ಮುಂಬೈ ನಲ್ಲಿ ಟ್ರಾವೆಲ್ಸ್ ಎಜೆನ್ಸಿಯ ಮಾಲೀಕತ್ವ, ವಿದೇಶಿದಲ್ಲಿ ಆಸ್ತಿ, ದುಬೈ ನಲ್ಲಿ ಆಸ್ತಿ ಜೊತೆಗೆ ವ್ಯವಹಾರವಿದೆ ಅನ್ನುವುದು ಜಮೀರ್ ಮೇಲೆ ಬಂದಿರುವ ಆರೋಪ. ಜೊತೆಗೆ ಐಎಂಎ ಹಗರಣದಲ್ಲೂ ಜಮೀರ್ ಹೆಸರು ಕೇಳಿ ಬಂದಿತ್ತು. ಆದರೆ ಮುಂದೆ ಅದೇನಾಯ್ತು ಅನ್ನುವುದು ಗೊತ್ತಿಲ್ಲ. ಇದರೊಂದಿಗೆ ಶ್ರೀಲಂಕಾದಲ್ಲಿ ಶಿಷ್ಯರ ಹೆಸರಿನಲ್ಲಿ ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದಾರೆ ಅನ್ನುವ ಆರೋಪವನ್ನು ಜಮೀರ್ ಎದುರಿಸುತ್ತಿದ್ದಾರೆ.
ಈ ಸಂಬಂಧ ಈ ಹಿಂದೆ ಇಡಿ ಜಮೀರ್ ನಿವಾಸಕ್ಕೆ ದಾಳಿ ನಡೆಸಿತ್ತು. ಇದಾದ ಬಳಿಕ ಸರ್ಕಾರಿ ಯೋಜನೆಯೊಂದರಲ್ಲಿ ಅವ್ಯವಹಾರ ಆಗಿರುವ ಸಂಬಂಧ ಇಡಿಗೆ ದಾಖಲೆ ಲಭ್ಯವಾಗಿತ್ತು. ಈ ಬಗ್ಗೆ ಇಡಿ ಎರಡೆರಡು ಬಾರಿ ವರದಿ ನೀಡಿತ್ತು. ಮೊದಲ ವರದಿಯ ಸಂದರ್ಭದಲ್ಲೇ ಇಡಿ ಎಚ್ಚೆತ್ತುಕೊಳ್ಳಬೇಕಿತ್ತು. ಇದೀಗ ಎರಡನೇ ಸಲ ಇಡಿ ವರದಿಯ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ.
ಇದೀಗ ದಂಡು ರೈಲ್ವೆ ನಿಲ್ದಾಣದ ಸಮೀಪದ ನಿವಾಸ, ಸಿಲ್ವರ್ ಓಕ್ ಅಪಾರ್ಟ್ಮೆಂಟ್, ಸದಾಶಿವನಗರದ ಗೆಸ್ಟ್ ಹೌಸ್, ಬನಶಂಕರಿಯ ಜಿಕೆ ಅಸೋಸಿಯೇಟ್ಸ್, ಕಲಾಸಿ ಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಮೇಲೆ ದಾಳಿ ನಡೆಸಲಾಗಿದೆ.
Discussion about this post