ಅಕ್ರಮ ಆಸ್ತಿ ಹೊಂದಿದ ಹಿನ್ನಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ದಾಳಿಗೆ ಒಳಗಾಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ವಾಸುದೇವ್ ಆರ್. ಎನ್ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
28 ಮನೆ, 16 ನಿವೇಶನ, 5 ಐಷಾರಾಮಿ ಕಾರುಗಳನ್ನು ಹೊಂದಿರುವ ವಾಸುದೇವ ರಾವ್ ರನ್ನು ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬೇನಾಮಿ ಹೆಸರಿನಲ್ಲಿರುವ ಮತ್ತಷ್ಟು ಆಸ್ತಿಗಳಿಗಾಗಿ ಎಸಿಬಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ. ಇದೀಗ ಆಸ್ತಿಯ ವಿವರಗಳನ್ನು ಕೆದಕಿದಷ್ಟು ಹೊಸ ಹೊಸ ದಾಖಲಾತಿಗಳು ಬೆಳಕಿಗೆ ಬರುತ್ತಿವೆ. ಆದಾಯಕ್ಕಿಂತಲೂ ಶೇ. 1434 ಪಟ್ಟು ಹೆಚ್ಚು ಅಕ್ರಮ ಆಸ್ತಿಯನ್ನು ಆರೋಪಿ ಅಧಿಕಾರಿ ಹೊಂದಿರುವುದಾಗಿ ಎಸಿಬಿ ಹೇಳಿದೆ.
ಕೆಂಗೇರಿಯ ಶಾಂತಿ ವಿಲಾಸ ಲೇಔಟ್ನ ಚರ್ಚ್ ಬಳಿ 1 ಮನೆ, ಮಲ್ಲೇಶ್ವರಂನ 18ನೇ ಕ್ರಾಸ್ನಲ್ಲಿ ಹೆಂಡತಿ ಹೆಸರಿನಲ್ಲಿ 1 ಮನೆ, ಕೆಂಗೇರಿ ಉಪನಗರದ 3ನೇ ಮುಖ್ಯರಸ್ತೆಯಲ್ಲಿ ಒಂದು ಮನೆ, ಸೋಂಪುರ ಗ್ರಾಮದಲ್ಲಿ ಪುತ್ರನ ಹೆಸರಿನಲ್ಲಿ ಮನೆ, ಮಾಕಳಿ ಗ್ರಾಮದಲ್ಲಿ 2 ಎಕರೆ 8 ಗುಂಟೆ ಜಮೀನು, 4 ಸೈಟ್, ಮಾಕಳಿಕುಪ್ಪೆ ಗ್ರಾಮದಲ್ಲಿ 1 ಎಕರೆ 38 ಗುಂಟೆ ಜಮೀನು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಹೊಸಕೆರೆಹಳ್ಳಿ ಬ್ಯಾರಮೌಂಟ್ ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್.
ಅರ್ಕಾವತಿ ಲೇಔಟ್ನ 7ನೇ ಬ್ಲಾಕ್ನಲ್ಲಿ 3 ಬಿಡಿಎ ನಿವೇಶನ, ಯಲಹಂಕ ಉಪನಗರದ 1 & 2ನೇ ಹಂತದಲ್ಲಿ HIG ಸೈಟ್, ಕೆಂಗೇರಿ ಉಪನಗರದ 1ನೇ ಹಂತದಲ್ಲಿ ನಿವೇಶನ, ಜ್ಞಾನಭಾರತಿಯ ನಾಗದೇವನಹಳ್ಳಿಯಲ್ಲಿ ಬಿಡಿಎ ನಿವೇಶನ, ವಿಶ್ವೇಶ್ವರಯ್ಯ ಲೇಔಟ್ನಲ್ಲಿ ವಾಸುದೇವ್ರ 2 ನಿವೇಶನ, ಹೆಸರಘಟ್ಟ, ಕೆಂಗೇರಿ ಬಳಿಯ ಸೂಲಿಕೆರೆಯಲ್ಲಿ ನಿವೇಶನ
ಜೊತೆಗೆ ಬೆಂಜ್, ಸ್ಕೋಡಾ, ವೋಲ್ವೋ, ಟಾಟಾ ಕಂಪನಿಯ 5 ಕಾರು, 925.69 ಗ್ರಾಂ ಚಿನ್ನಾಭರಣ, 9 ಕೆಜಿ ಬೆಳ್ಳಿ ವಸ್ತುಗಳು ಪತ್ತೆ ಆಗಿವೆ. 17.27 ಲಕ್ಷ ನಗದು, ಅಕೌಂಟ್ನಲ್ಲಿ 1.31 ಕೋಟಿ ಹಣ ಲಭಿಸಿದೆ.
Discussion about this post