ಚುನಾವಣೆ ಹೊಸ್ತಿಲಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಗೆ ( zameer ahmed khan ) ಸಂಕಷ್ಟ ಶುರುವಾಗಿದೆ. ಮೊನ್ನೆ ಮೊನ್ನೆ ಚಾಮರಾಜಪೇಟೆ ಆಟದ ಮೈದಾನ ವಿಚಾರದಲ್ಲೂ ಜಮೀರ್ ಸದ್ದು ಮಾಡಿದ್ದರು
ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಸಂಬಂಧ ವಿಚಾರಣೆಗೆ ಹಾಜರಾಗಬೇಕು ಎಂದು ಚಾಮರಾಜಪೇಟೆ ಶಾಸಕ ಜಮೀರ್ ಆಹಮದ್ ಖಾನ್ ( zameer ahmed khan ) ಅವರಿಗೆ ಎಸಿಬಿ ನೋಟಿಸ್ ಜಾರಿ ಮಾಡಿದೆ. ನೋಟಿಸ್ ತಲುಪಿದ 10 ದಿನಗಳ ಒಳಗಾಗಿ ತನಿಖಾಧಿಕಾರಿ ಮುಂದೆ ಆರೋಪಿಗಳಿಗೆ ಪೂರಕ ದಾಖಲೆ ಒದಗಿಸುವಂತೆ ಸೂಚಿಸಲಾಗಿದೆ. ಇದೇ ನೋಟಿಸ್ ಅಕ್ರಮ ಆಸ್ತಿಯ ಕುರಿತಂತೆ ಹತ್ತಾರು ಆರೋಪಗಳನ್ನು ಎಸಿಬಿ ಹೊರಿಸಿದೆ.
ಎಸಿಬಿ ನೋಟಿಸ್ ಹಿನ್ನಲೆಯಲ್ಲಿ ಸೋಮವಾರ ಅಥವಾ ಮಂಗಳವಾರ ಜಮೀರ್ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿದೆ. ಈ ಹಿಂದೆ ಜುಲೈ 8 ರಂದು ದಾಖಲೆ ಸಲ್ಲಿಸುವಂತೆ ಎಸಿಬಿ ಸೂಚಿಸಿತ್ತು. ಆದರೆ ಬಕ್ರೀದ್ ಹಬ್ಬದ ಬಳಿಕ ವಿಚಾರಣೆಗೆ ಹಾಜರಾಗುವುದಾಗಿ ಜಮೀರ್ ಹೇಳಿದ್ದರು. ಈ ಕಾರಣದಿಂದ ಮತ್ತೆ ಎಸಿಬಿ ನೋಟಿಸ್ ನೀಡಿದೆ.
ಇದನ್ನೂ ಓದಿ : jagdeep dhankhar vice president : ಉಪರಾಷ್ಟ್ರಪತಿ ಚುನಾವಣೆ : NDA ಅಭ್ಯರ್ಥಿಯಾಗಿ ಜಗದೀಪ್ ಧನ್ಖರ್
ಮಾಹಿತಿಯ ಪ್ರಕಾರ ಆದಾಯಕ್ಕಿಂತ ಶೇ 2031 ಹೆಚ್ಚು ಆಸ್ತಿಯನ್ನು ಜಮೀರ್ ಹೊಂದಿದ್ದಾರೆ ಅನ್ನಲಾಗಿದೆ. ಎಸಿಬಿ ಲೆಕ್ಕಕ್ಕೆ ಸಿಕ್ಕಿರುವ ಪ್ರಕಾರ 87.44 ಕೋಟಿ ರೂಪಾಯಿ ಹೆಚ್ಚು ಅಕ್ರಮ ಆಸ್ತಿಯನ್ನು ಹೊಂದಿದ್ದಾರೆ. July 6 ರಂದು ಅಕ್ರಮ ಆಸ್ತಿ ಆರೋಪದಡಿಯಲ್ಲಿ ಜಮೀರ್ ಮನೆ, ನ್ಯಾಶನಲ್ ಟ್ರಾವೆಲ್ಸ್ ಕಚೇರಿ, ಅತಿಥಿಗೃಹ ಸೇರಿ 5 ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು.
Discussion about this post