ಸಕಲೇಶಪುರದಿಂದ ಸುಬ್ರಹ್ಮಣ್ಯ ರಸ್ತೆ ನಿಲ್ದಾಣ ನಡುವೆ ಶಿರಾಡಿ ಘಾಟ್ ಪ್ರದೇಶದಲ್ಲಿ ರೈಲು ಹಳಿಗಳ ಮೇಲೆ ಕುಸಿದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಆದರೆ ಬಿದ್ದಿರುವ ಮಣ್ಣಿನ ಪ್ರಮಾಣ ಜಾಸ್ತಿ ಹೆಚ್ಚಾಗಿರುವ ಕಾರಣ ಮಂಗಳೂರು ಬೆಂಗಳೂರು ನಡುವೆ ರೈಲು ಸಂಚಾರವನ್ನು ಸೆಪ್ಟಂಬರ್ 15ರ ತನಕ ರೈಲ್ವೆ ಇಲಾಖೆ ರದ್ದುಗೊಳಿಸಿದೆ.
ಫಾಟ್ ಪ್ರದೇಶದ 56 ಕಿಮೀ ಮಾರ್ಗದಲ್ಲಿ ಒಟ್ಟು 68 ಕಡೆ ಭೂಕುಸಿತವಾಗಿ ಹಳಿ ಮೇಲೆ ಮಣ್ಣು ತುಂಬಿಕೊಂಡಿದೆ. ಮಾತ್ರವಲ್ಲದೆ ಹಲವು ಕಡೆ ಹಳಿಗಳಿಗೂ ಹಾನಿಯಾಗಿದೆ.
ಈ ಹಿಂದೆ ಆಗಸ್ಟ್ 31 ರ ತನಕ ರೈಲು ಸಂಚಾರ ರದ್ದುಗೊಳಿಸಲಾಗಿತ್ತು, ಇದೀಗ ಸೆಪ್ಟಂಬರ್ 15ಕ್ಕೆ ವಿಸ್ತರಿಸಲಾಗಿದೆ.
ಈಗಾಗಲೇ 40 ಪ್ರದೇಶದಲ್ಲಿ ಮಣ್ಣು ತೆರವು ಮಾಡಲಾಗಿದೆ. ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ.ಯ ಆದರೆ ಆಗೊಮ್ಮೆ ಈಗೊಮ್ಮೆ ಸುರಿಯುವ ಮಳೆ ಕೆಲಸಕ್ಕೆ ಅಡ್ಡಿ ಮಾಡುತ್ತಿದೆ.
ಈ ಕಾರ್ಯ ಮುಗಿಯಲು ಇನ್ನು 15 ರಿಂದ 20 ದಿನ ಬೇಕು.
ಈ ಕಾರಣದಿಂದ ಬೆಂಗಳೂರು – ಕಣ್ಣೂರು/ಕಾರವಾರ, ಮಂಗಳೂರು – ಯಶವಂತಪುರ ಸೇರಿದಂತೆ ಎರಡು ಮಹಾನಗರಗಳ ನಡುವಿನ ರೈಲ್ವೆ ಸಂಪರ್ಕ ಕೆಲ ದಿನಗಳ ಕಾಲ ಕಡಿದು ಹೋಗಲಿದೆ.
Discussion about this post